ಅಗುಸ್ತಾ ವೆಸ್ಟ್‌ಲ್ಯಾಂಡ್ ಪ್ರರಕಣ: ಸುಪ್ರೀಂ ಕೋರ್ಟ್ ನಿಂದ ಕ್ರಿಶ್ಚಿಯನ್ ಮಿಶೆಲ್‍ ಜಾಮೀನು ಅರ್ಜಿ ತಿರಸ್ಕೃತ

ನವದೆಹಲಿ, ಏಪ್ರಿಲ್ 22,ಅಗುಸ್ತಾ ವೆಸ್ಟ್‌ಲ್ಯಾಂಡ್  ಹೆಲಿಕಾಪ್ಟರ್ ಖರೀದಿ ಹಗರಣ ಪ್ರಕರಣದಲ್ಲಿ ಕ್ರಿಶ್ಚಿಯನ್ ಮಿಶೆಲ್‍ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.
‘ಅಗುಸ್ತಾ ವೆಸ್ಟ್‌ಲ್ಯಾಂಡ್ ಖರೀದಿ ಪ್ರಕರಣದಲ್ಲಿ ಆರೋಪಿ ಕ್ರಿಶ್ಚಿಯನ್ ಮಿಶೆಲ್‍ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸುತ್ತಿದೆ.’ ಎಂದು ನ್ಯಾಯಮೂರ್ತಿ ಎಸ್.ಕೆ.ಕೌಲ್ ನೇತೃತ್ವದ ನ್ಯಾಯಪೀಠ ಹೇಳಿದೆ.‘ತನ್ನ ವಯಸ್ಸು 59 ವರ್ಷ ಮೀರಿದ್ದು, ಆರೋಗ್ಯ ಸರಿಯಾಗಿಲ್ಲ. ಈ ಹಿಂದೆ ಅನೇಕ ಬಾರಿ ಅನಾರೋಗ್ಯಕ್ಕೆ ತುತ್ತಾಗಿದ್ದೇನೆ. ಇದೀಗ ಜಾಮೀನು ಸಿಗದಿದ್ದರೆ ಕೊರೋನವೈರಸ್ ಸೋಂಕಿಗೆ ಸುಲಭವಾಗಿ ತುತ್ತಾಗುತ್ತೇನೆ.’ ಎಂದು ಮಿಶೆಲ್ ಮನವಿ ಅರ್ಜಿಯಲ್ಲಿ ಹೇಳಿದ್ದಾನೆ.ಜೈಲಿನಲ್ಲಿದ್ದಾಗ ಕೊವಿದ್-19 ಸೋಂಕಿಗೆ ತುತ್ತಾಗಬಹುದು ಎಂಬ ಆತಂಕ ವ್ಯಕ್ತಪಡಿಸಿ, ಜಾಮೀನು ನೀಡುವಂತೆ ಕೋರಿ ಸಲ್ಲಿಸಲಾಗಿದ್ದ  ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ ನಂತರ ಮಿಶೆಲ್‍ ಸುಪ್ರೀಂ ಕೋರ್ಟ್‍ ಮೆಟ್ಟಿಲೇರಿದ್ದ.  ಮೈಕೆಲ್ ಪ್ರಕರಣವು ‘ಮಧ್ಯಂತರ ಪರಿಹಾರ ನೀಡುವ ಮಾನದಂಡಗಳಡಿ ಬರುವುದಿಲ್ಲ.’ ಎಂಬ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್‍ ಎತ್ತಿಹಿಡಿದಿದೆ.