‘ಸಕೂಚಿ’ ಫೆ ೧೭ರಂದು ಆಡಿಯೋ ರಿಲೀಸ್

ಬೆಂಗಳೂರು, ಫೆ 05 , ಕನ್ನಡದಲ್ಲಿ ವಿಭಿನ್ನ ಶೀರ್ಷಿಕೆಗಳ ಒಂದರ ಹಿಂದೊಂದು ಸಿದ್ಧವಾಗುತ್ತಿದ್ದು, ಆ ‘ಸಾಕೂಚಿ’ ಸೇರ್ಪಡೆಯಾಗಿದೆ ಬಿ ಸಿ ಅಶ್ವಿನ್ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು  ಇದೇ ತಿಂಗಳ ೧೭ರಂದು ಆಡಿಯೋ ರಿಲೀಸ್ ಆಗಲಿದೆಬೆಂಗಳೂರು, ಕೊಟ್ಟಿಗೆಹಾರ, ಚಿತ್ರದುರ್ಗ ಹಾಗೂ ಹಿರಿಯೂರಿನಲ್ಲಿ ೬೫ ದಿನಗಳ ಚಿತ್ರೀಕರಣ ನಡೆದಿದೆ ಮಹಾವೀರ್ ಪ್ರಸಾದ್ ಹಾಗೂ ಮಧುಕರ್ ಜೆ ಈ ಚಿತ್ರದ ಸಹ ನಿರ್ಮಾಪಕರುಹಾರರ್ ಕಥಾ ಹಂದರವುಳ್ಳ ಈ ಚಿತ್ರವನ್ನು ಅಶೊಕ್ ಎಸ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು, ೪೦ಕ್ಕೂ ಹೆಚ್ಚು ನಿಜವಾದ ಮಂಗಳಮುಖಿಯರು ಅಭಿನಯಿಸಿರುವುದು ವಿಶೇಷ.  ಗಣೇಶ್ ಗೋವಿಂದಸ್ವಾಮಿ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಸಂಚಿತ್ ಹೆಗ್ಡೆ, ಆಂತೋಣಿ ದಾಸ್, ಅನನ್ಯ ಭಟ್, ಕಾರ್ತಿಕ್ ಹಾಡುಗಳನ್ನು ಹಾಡಿದ್ದಾರೆ. ಹೃದಯ ಶಿವ ಗೀತರಚನೆ ಮಾಡಿದ್ದಾರೆ. ಆನಂದ್ ನುಂದಳೇಶ್ ಛಾಯಾಗ್ರಹಣ, ಮಹೇಶ್ ತೊಗಟ ಸಂಕಲನ, ಕುಂಫ಼ು ಚಂದ್ರು ಸಾಹಸ ನಿರ್ದೇಶನ ಹಾಗೂ ಆನಂದ್ ಯಾದವ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.   ‘ಪದ್ಮಾವತಿ‘ ಧಾರಾವಾಹಿ ಖ್ಯಾತಿಯ ತ್ರಿವಿಕ್ರಮ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಡಯಾನಮೇರಿ, ಡಾಲಿ, ಸುಕುಮಾರ್, ಸಾರಿಕಾ, ಸುಮನ್ ರಾವ್ ಮುಂತಾದವರಿದ್ದಾರೆ.