ಒತ್ತಡದಲ್ಲೂ ನ್ಯಾಯವಾದಿಗಳು ಅಧ್ಯಾತ್ಮಿಕತೆಯತ್ತ ಗಮನ ಹರಿಸುತ್ತಿರುವುದು ಮಾದರಿ

ಬೈಲಹೊಂಗಲ 30: ನ್ಯಾಯವಾದಿಗಳ ತಮ್ಮ ಒತ್ತಡದ ಜೀವನದಲ್ಲಿ ಅಧ್ಯಾತ್ಮಿಕತೆಯತ್ತ ಗಮನ ಹರಿಸಿ ನ್ಯಾಯಾಲಯ ಸಂಕೀರ್ಣದಲ್ಲಿ ಎಲ್ಲವನ್ನು ಮರೆತು ಭಕ್ತಿಭಾವದಿಂದ ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸುತಿರುವುದು ರಾಜ್ಯ ನ್ಯಾಯವಾದಿಗಳಿಗೆ ಮಾದರಿಯಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶೆ ಕಾವೇರಿ ಕಲ್ಮಠ ಹೇಳಿದರು.

                ಅವರು ಸೋಮವಾರ  ಸಂಜೆ ನಡೆದ ಪಟ್ಟಣದ ಕೋರ್ಟ ಆವರಣದಲ್ಲಿರುವ ಕರೆಮ್ಮದೇವಿ ಜಾತ್ರಾ ಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿನಾನು ರಾಜ್ಯದ ಆರು ನ್ಯಾಯಾಲಯಗಳಲ್ಲಿ  ಸೇವೆ ಸಲ್ಲಿಸುವ ವೇಳೆಯಲ್ಲಿ ಇಂತಹ ಧಾಮರ್ಿಕ ಕಾರ್ಯಕ್ರಮಗಳನ್ನು ಎಂದು ನೋಡಿಲ್ಲ. ಬೈಲಹೊಂಗಲ ನ್ಯಾಯಾಲಯದ ನ್ಯಾಯಾವಾದಿಗಳ ಸಂಘದಿಂದ ಹಮ್ಮಿಕೊಂಡ ಜಾತ್ರಾ ಮಹೋತ್ಸವ ಅತೀ ವಿಶೇಷವಾಗಿ ಆಚರಿಸಿ  ಸಾಂಸ್ಕೃತಿಕ  ಹಾಗೂ ವಿವಿಧ ಪಂದ್ಯಾಟಗಳನ್ನು ನ್ಯಾಯವಾದಿಗಳಿಗೆ ಮತ್ತು ಸಿಬ್ಬಂದಿಗೆ ಆಯೋಜಿಸಿರುವುದು ಅತ್ಯಂತ ಶ್ಲಾಘನೀಯವಾದದ್ದು ಎಂದರು.

                    ಅತಿಥಿಯಾಗಿ ಆಗಮಿಸಿದ ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರ ಮಾತನಾಡಿ, ನಾನು ವಕೀಲನಾಗಿ ಬೈಲಹೊಂಗಲ ವಕೀಲರ ಸಂಘದಲ್ಲಿ ಕಾರ್ಯ ನಿರ್ವಹಿಸಿದ್ದು ನನಗೆ ಹೆಮ್ಮೆ ತಂದಿದೆಸಕರ್ಾರದಿಂದ ಬರುವ  ಸಹಾಯ ಸವಲತ್ತುಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ತಮ್ಮೆಲ್ಲರ ಸಹಕಾರ, ಮಾಗದರ್ಶನ ಮತ್ತು ಕರೇಮ್ಮಾದೇವಿಯ ಕೃಪೆ ನನ್ನ ಮೇಲಿರಲಿ ಎಂದರು.

                ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಕಿವಡಸನ್ನವರ ಮಾತನಾಡಿ, ನ್ಯಾಯವಾದಿಗಳು ಸಮಾಜದ ನೊಂದ ವ್ಯಕ್ತಿಗಳಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ತಮ್ಮ ಆರೋಗ್ಯ, ಮನರಂಜನೆ ಮತ್ತು ಧಾಮರ್ಿಕ ವಿಚಾರಗಳನ್ನು ಮರೆಯುವ ಸಂದರ್ಭದಲ್ಲಿ ಇಂತಹ ಜಾತ್ರಾ ಮಹೋತ್ಸವ, ಪಂದ್ಯಾಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವದರಿಂದ ಸಮಾಜದಲ್ಲಿ ನ್ಯಾಯವಾದಿಗಳು ಮಾದರಿಯಾಗಿ ಬದುಕಲು ಸಾಧ್ಯವಾಗಲಿದೆ ಎಂದರು.

                ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಮ್.ಆರ್.ಮೆಳವಂಕಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

                ವೇದಿಕೆ ಮೇಲೆ ಹೆಚ್ಚುವರಿ ದಿವಾಣಿ ನ್ಯಾಯಾಧೀಶೆ ಸೌಭಾಗ್ಯ ಭೂಶೇರನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಕೆ.ಎಸ್.ಕುಲಕಣರ್ಿ, ಕಾರ್ಯದಶರ್ಿ ಆಯ್.ಬಿ.ಮೇಟಿ ಇದ್ದರು. ನ್ಯಾಯವಾದಿಗಳ ಸಂಘದ ಸದಸ್ಯರಾದ ವಿಜಯ ಪತ್ತಾರ, ಎಸ್.ಸಿ.ಕರೀಕಟ್ಟಿ, ಸಿ..ವಣ್ಣೂರ, ಕುಮಾರಿ ಆರ್.ಬಿ. ಅಂಗಡಿ, ಬಿ.ಆರ್.ಶಿವಬಸನ್ನವರ, .ಜಿ.ಕರಬನ್ನವರ ಹಿರಿಯ ವಕೀಲರಾದ ಆರ್..ಪಾಟೀಲ, ಎಸ್.ಸಿ.ಆನಗೋಳ ಹಾಗೂ ಡಿ.ಎಸ್.ಬೊಂಗಾಳೆ, ಎಮ್.ಎಮ್.ಅಬ್ಬಾಯಿ, ದೀಪಕ ಸಂಗೊಳ್ಳಿ, ಬಸವರಾಜ ದೋತ್ರದ, ಎಸ್.ಜಿ.ಬೂದಯ್ಯನವರಮಠ, ಎಫ್.ಎಸ್.ಸಿದ್ದನಗೌಡರ, ಕುಬೇರ ಅರ್ಕಸಾಲಿ ಮತ್ತಿತರರು ಇದ್ದರು.

                ಮಾನಪ್ಪ ಬಡಿಗೇರ ಅವರ ವೃಂದ ಗಾಯನ ಹಾಗೂ ವಕೀಲ ಬಿ.ಬಿ.ಹುಲಮಮನಿ ಅವರ ಜಾನಪದ ಗೀತೆಗಳು ಕೇಳುಗರನ್ನು ಮಂತ್ರ ಮುಗ್ದವನ್ನಾಗಿಸಿದವು. ಹಳಿಯಾಳದ ಸಿದ್ದಪ್ಪ ಬಿರಾದಾರ ನಡೆಸಿ ಕೊಟ್ಟ ತೊಗಲು ಗೊಂಬೆಯಾಟ ಎಲ್ಲರನ್ನು ಆಕಷರ್ಿಸಿತು. ಮಲ್ಲಿಕಾಜರ್ುನ ನಿಚ್ಚಣ್ಣಿ ಹಾಗೂ ಸಂಗಡಿಗರಿಂದ ಭಜನಾ ಪದಗಳು ನಡೆದವು.

                ಸಹ ಕಾರ್ಯದಶರ್ಿ ಡಿ.ವಾಯ್.ಗರಗದ ಸ್ವಾಗತಿಸಿದರು. ಆಯ್.ಬಿ.ಮೇಟಿ ವಂದಿಸಿದರು. ವಿಜಯ ಪತ್ತಾರ ನಿರೂಪಿಸಿದರು.

                ಮಂಗಳವಾರ ಕರೆಮ್ಮದೇವಿ ಜಾತ್ರೆಯು ಸಡಗರ ಸಂಭ್ರಮದಿಂದ ನಡೆಯಿತು.   ಬೆಳಿಗ್ಗೆ ದೇವಿಗೆ ರುದ್ರಾಭಿಷೇಕ ಹಾಗೂ ವಿವಿಧ ಪೂಜಾ ಕಾರ್ಯಕ್ರಮ ಜರುಗಿದವು. ನಂತರ ಮಹಾಪ್ರಸಾದ ನಡೆಯಿತುನ್ಯಾಯವಾದಿಗಳು ಸಂಘದ ಸರ್ವ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತಾಧಿಗಳು ಇದ್ದರು