ಬಾಗಲಕೋಟೆ: ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ ನಗರ ಹಾಗೂ ಅಲಗೂರ ಗ್ರಾಮದ ವಿವಿಧ ಪ್ರದೇಶಗಳಲ್ಲಿ ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ 2003 ರ ಅಡಿಯಲ್ಲಿ ದಾಳಿ ನಡೆಸಿ ಒಟ್ಟು 23 ಪ್ರಕರಣಗಳನ್ನು ದಾಖಲಿಸುವದರ ಜೊತೆಗೆ 2200 ರೂ.ಗಳ ದಂಡ ವಸೂಲಿ ಮಾಡಲಾಗಿದೆ.
ಬುಧವಾರ ಜಮಖಂಡಿ ನಗರದ ಹೋಟೆಲ್, ಬಸ್ ನಿಲ್ದಾಣದ ಅಂಗಡಿ ಮುಂಗಟ್ಟು ಹಾಗೂ ಶಾಲಾ ಕಾಲೇಜು ಬಳಿ ತಂಬಾಕು ಉತ್ಪನ್ನಗಳ ಮಾರಾಟ, ಅನಧಿಕೃತ ಜಾಹೀರಾತು ಪ್ರದರ್ಶನ ಸೇರಿದಂತೆ ಇನ್ನಿತರ ಉಲ್ಲಂಘಣೆ ವಿರುದ್ಧ ಕ್ರಮ ಜರುಗಿಸಿ ಪ್ರಕರಣ ದಾಖಲಿಸುವದರ ಜೊತೆಗೆ ದಂಡವನ್ನು ವಸೂಲಿ ಮಾಡಲಾಯಿತು.
ಅನಧಿಕೃತವಾಗಿ ಮಾವಾ ಮಾರಾಟ ಮಾಡುವುದ ಮಾಹಿತಿ ಬಂದಿದ್ದು, ಮಾವ ಮಾರಾಟ ಮಾಡುವವರಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತಿದೆ ಎಂದು ಎಚ್ಚರಿಕೆ ನೀಡಲಾಯಿತು.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.
ಶೈಕ್ಷಣಿಕ ಸಂಸ್ಥೆಗಳ 100 ಗಜದ ಅಂತರದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ಅರಿವು ಮೂಡಿಸಲಾಯಿತು. ಹಾಗೂ ಅಂಗಡಿಗಳ ಮುಂದೆ ನಿಷೇಧಿತ ನಾಮಫಲಕವನ್ನು ಕಡ್ಡಾಯವಾಗಿ ಪ್ರದಶರ್ಿಸಬೇಕೆಂದು ಸೂಚಿಸಲಾಯಿತು. ದಾಳಿ ವೇಳೆಯಲ್ಲಿ ಜಮಖಂಡಿ ತಾಲೂಕ ಆರೋಗ್ಯ ಅಧಿಕಾರಿ ಡಾ.ಜಿ.ಎಸ್.ಗಲಗಲಿ, ಜಿಲ್ಲಾ ತಂಬಾಕು ಸಲಹೆಗಾರ ಶಶಿಕಾಂತ ಕುಮಠಳ್ಳಿ, ಶಿವಲಿಂಗ ಕರಗಣ್ಣಿ, ಹಿರಿಯ ಆರೋಗ್ಯ ಸಹಾಯಕ ಎಂ.ಹೆಚ್.ಕಡ್ಲಿಮಟ್ಟಿ ಹಾಗೂ ಜಮಖಂಡಿ ನಗರಸಭೆಯ ಸಂಜಯಕುಮಾರ, ಅನಿಲ ಗೇರಗಾಳ ಇದ್ದರು