ಬೆಳಗಾವಿ : ರಾಜ್ಯದಲ್ಲಿ ಸೇವಾನಿರತ ಪೊಲೀಸ ಇಲಾಖೆಗೆ ಪೂರಕವಾಗುವ ನಿಟ್ಟಿನಲ್ಲಿ ರಾಘವೇಂದ್ರ ಔರಾದಕರ್ ಅವರು ನೀಡಿರುವ ವರದಿಯನ್ನು ಸಂಪೂರ್ಣವಾಗಿ ಜಾರಿಗೋಳಿಸಲು ಒತ್ತಾಯಿಸಿ ಬರುವ ಜನೇವರಿ 28ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯರ್ದಶರ್ಿ ಮುರಸಿದ್ದ ಬಾಳೆಕುಂದ್ರಿ ಅವರು ಇಂದಿಲ್ಲಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಬೆಳಿಗ್ಗೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಎಲ್ಲ ರಾಜ್ಯಗಳಲ್ಲಿ ಕನರ್ಾಟಕದ ಪೊಲೀಸರು ಉತ್ತಮವಾಗಿ ಕಾರ್ಯ ಮಾಡುತ್ತಿದ್ದಾರೆ. ಈ ವರದಿಯಲ್ಲಿ ಕೆಲವು ಅಂಶಗಳ ಕುರಿತು ಸೇವಾನಿರತ ಪೊಲೀಸ ಸಿಬ್ಬಂದಿಗಳನ್ನು ಕೇಳಿದಾಗ ಅವರಿಂದ ನಿರಾಶೆದಾಯಕ ಉತ್ತರ ಬಂದಿದೆ. ಔರಾದ್ಕರ್ ವರದಿಯನ್ನು ಸರಕಾರದ ಕೈ ಸೇರಿ ಶೇ. 30ರಿಂದ 35ರಷ್ಟು ಹೆಚ್ಚು ವೇತನಕ್ಕೆ ಶಿಪಾರಸ್ಸು ಮಾಡಲಾಗಿದೆ ಎಂದು ಹಿಂದಿನ ಗೃಹ ಮಂತ್ರಿಗಳು ಹೇಳಿದ್ದರು.
ಅಲ್ಲದೆ ಈಗ ಸದ್ಯ ಔರಾದ್ಕರ್ ವರದಿಯನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ಹಾಗಾದರೆ ಪೊಲೀಸ ಇಲಾಖೆಯವರಿಗೆ ಅನ್ಯಾಯವಾಗುತ್ತಿರುವದು ಏಕೆ. ಕೊಟ್ಟ ವರದಿಯಲ್ಲಿ ಲೋಪ ಇತ್ತಾ ಅಥವಾ ಸರಕಾರ ಜಾರಿ ಮಾಡುವ ಸಂದರ್ಭದಲ್ಲಿ ತನಗೆ ಬೇಕಾದ ರೀತಿಯಲ್ಲಿ ತಿರುಚಲಾಗಿದೆಯಾ ಎಂಬುವದು ತಿಳಿಯಬೇಕಾಗಿರುವದು ಈ ಹೋರಾಟ ಉದ್ದೇಶವಾಗಿದೆ ಎಂದರು. ಪ್ರಾರಂಭಿಕವಾಗಿ ಪೊಲೀಸ ಇಲಾಖೆಗೆ ತೆಂಲಗಾನ ಮತ್ತು ಕೇರಳ ಮಾದರಿಯಲ್ಲಿ ಹೆಚ್ಚಿನ ಶ್ರೇಣಿ ವೇತನ ನೀಡುವಂತೆ ಒತ್ತಾಯಿಸಲಾಗಿತ್ತು. ಕಳೆದ 3 ವರ್ಷಗಳಿಂದ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಪೊಲೀಸ ಇಲಾಖೆಗೆ ನಿರಾಶೆ ಉಂಟು ಮಾಡಲಾಗಿದೆ. ಈ ವರದಿಯು ಕುಂತತ್ರದಿಂದ ಹಾಗೂ ಅವಾಸ್ತವಿಕವಾಗಿದೆ. ರಾಜ್ಯದಲ್ಲಿ ಹೊಸ ಸರಕಾರ ಬಂದ ಬಳಿಕ ಪೊಲೀಸರಲ್ಲಿ ಹೊಸ ಭರವಸೆಗಳು ಮೂಡಿದ್ದವು. ಆದರೆ ಆ ಭರವಸೆಗಳು ಈಗ ಕಮರಿ ಹೋಗಿವೆ ಎಂದರು.
ಅಲ್ಲದೆ ದುಷ್ಟ, ಕ್ರೂರ್ರ ವ್ಯಕ್ತಿಗಳನ್ನು ಸೆದೆ ಬಡಿಯಲು ಹಾಗೂ ಸಮಾಜದಲ್ಲಿನ ಶಾಂತಿಗಾಗಿ ಹಗಲಿರುಳು ಶ್ರಮಿಸುವ ಪೊಲೀಸ ಇಲಾಖೆಗೆ ಎಲ್ಲ ಇಲಾಖೆಯವರಂತೆ ವೇತನ ಹಾಗೂ ರಜೆ ಸೇರಿದಂತೆ ಎಲ್ಲ ಸೇವೆಗಳು ಸಿಗಬೇಕು ಎನ್ನುವ ಉದ್ದೇಶದಿಂದ ಈ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಲ್ಲದೆ ಶೀಘ್ರವಾಗಿ ಸರಕಾರ ಸರಿಸಮಾನ ವೇತನ ನೀಡದಿದ್ದರೆ ಬರುವ 28ರಂದು ಬೆಂಗಳೂರಿನಲ್ಲಿ ನಡೆಸುವದಾಗಿ ಮುರಸಿದ್ದ ಬಾಳೆಕುಂದ್ರಿ ಅವರು ನುಡಿದರು.
ಇಂದಿನ ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ ಬೆನಕಟ್ಟಿ, ಬಸವರಾಜ ಕುಕಡೋಳ್ಳಿ, ಬಸವರಾಜ ದ್ಯಾಮನ್ನವರ, ನಗೇಶ ಬಡಸ್ ಸೇರಿದಂತೆ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.