ಬಾಗಲಕೋಟೆ29 : ಬೀಳಗಿಯ ಬಸವ ಕ್ಲಿನಿಕ್ ನ ಸ್ಕ್ಯಾನಿಂಗ್ ಕೇಂದ್ರದ ಮೇಲೆ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ನೇತೃತ್ವದ ತಂಡ ಶನಿವಾರ ದಾಳಿ ನಡೆಸಿ ಪ್ರಕರಣ ದಾಖಲಿಸಿದೆ.
ಪರವಾನಿಗೆ ಇಲ್ಲದೇ ಸ್ಕ್ಯಾನಿಂಗ್ ಯಂತ್ರವನ್ನು ಬಿ.ಎ.ಎಂ.ಎಸ್ ವೈದ್ಯಾಧಿಕಾರಿಗಳೇ ಆಪರೇಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ದಾಳಿ ನಡೆಸಿದ ಸಂದರ್ಭದಲ್ಲಿ ಸ್ಕ್ಯಾನಿಂಗ್ ಮಾಡಿರುವ ಬಗ್ಗೆ ರಜಿಸ್ಟರ ನಿರ್ಹಹಣೆ ಮಾಡಿರಲಿಲ್ಲ. ರಿಪೋಟರ್್ ಮೇಲೆ ಸ್ಕ್ಯಾನಿಂಗ್ ಮಾಡಿಸಿಕೊಂಡವರ ಹೆಸರು ಮತ್ತು ಸ್ಕ್ಯಾನಿಂಗ್ ಮಾಡಿದವರ ಹೆಸರನ್ನು ನಮೂದಿಸಿರಲಿಲ್ಲ. ರೆಡಿಯಾಲಾಜಿಸ್ಟಗಳು ಸ್ಕ್ಯಾನಿಂಗ್ ಆಪರೇಟ ಮಾಡಬೇಕು.
ಆ ಕಾರ್ಯ ಇಲ್ಲಿ ನಡಯದೇ ಇರುವದನ್ನು ಖಚಿತಪಡಿಸಿಕೊಂಡಿತು.
ಇದನ್ನು ಕಂಡ ಸಿಇಓ ನೇತೃತ್ವದ ತಂಡ ಸದರಿ ಯಂತ್ರಗಳನ್ನು ಹಾಗೂ ದಾಖಲಾತಿಗಳನ್ನು ವಶಪಡಿಸಿಕೊಂಡು ವೈದ್ಯ ಡಾ.ಮೋಹನ ಚಟ್ರಿ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ದಾಳಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಸೇರಿದಂತೆ ಇತರರು ಇದ್ದರು.