ವಿವಿಧ ಅಂಗಡಿಗಳ ಮೇಲೆ ದಾಳಿ: ದಂಡ ವಸೂಲಿ

ಹಾವೇರಿ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ  ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಅಧಿಕಾರಿಗಳನ್ನೊಳಗೊಂಡ ತಂಡ ಹಾವೇರಿ ನಗರದ ಸುಭಾಸ ವೃತ್ತ, ಸ್ಟೇಷನ್ ರಸ್ತೆ ಹಾಗೂ ಎಪಿಎಂಸಿ ಭಾಗಗಳಲ್ಲಿ ಬುಧವಾರ 26 ಅಂಗಡಿಗಳ ಮೇಲೆ ದಾಳಿ ನಡೆಸಿ ರೂ.6500 ದಂಡ ವಸೂಲಿ ಮಾಡಲಾಗಿದೆ.

ತಂಬಾಕು ನಿಯಂತ್ರಣ ಕಾಯ್ದೆ-2003ರ ವಿರುದ್ಧವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಮತ್ತು ನೇರ ಪರೋಕ್ಷವಾಗಿ ತಂಬಾಕು ಜಾಹೀರಾತು ಪ್ರದರ್ಶನ, ಶಾಲಾ-ಕಾಲೇಜು ಆವರಣದ 100 ಮೀಟರ್ ಅಂತರದೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟಮಾಡುತ್ತಿರುವ ಅಂಗಡಿ ಮಾಲೀಕರಿಗೆ ನೋಟೀಸ್ ಜಾರಿ ಮಾಡಿ ತಂಬಾಕು ನಿಯಂತ್ರಣ ಕಾಯ್ದೆ-2003ರ ಅಡಿಯಲ್ಲಿ ಕಲಂ-4 ಮತ್ತು ಕಲಂ 6ಬಿ ರಡಿಯಲ್ಲಿ ದಂಡ ವಸೂಲಿ ಮಾಡಲಾಗಿದೆ.

ಈ ತಂಡದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಜಿಲ್ಲಾ ತಂಬಾಕು ನಿಯಂತ್ರಣ ಸಲಹೆಗಾರರಾದ ಡಾ.ಸಂತೋಷ ದಡ್ಡಿ, ದಾದಾಪೀರ ಹುಲಿಕಟ್ಟಿ, ನಗರ ಪೊಲೀಸ್ ಠಾಣೆಯ ಐ.ಎಂ.ಶೇತಸನದಿ ಹಾಗೂ ಆರೋಗ್ಯ ಇಲಾಖೆ ಪಿ.ಎನ್.ಪಾಟೀಲ, ರವಿ ಜೈನ್, ಮಹೇಶ ಕುಮ್ಮೂರ ಇತರರು ಭಾಗವಹಿಸಿದ್ದರು.

       ಅಂಗಡಿ ಹಾಗೂ ಮಾಲೀಕರ ವಿವರ: ಬಸವರಾಜ ಹೋಟೆಲ್, ಮುರುಗೇಶ ಹಿರೇಮಠ, ಎಸ್.ಎನ್. ಭದ್ರಶೆಟ್ಟಿ, ಶಿವಬಸವರಾಜ, ಎಂ.ಡಿ.ಗೌಸ್, ಅಲ್ತಾಫ್ ಶಿರಹಟ್ಟಿ, ಅಕ್ಬರ್ಸಾಬ ಮುಲ್ಲಾ, ಕರಸಬಪ್ಪ ಹಾಲದೂರ, ಆನಂದ ಈಶ್ವರಪ್ಪ, ಆಶಾ ಪುರಿ, ಟೀ ಸ್ಟಾಲ್, ಮಹಬೂಬಸಾಬ ನದಾಫ್, ಅಕ್ಷಯ ದೇವಾಡಿಗ, ಪ್ರಭಾತ್ ಪಾನ್ ಶಾಪ್, ಹಜರತಸಾಬ, ಬಸೀರಹ್ಮದ್, ಮೊಹಮದಸಾಬ,  ರೇವಣಸಿದ್ದಪ್ಪ, ನೀಲಪ್ಪ ಬಣಕಾರ, ಶ್ರೀಶೈಲ ಬೇಕರಿ, ಶಿವಬಸಪ್ಪ, ಚನ್ನವೀರಪ್ಪ ನಾಡಗೌಡ್ರ, ಈಶ್ವರ, ಶಿಕಂದರ ಬಾಷಾ, ಶಿದ್ಲಿಂಗೇಶ ಅಂಕಲಕೋಟಿ ಹಾಗೂ ಮಲ್ಲೇಶ ಚೌಧರಿ ಉಪಸ್ಥಿತರಿದರು.