ವೈದ್ಯರ ಮೇಲಿನ ಹಲ್ಲೆ ನಿಲ್ಲಬೇಕು: ಡಾ. ಸಿ.ಎನ್. ಮಂಜುನಾಥ್

ಬೆಂಗಳೂರು, ನ 24 : ವೈದ್ಯರು ರೋಗಿಗಳ ಹಿತ ರಕ್ಷಣೆಗೆ ಆದ್ಯತೆ ನೀಡುತ್ತಿದ್ದು, ಕೆಲವೊಂದು ಸಂದರ್ಭದಲ್ಲಿ ರೋಗಿ ಮೃತಪಟ್ಟರೆ ವೈದ್ಯರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಅಂತಹ ಸಂದರ್ಭದಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡುವುದು ತರವಲ್ಲ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿದರ್ೆಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.  

ಸೂಕ್ತ ಸಂದರ್ಭದಲ್ಲಿ ವೈದ್ಯರು ಗುಣಮಟ್ಟ ಚಿಕಿತ್ಸೆ ನೀಡಿದರೂ, ಕೆಲವೊಮ್ಮೆ ರೋಗಿಗಳು ಮೃತರಾಗುತ್ತಾರೆ. ಆಗ ಸಂಬಂಧಪಟ್ಟ ಕುಟುಂಬದವರು ಮತ್ತು ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ನಡೆಯುತ್ತಿದ್ದು, ಇದು ನಿಲ್ಲಬೇಕು. ಅಮೂಲ್ಯ ಜೀವ ಕಳೆದುಕೊಂಡರೆ ನೋವಾಗುವುದು ಸಹಜ. ಇಂತಹ ಪ್ರತಿಕೂಲ ಸಂದರ್ಭದಲ್ಲಿ ಜನ ಸಂಯಮದಿಂದ ವತರ್ಿಸಬೇಕು ಎಂದರು.  

ವಿಶ್ವಮಾನವ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಖ್ಯಾತ ನರಶಾಸ್ತ್ರ ತಜ್ಞ ಡಾ.ಎಚ್.ಎಸ್ ಸುರೇಶ್ ಕುಮಾರ್ ವಿರಚಿತ "ನೆನಪಿನ ಶಕ್ತಿ ಹೆಚ್ವಿಸಿಕೊಳ್ಳುವುದು ಹೇಗೆ?" ಮತ್ತು "ನಿದ್ರೆ ಆರೋಗ್ಯಕ್ಕೆ ಸಂಜೀವಿನಿ" ಪುಸ್ತಕ ಬಿಡುಗಡೆ ಮಾಡಿ, ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅವರು, ರೋಗಿಯ ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ರೋಗಿಯ ಪರವಾಗಿ ದೇವರನ್ನು ಪೂಜಿಸುತ್ತೇವೆ. ವೈದ್ಯರೇ ರೋಗಿಗಳಾಗುವ ವ್ಯವಸ್ಥೆ ರೂಪಗೊಂಡಿದೆ. ಕಳೆದ ಒಂದು ವರ್ಷದಲ್ಲಿ 25 ರಿಂದ 30 ವಯೋಮಾನದ ವೈದ್ಯರಿಗೆ ಹೃದಯಾಘಾತವಾಗಿದೆ. ಒತ್ತಡಗಳ ನಡುವೆಯೇ ವೈದ್ಯರು ಕೆಲಸ ಮಾಡುತ್ತಿದ್ದಾರೆ. ವೃತ್ತಿ ಧರ್ಮ ಗೌರವಿಸಿ ವೈದ್ಯರು ಕೆಲಸ ಮಾಡುತ್ತಿದ್ದರೂ ಅವರ ಮೇಲೆ ಆಗಿಂದಾಗ್ಗೆ ಹಲ್ಲೆ ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿಸಿದರು. 

ಯಾವ ಭಾಷೆಯಲ್ಲಿ ಅಧ್ಯಯನ ಮಾಡುತ್ತೇವೆ ಎಂಬುದು ಮುಖ್ಯವಲ್ಲ. ಹೇಗೆ ಕಲಿಯುತ್ತೇವೆ ಎಂಬುದೇ ಮುಖ್ಯ. ಭಾರತೀಯರಲ್ಲಿ ಒಂದು ವ್ಯಾಮೋಹ ಇದೆ. ಇಂಗ್ಲಿಷ್ ಕಲಿತರೆ ಬುದ್ಧಿವಂತರು ಎಂಬ ತಪ್ಪು ಕಲ್ಪನೆ ಇದೆ. ಇದರಿಂದ ಹೊರಬರಬೇಕು. ಇಂಗ್ಲಿಷ್ ನಲ್ಲಿ ಓದು ಬರಹ ಕಲಿಯಲಿ. ಆದರೆ, ಕನ್ನಡ ಮರೆಯಬಾರದು ಎಂದು ತಿಳಿಸಿದರು. 

ವಿಶ್ವದಲ್ಲಿ 84ಲಕ್ಷ ಜೀವರಾಶಿ ಇದ್ದು, ಬುದ್ದಿವಂತಿಕೆ ಮತ್ತು ನೆನಪಿನ ಶಕ್ತಿ ಇರುವ ಪ್ರಾಣಿ ಮನುಷ್ಯ. ನಿದ್ರೆ ಬಹಳ ಪ್ರಮುಖವಾಗಿದ್ದು, ಯಾರು ಚೆನ್ನಾಗಿ ನಿದ್ರೆ ಮಾಡುತ್ತಾರೆ ಅವರ ಆರೋಗ್ಯವೂ ಚೆನ್ನಾಗಿರುತ್ತದೆ. ನಿದ್ರೆ ಚೆನ್ನಾಗಿ ಆಗದಿದ್ದರೆ ತಲೆನೋವು ಸೇರಿದಂತೆ ಹಲವು ಸಮಸ್ಯೆಯಿಂದ ಬಳಲುತ್ತಾರೆ. ನಿದ್ರೆ ಕಡಿಮೆಯಾದರೆ ಮಕ್ಕಳು ಸಹ ಮಾನಸಿಕ ಖಿನ್ನತೆಯಿಂದ ಬಳಲುತ್ತಾರೆ ಎಂದರು.  

ಕೌಶಲ್ಯ ತೆ ಇದ್ದರೆ ಸಲದು ಕರುಣೆ ಇರಬೇಕು. ಮನುಷ್ಯ ಪ್ರತಿ ಮನೆಯಲ್ಲಿ ಹುಟ್ಟುತ್ತಾರೆ. ಆದರೆ, ಪ್ರತಿಯೊಬ್ಬರಿಗೂ ಮನುಷ್ಯತ್ವ ಇರಬೇಕು. ವೈದ್ಯರಿಗೆ ತಾಯಿಯ ಹೃದಯ ಇರಬೇಕು. ಏಕೆಂದರೆ ರೋಗಿ ಜತೆ ಮಾತೃಭಾಷೆ ಯಲ್ಲಿ ಮಾತನಾಡಬೇಕು. ತಾಯಿ ಹೃದಯ ಸಮುದಾಯವನ್ನೇ ಬದಲಿಸುತ್ತದೆ ಎಂದರು. 

ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ ಮಾತನಾಡಿ, ವೈದ್ಯರ ಬಗ್ಗೆ ಭಕ್ತಿ ಮತ್ತು ಗೌರವ ಇರಬೇಕು. ಸಾವಿನ ಜತೆಗೆ ಮಾತನಾಡುವುದು ವೈದ್ಯರಾಗಿದ್ದು, ಮಾನವನ ದೈವ ನಿರ್ಣಯ ಮಾಡುವವನು ವೈದ್ಯ. ನನಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ್ದು ವೈದ್ಯನ ಬಗ್ಗೆ ಬರೆದ ನಾಟಕಕ್ಕೆ ಎಂದು ಸ್ಮರಿಸಿಕೊಂಡರು.  

ಆಯರ್ುವೇದ ಶಾಸ್ತ್ರ ಶಾಸ್ತ್ರೋತ್ತವಾಗಿ ಕಲಿಯುತ್ತಿಲ್ಲ. ಇದಕ್ಕೆ ಬ್ರಿಟಿಷರೇ ಕಾರಣ. ಮೆಕಾಲೆಯಿಂದಾಗಿ ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ಆರಂಭವಾಯಿತು. ಇದರಿಂದ ಸ್ವಂತ ಆಲೋಚನೆ ಮಾಡುವುದೇ ಕಲಿಯಲಿಲ್ಲ. ಮಾತೃಭಾಷೆಯಿಂದಲೇ ಸ್ವಂತ ಆಲೋಚನೆ ಬರಲಿದೆ. ವೈದ್ಯರು ಯಾವ ಭಾಷೆ ಓದಿದರೂ, ರೋಗಿಗಳಿಗೆ ಅಥರ್ೆಸಲು ಕನ್ನಡ ಅಗತ್ಯ. ಇತ್ತೀಚಿಗೆ ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚಿನ ಅಂಕ ಪಡೆಯುತ್ತಿದ್ದಾರೆ. ಏಕೆಂದರೆ ವಿಷಯ ಅರ್ಥ ಮಾಡಿಕೊಳ್ಳಲು ಕನ್ನಡ ಬಳಸುತ್ತಾರೆ. ಪುಸ್ತಕವನ್ನು ಬೇರೆ ಭಾಷೆಯಲ್ಲಿ ಓದುತ್ತಾರೆ ಅದಕ್ಕಾಗಿ ಹೆಚ್ಚಿನ ಅಂಕ ಪಡೆಯುತ್ತಾರೆ. ಸಿ.ಎನ್.ಆರ್ ರಾವ್ ಅವರು ಕನ್ನಡದಲ್ಲೇ ಕಲಿತಿದ್ದಕ್ಕೆ ಉನ್ನತ ಸ್ಥಾನಕ್ಕೆ ಹೋಗಿದ್ದಾರೆ. ಅದಕ್ಕಾಗಿಯೇ ಮಾತೃಭಾಷೆ ಕಲಿತವರು ಎಲ್ಲಿ ಬೇಕಾದರೂ ಬದುಕುತ್ತಾರೆ ಎಂದರು. 

ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ.ಬಿ.ಆರ್.ರವಿಕಾಂತೇಗೌಡ, ಜಯದೇವ ಹೃದ್ರೋಗ ಸಂಸ್ಥೆಯ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಅಬರ್ುಧ ರೋಗ ಶಸ್ತ್ರ ಚಿಕಿತ್ಸಕ ಡಾ. ಸಿದ್ಧಪ್ಪ, ಮೈಸೂರು ಮೆಡಿಕಲ್ ಕಾಲೇಜಿನ ಅರವಳಿಕೆ ವಿಭಾಗದ ಮುಖ್ಯಸ್ಥ ಡಾ. ಎಚ್.ಜಿ. ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಬಿ.ಸಿ.ರಾಯ್ ಪ್ರಶಸ್ತಿ ಪುರಸ್ಕೃತ ಡಾ.ಚಿಕ್ಕಮೊಗ, ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿದರ್ೆಶಕ ಡಾ.ರವಿಕುಮಾರ್ ಬಿ.ಸಿ., ವಿಶ್ವಮಾನವ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದಶರ್ಿ ಡಾ. ಕೆ.ಬಿ.ಕೆಂಪೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.