ಹುಬ್ಬಳ್ಳಿ 04: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರಲ್ಲಿ ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ಂಖಖಖಿಗ ರವರು ದಿನಾಂಕ: 06-12-2024 ರಿಂದ 08-12-2024 ರ ವರೆಗೆ ಆಂಧ್ರ್ರದೇಶದ ವಿಶಾಖಪಟ್ಟಣಂದಲ್ಲಿ ಆಯೋಜಿಸಿರುವ ಅಂತರರಾಜ್ಯ ಸಾರಿಗೆ ನಿಗಮಗಳ ಅಥ್ಲೇಟಿಕ್ಸ್ ಕ್ರೀಡಾಕೂಟಕ್ಕೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲು ಸಂಸ್ಥೆಯ 46 ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಶುಭ ಹಾರೈಸಿ ದಿನಾಂಕ: 04-12-2024 ರಂದು ಕೇಂದ್ರ ಕಛೇರಿ ಹುಬ್ಬಳ್ಳಿಯಲ್ಲಿ ಬೀಳ್ಕೊಡಲಾಯಿತು
ಸಂಸ್ಥೆಯ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಎಂ. ಭಾ.ಆ.ಸೇ ರವರು ಸಂಸ್ಥೆಯನ್ನು ಪ್ರತಿನಿಧಿಸಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ ವಿಜೇತರಾಗಿ ಪಾರಿತೋಷಕದೊಂದಿಗೆ ಬರಲು ಕ್ರೀಡಾಪಟುಗಳಿಗೆ ಹಾರೈಸಿ ಶುಭ ಕೋರಿದರು. ಕ್ರೀಡೆಗಳಲ್ಲಿ ಉತ್ತಮ ನಡುವಳಿಕೆಯನ್ನು ಪ್ರದರ್ಶಿಸಲು ಎಲ್ಲ ಕ್ರೀಡಾಪಟುಗಳಿಗೆ ಕರೆ ನೀಡಿದರು.
ಇಲಾಖಾ ಮುಖ್ಯಸ್ಥರಾದ ವಿವೇಕಾನಂದ ವಿಶ್ವಜ್ಞ, ಪಿ.ವೈ.ನಾಯಕ್, ವಿಜಯಶ್ರೀ ನರಗುಂದ, ಗಣೇಶ ರಾಠೋಡ, ಪ್ರಸನ್ನಕುಮಾರ ಬಾಲಾನಾಯಕ್, ಮಾಲತಿ ಎಸ್.ಎಸ್, ಜಗದಂಬಾ ಕೋಪರ್ಡೆ, ಶ್ರೀನಾಥ.ಜಿ, ಎಂ.ಬಿ.ಕಪಲಿ, ಉಪ ಮುಖ್ಯ ಸಂಚಾರ ವ್ಯವಸ್ಥಾಪಕರಾದ ಶಶೀಧರ ಕುಂಬಾರ ಹಾಗೂ ವಿಭಾಗಗಳ ಮತ್ತು ಕೇಂದ್ರ ಕಛೇರಿಯ ಇನ್ನಿತರ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದು ಕ್ರೀಡೆಗಳಲ್ಲಿ ಭಾಗವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳಿಗೆ ಶುಭ ಕೋರಿದರು.