ಆಕರ್ಷಕ ಸ್ಥಿರ, ಹಗ್ಗದ ಮಲ್ಲಕಂಬ ಪ್ರದರ್ಶನAttractive static, rope wreath display
Lokadrshan Daily
1/6/25, 12:04 PM ಪ್ರಕಟಿಸಲಾಗಿದೆ
ಕೊಪ್ಪಳ 07: ಆನೆಗೊಂದಿ ಉತ್ಸವದ ಅಂಗವಾಗಿ ಕನರ್ಾಟಕ ಅಮೆಚರ್ ಮಲ್ಲಕಂಬ ಸಂಸ್ಥೆ ಲಕ್ಷ್ಮೇಶ್ವರ, ತಂಡದ ವತಿಯಿಂದ ಆಕರ್ಷಕ ಮಲ್ಲಕಂಬ ಪ್ರದರ್ಶನ ನಡೆಯಿತು.
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲ್ಲೂಕಿನ ಆನೆಗೊಂದಿ ಉತ್ಸವದ ನಿಮಿತ್ತ ಇಂದು (ಜ.7) ಹಮ್ಮಿಕೊಳ್ಳಲಾದ ಮಲ್ಲಕಂಬ ಪ್ರದರ್ಶನಕ್ಕೆ ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂಜನಾದೇವಿ ಅವರು ಚಾಲನೆ ನೀಡಿದರು.
ತುಳಸಗಿ, ಬಾಗಲಕೋಟೆ, ಲಕ್ಷ್ಮೇಶ್ವರ, ಕಲದಗಿ, ರಾಮಗಿರಿ ಊರುಗಳನ್ನೊಳಗೊಂಡ ಕನರ್ಾಟಕ ಅಮೆಚರ್ ಮಲ್ಲಕಂಬ ಸಂಸ್ಥೆ ಲಕ್ಷ್ಮೇಶ್ವರ, ಈ ಸಂಸ್ಥೆಯ ಸಹಾಸಿಗಳಿಂದ ಹಗ್ಗದ ಮಲ್ಲಕಂಬ ಪ್ರದರ್ಶನದಲ್ಲಿ 37 ಜನ ಬಾಲಕಿಯರು ಹಾಗೂ ಸ್ಥಿರ ಮಲ್ಲಕಂಬ ಪ್ರದರ್ಶನದಲ್ಲಿ 36 ಜನ ಬಾಲಕರು ಪಾಲ್ಗೊಂಡು ಯೋಗ ಸೇರಿದಂತೆ ವಿಭಿನ್ನ ರೀತಿಯಲ್ಲಿ ವ್ಯಾಯಾಮಗಳನ್ನು ಮಾಡುವುದರ ಮೂಲಕ ಸಾರ್ವಜನಿಕರ ಮನ ಸೆಳೆದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕರು ಹಾಗೂ ಆನೆಗೊಂದಿ ಉತ್ಸವ ಕ್ರೀಡಾ ಸಮಿತಿ ಅಧ್ಯಕ್ಷ ಆರ್.ಜಿ ನಾಡಗೀರ, ಜಿಲ್ಲೆಯ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಗಂಗಾವತಿ ತಹಶೀಲ್ದಾರ ಎಲ್.ಡಿ ಚಂದ್ರಕಾಂತ, ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿ ಚಂದ್ರಮೋಹನ್, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ರಾಥೋಡ್, ಕನರ್ಾಟಕ ಅಮೆಚರ್ ಮಲ್ಲಕಂಬ, ಲಕ್ಷ್ಮೇಶ್ವರ ಸಂಸ್ಥೆಯ ಗೌರವ ಕಾರ್ಯದಶರ್ಿ ಎಸ್.ಎಫ್. ಕೊಡ್ಲಿ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.