ತಬ್ಲೀಗ್‌ ಸದಸ್ಯರಿಗೆ ಹಲ್ಲೆ: ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಚುರುಕು

ಬಾಗಲಕೋಟೆ,ಏ.6, ಕೊರೋನಾ ಹರಡಲು ತಬ್ಲೀಗಿಗಳೇ ಕಾರಣ ಎಂದು ಆರೋಪಿಸಿ ಮೂವರು ತಬ್ಲೀಗ್ ಸದಸ್ಯರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ. ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಗ್ರಾಮದ  ಮುಸ್ಲಿಂ ವ್ಯಕ್ತಿಗಳನ್ನು ಮಾರ್ಗಮಧ್ಯೆ ನಿಲ್ಲಿಸಿ ಕೋಲಿನಿಂದ ಹೊಡೆದು ಹಲ್ಲೆ ನಡೆಸಿದ್ದ ಆರೋಪಿಗಳು, ನಿಮ್ಮಿಂದಲೇ ಕೊರೊನಾ ಹಬ್ಬುತ್ತಿದೆ. ನಮ್ಮ ಗ್ರಾಮದ ಕಡೆ ಯಾಕೆ  ಬರುತ್ತಿದ್ದೀರಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಬಗ್ಗೆ ಸ್ಥಳೀಯ ಮುಸ್ಲಿಂ ಮುಖಂಡರು ಪೊಲೀಸರಿಗೆ ದೂರು ನೀಡಿದ್ದರು. ಮುಧೋಳ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.