ಲೆಕ್ಕ ಪರಿಶೋಧನೆ ಗ್ರಾಮ ಸಭೆ, ರೋಜಗಾರ ದಿನಾಚರಣೆ

ಹಾವೇರಿ  02:  ತಾಲೂಕಿನ ಬಸಾಪುರ ಗ್ರಾಮ ಪಂಚಾಯತಿಯ  ಪ್ರಸಕ್ತ ಸಾಲಿನ  ಎರಡನೇ  ಸುತ್ತಿನ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆ  ಹಾಗೂ ರೋಜಗಾರ ದಿನಾಚರಣೆ ಕಾರ್ಯಕ್ರಮ  ಸೋಮವಾರ ಬಸಾಪುರ ಗ್ರಾಮದಲ್ಲಿ ಜರುಗಿತು.

ತಾಲೂಕ ಸಾಮಾಜಿಕ ಲೆಕ್ಕ ಪರಿಶೋಧನೆ ಅಧಿಕಾರಿಗಳಾದ ಸಂಪತ್ತಕುಮಾರ ಪೂಜಾರ ಅವರು ಸಾಮಾಜಿಕ ಲೆಕ್ಕ ಪರಿಶೋಧನೆ ಕುರಿತು ಮಾಹಿತಿ ನೀಡಿದರು.

 ತಾಲೂಕ ಪಂಚಾಯತಿಯ ಮಾಹಿತಿ ಶಿಕ್ಷಣ ಮತ್ತು ಸಂವಹನ ಅಧಿಕಾರಿಯಾದ ಗಿರೀಶ ಎಸ್ ಬೆನ್ನೂರ  ಅವರು ರೋಜಗಾರ ದಿನಾಚರಣೆ ಹಾಗೂ  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ  ವಿವರವಾದ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲ ಸದಸ್ಯರುಗಳು,  ತಾಲೂಕ ನೋಡಲ್ ಅಧಿಕಾರಿಗಳಾದ ನಿಂಗನಗೌಡ ಹೆಚ್ ಕರೇಗೌಡ್ರ,  ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳಾದ  ಎನ್.ಎಮ್.ಬಡಿಗೇರ, ವಿವಿಧ ಇಲಾಖೆಯವರು, ಆಶಾ ಕಾರ್ಯಕತರ್ೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಉದ್ಯೋಗ ಚೀಟಿ ಪಡೆದ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.