ಸವಳು ಜವಳು ಮೈದಾನ ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಲು ಶಾಸಕರಿಗೆ ಕ್ರೀಡಾಪಟುಗಳ ಆಗ್ರಹ

 ಸವಳು ಜವಳು ಮೈದಾನ ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಲು ಶಾಸಕರಿಗೆ ಕ್ರೀಡಾಪಟುಗಳ ಆಗ್ರಹ Athletes urge MLAs to take action to prevent construction of Savalu Javalu ground

ಲೋಕದರ್ಶನ ವರದಿ 

ಸವಳು ಜವಳು ಮೈದಾನ ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಲು ಶಾಸಕರಿಗೆ ಕ್ರೀಡಾಪಟುಗಳ ಆಗ್ರಹ 

ಮಹಾಲಿಂಗಪುರ  06: ಮಳೆಯಾದರೆ ಪಟ್ಟಣದ ಮಹಾತ್ಮ ಗಾಂಧಿ ಮೈದಾನ ಒದ್ದೆಯಾಗಿ ಶಾಲಾ ಮಕ್ಕಳು ಮತ್ತು ಕ್ರೀಡಾಪಟುಗಳಿಗೆ ಆಟವಾಡಲು ತೊಂದರೆಯಾಗುತ್ತಿದ್ದು ನಿವಾರಣೆಗೆ ಶೀಘ್ರ ಮೈದಾನ ಅಭಿವೃದ್ಧಿ ಕೆಲಸ ಕೈಗೆತ್ತಿಕ್ಕೊಳ್ಳಬೇಕೆಂದು ಸ್ಥಳೀಯ ಕ್ರಿಡಾ ಪಟುಗಳು ಶಾಸಕ ಸಿದ್ದು ಸವದಿ ಅವರನ್ನು ಆಗ್ರಹಿಸಿದ್ದಾರೆ. 

ರವಿವಾರ ಸಂಜೆ ಕ್ರಿಡಾ ಪಟುಗಳು ಪತ್ರಿಕಾಗೋಷ್ಠಿ ಮೂಲಕ ಪತ್ರಿಕೆಗೆ ಮಾಹಿತಿ ನೀಡಿದ ಅವರು, ಮಹಾಲಿಂಗಪುರ ಪಟ್ಟಣಕ್ಕೆ ಸಾರ್ವಜನಿಕ ಮೈದಾನ ಎನ್ನುವುದೇ ಇಲ್ಲ. ಇರುವುದೊಂದು ಮೈದಾನ ಮಳೆಯಾದರೆ ಸಾಕು ನಡೆದಾಡುವುದಕ್ಕೂ ಸಹ ಯೋಗ್ಯವಲ್ಲ.ಈ ಸಮಸ್ಯೆ ನೀಗಿಸಲು ಈ ಮುಂಚೆ ಪುರಸಭೆಯಿಂದಲೂ ಸವಳು,ಜವಳು ಪೈಪ್ ಲೈನ್ ಅಳವಡಿಕೆಯಾಗಿತ್ತು.ಇದರಿಂದಲೂ ಮೈದಾನ ಸಮಸ್ಯೆ ನೀಗಿಲ್ಲ. ಇದಕ್ಕೆ ಹಲವಾರು ಕಾರಣಗಳೂ ಇವೆ. 

ಈ ಮೈದಾನ ಪ್ರದೇಶ ಕೆಳಮಟ್ಟದಲ್ಲಿದ್ದು ಮೊದಲು ಇಲ್ಲಿ ಮೇಲ್ಭಾಗದಿಂದಲೇ ಮಳೆ ನೀರು ಹರಿದು ಹೋಗುವ ವಿಶಾಲ ಪ್ರದೇಶವಾಗಿತ್ತು.ಪಕ್ಕದಲ್ಲಿ ಬ್ರಹತ್ ಕೆರೆ ಕೂಡ ಇದೆ.ಇದರ ಬಸಿ ನೀರು ಸಹ ಇದೆ ಮಾರ್ಗದಿಂದಲೇ ಹಳ್ಳಕ್ಕೆ ಸೇರುವುದು.ಇದು ಅನಾದಿ ಕಾಲದಿಂದಲೂ ನಡೆದು ಬಂದಂತಹ ಕ್ರಿಯೆ. ಸಹಜವಾಗಿ ಇಲ್ಲಿ ಮಳೆಗಾಲದಲ್ಲಿ ನಿರಂತರ ನೀರು ಹರಿದು ಭೂಮಿ ಜವಳಾಗುತ್ತದೆ.ಈ ಸಮಸ್ಯೆ ನೀಗಿಸಲು ಶಾಸಕರು ವೈಜ್ಞಾನಿಕವಾಗಿ ಮೈದಾನ ಎತ್ತರಿಸಿಕ್ಕೊಂಡು ಶಾಶ್ವತ ಕ್ರಮ ಕೈಗೊಳ್ಳುವಲ್ಲಿ ಗಮನ ಹರಿಸುವುದೊಂದೆ ಉಳಿದ ದಾರಿ.ತಗ್ಗು ಬಿದ್ದಾಗ ಗರಸು ಹಾಕುವುದರಿಂದ ಪ್ರಯೋಜನವಿಲ್ಲ. 

ಈ ಜಾಗೆಯಲ್ಲಿ ಸರ್ಕಾರಿ ಪ್ರೌಢಶಾಲೆ ನಂತರ 2016-17 ರಲ್ಲಿ ಸಾರ್ವಜನಿಕ ಮಹಾತ್ಮ ಗಾಂಧಿ ಮೈದಾನ ನಿರ್ಮಾಣಕ್ಕೆ ಸ್ಥಳೀಯ ಪುರಸಭೆ ಅನುಮತಿ ನೀಡಿತ್ತು. ಅಂದಿನ ಮಾಜಿ ಸಚಿವೆ ಉಮಾಶ್ರೀಯವರು ಈ ಮೈದಾನ ಅಭಿವೃದ್ಧಿಗೆ ಹಣ ಒದಗಿಸಿದ್ದರೆ, ಕ್ರಿಡಾಪಟುಗಳೆಲ್ಲ ಸೇರಿ ಲಕ್ಷಾಂತರ ಹಣ ಕೂಡಿಸಿ ಗರಸು ಹಾಕಿ ಮೈದಾನದ ಅಂದ ಹೆಚ್ಚಲಿಕ್ಕೆ ಶ್ರಮ ಪಟ್ಟಿದ್ದಾರೆ. 

ನಂತರದ ದಿನಗಳಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಸವಳು, ಜವಳು ಪೈಪ್ ಲೈನ್ ಗೆ 50 ಲಕ್ಷ, ಮೈದಾನದ ಕೊನೆಯಲ್ಲಿ ಸರಾಗವಾಗಿ ನೀರು ಹರಿದು ಹೋಗಲು ಚರಂಡಿ ನಿರ್ಮಾಣಕ್ಕೆ 50 ಲಕ್ಷ ಒದಗಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಸ್ತುತ ಪ್ರೇಕ್ಷಕರ ಗ್ಯಾಲರಿಗೆ 50 ಲಕ್ಷ ಮತ್ತು ಸಾರ್ವಜನಿಕ ಸೌಚಾಲಯ ನಿರ್ಮಾಣಕ್ಕೆ 11 ಲಕ್ಷ, ಎಂಟು ತಿಂಗಳ ಹಿಂದೆಯೇ ಬಾಡಗಂಡಿ ಎಂಬ ಗುತ್ತಿಗೆದಾರನಿಗೆ ಟೆಂಡರ್ ಗಳು ಆಗಿವೆ.ವಿಳಂಬದ ಕಾರಣ ಮಾತ್ರ ತಿಳಿದು ಬಂದಿಲ್ಲ ಎಂದು ಪುರಸಭೆ ಸದಸ್ಯ ಚನಬಸು ಯರಗಟ್ಟಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. 

 ಸಂಜೆ ಕುಡುಕರು, ಪುಂಡು ಪೋಕರಿಗಳು ಸಾರಾಯಿ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಮೈದಾನ ಅಂದಕ್ಕೆ ಕಳಂಕಿತರಾಗಿದ್ದಾರೆ ಎಂದು ಆರೋಪಿಸಿ ಇತ್ತಿಚೆಗೆ ಶಾಲಾ ಪ್ರಾಂಶುಪಾಲರು ತೇರದಾಳ ಶಾಸಕ ಸಿದ್ದು ಸವದಿ ಅವರಿಗೆ ಲಿಖಿತ ಮನವಿ ಮಾಡಿದ್ದರು. 

ಒಟ್ಟಿನಲ್ಲಿ ವಿದ್ಯಾರ್ಥಿಗಳು,ಪಟ್ಟಣದ ವಿಹಾರಿಗಳು, ಕ್ರಿಡಾಪಟುಗಳು ಮತ್ತು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವವರಿಗೆ ಈ ಮೈದಾನದ ಸಾಕಷ್ಟು ಅವಶ್ಯಕತೆ ಇದ್ದು.ಆದಷ್ಟು ಬೇಗ ಪ್ರೇಕ್ಷಕರ ಗ್ಯಾಲರಿ ಮತ್ತು ರಾತ್ರಿ ಮೈದಾನದಲ್ಲಿ ಅನೈತಿಕ ಚಟುವಟಿಕೆಗಳು ನಡೆಯದಂತೆ ಸರಿಯಾದ ವ್ಯವಸ್ಥೆ ಮಾಡುವುದು ಆಡಳಿತದ ಹೊಣೆಯಾಗಿದೆ ಎಂದು ಸಾರ್ವಜನಿಕ ವಲಯದಿಂದಲೂ ಕೇಳಿ ಬರುತ್ತಿದೆ.ಪತ್ರಿಕಾಘೋಷ್ಠಿಯಲ್ಲಿ ಗಂಗಾಧರ ಮೇಟಿ, ಮಹಾದೇವ ಕಡಬಲ್ಲವರ ಮತ್ತು ಬಂದೇನವಾಜ ಪಕಾಲಿ ಸೇರಿದಂತೆ ಇನ್ನಿತರರಿದ್ದರು.