ಆಧ್ಯಾತ್ಮಿಕ ಜೀವನದಿಂದ ಮಾನಸಿಕ ನೆಮ್ಮದಿ ಪ್ರಾಪ್ತಿ: ಶಾಸಕ ರಾಜುಗೌಡ

Attainment of mental peace through spiritual life: MLA Rajugowda

ಆಧ್ಯಾತ್ಮಿಕ ಜೀವನದಿಂದ ಮಾನಸಿಕ ನೆಮ್ಮದಿ ಪ್ರಾಪ್ತಿ: ಶಾಸಕ ರಾಜುಗೌಡ  

ತಾಳಿಕೋಟಿ 28: ಇಂದು ನಮಗೆ ಜೀವನಕ್ಕೆ ಅಗತ್ಯ ಇರುವ ಎಲ್ಲ ಸೌಕರ್ಯಗಳು ನಮ್ಮ ಬಳಿ ಇವೆ, ಆದರೆ ನಮಗೆ ಮಾನಸಿಕ ನೆಮ್ಮದಿ ಸಮಾಧಾನ ಇಲ್ಲ ಅದು ನಮಗೆ ಇಂತಹ ಆಧ್ಯಾತ್ಮಿಕ ಚಿಂತನೆಗಳನ್ನು ಕೇಳುವುದರಿಂದ ಸಿಗುತ್ತದೆ ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಹೇಳಿದರು. ಪಟ್ಟಣದ ಶ್ರೀ ಶರಣ ಮುತ್ಯಾ ದೇವಸ್ಥಾನ ಆವರಣದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ ವತಿಯಿಂದ ಹಮ್ಮಿಕೊಂಡ ಮೂರು ದಿನಗಳ ಕನ್ನಡ ಕುರಾನ್ ಪ್ರವಚನದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಎಲ್ಲ ಧರ್ಮದವರನ್ನೂ ತೆಗೆದುಕೊಂಡು ಈ ಕಾರ್ಯಕ್ರಮವನ್ನು ಮಾಡಿರುವ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆಯವರ ಈ ಕಾರ್ಯ ಶ್ಲಾಘನೀಯವಾದದ್ದು ಎಂದರು.  

ಪ್ರವಚನಕಾರ ಮುಹಮ್ಮದ್ ಕುಂಞಿ ಅವರು ಯಶಸ್ವಿ ಜೀವನದ ಕುರಿತು ಪ್ರವಚನ ನೀಡಿ ನಮ್ಮ ಜೀವನ ಯಶಸ್ವಿಯಾಗಬೇಕಾದರೆ ನಾವು ನಮ್ಮ ಸೃಷ್ಟಿಕರ್ತನನ್ನು ಅರಿತುಕೊಳ್ಳಬೇಕು, ಅವನ ಇಚ್ಛೆಯಂತೆ ಬದುಕಲು ಪ್ರಯತ್ನಿಸಬೇಕು, ಪರಿಶುದ್ಧವಾದ ಮನಸ್ಸು ಹೃದಯ ವೈಶಾಲ್ಯತೆ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಲು ಪ್ರಯತ್ನಿಸಿದರೆ ಖಂಡಿತ ನಮ್ಮ ಜೀವನ ಯಶಸ್ವಿಯಾಗುತ್ತದೆ ಎಂದ ಅವರು ನಮಗೆಲ್ಲರಿಗೂ ಒಂದು ದಿನ ಈ ಜಗತ್ತು ತೊರೆಯಬೇಕಾಗಿದೆ ಆದರೆ ದೇವನ ಬಳಿ ಹೋಗುವಾಗ ಉತ್ತಮ ಕರ್ಮಗಳನ್ನು ತೆಗೆದುಕೊಂಡು ಹೋಗಬೇಕಾಗಿದೆ ಎಂದರು.  

ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ಮುದುಕಪ್ಪ ಬಡಿಗೇರ,ಮಾಜಿ ಸದಸ್ಯ ಪ್ರಕಾಶ್ ಹಜೇರಿ ಪ್ರವಚನಕಾರ ಮುಹಮ್ಮದ್ ಕುಂಞಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಬ್ರಿಲಿಯಂಟ್ ಶಾಲೆಯ ಚಿತ್ರಕಲಾ ಶಿಕ್ಷಕ ಸತೀಶ ಕೇಮಶಟ್ಟಿ ತಾವು ರಚಿಸಿದ ಮೊಹಮ್ಮದ್ ಕುಂಞಿ ಅವರ ಭಾವಚಿತ್ರ ಅರ​‍್ಿಸಿದರು. ಜಮಾತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಮಹಮ್ಮದ್ ಸಾಅದ ಬೆಳಗಾವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಂಟೋಜಿಯ ಪರಮಪೂಜ್ಯ ಶ್ರೀ ಡಾ.ಚನ್ನವೀರ ಶಿವಾಚಾರ್ಯರು, ಗುಂಡಕನಾಳದ ಶ್ರೀ ಗುರುಲಿಂಗ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ರಾಜಕೀಯ ಮುಖಂಡರು, ಸರ್ವ ಸಮಾಜದ ಗಣ್ಯರು ಹಿರಿಯರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು. ಹಾಫೀಜ. ಮೊಹಮ್ಮದ್ ಯಸೂಫ್ ಡೋಣಿ ಕುರಾನ್ ಪಠಿಸಿದರು. ಶೊಯೇಬ ಕೆ ಸ್ವಾಗತಿಸಿದರು. ಅಧ್ಯಕ್ಷ ಮುಜಾಹೀದ ನಮಾಜಕಟ್ಟಿ ನಿರೂಪಿಸಿ ವಂದಿಸಿದರು.