ಗುವಾಹಟಿ 28: ಫಿನ್ಲೆಂಡ್ ನಲ್ಲಿ ನಡೆದ 20ರ ವಯೋಮಿತಿ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ನೂತನ ಇತಿಹಾಸ ರಚನೆ ಮಾಡಿರುವ ಹಿಮಾದಾಸ್ ಕೋಚ್ ನಿಪಾನ್ ದಾಸ್ ಮೇಲೆ ಅಥ್ಲೆಟ್ ಒಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿ ಬಂದಿದೆ.
ನಿಪಾನ್ ದಾಸ್ ಬಳಿ ತರಬೇತಿ ಪಡೆದುಕೊಂಡಿರುವ ಮತ್ತೋರ್ವ ಕ್ರೀಡಾಪಟು ಈ ಗಂಭೀರ ಆರೋಪ ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವುದಾಗಿ ಅಸ್ಸೋಂ ಕ್ರೀಡಾ ಮತ್ತು ಯುವ ಕಲ್ಯಾಣ ಇಲಾಖೆ ಕಾರ್ಯದಶರ್ಿ ಹಾಗೂ ಕಮಿಷನರ್ ಅಗ್ನಿಹೋತ್ರಿ ತಿಳಿಸಿದ್ದಾರೆ.
ಕ್ರೀಡಾಪಟು ತಿಳಿಸಿರುವ ಪ್ರಕಾರ ಗುವಾಹಟಿಯಲ್ಲಿರುವ ಸರಸ್ಜಾಯಿ ಕ್ರೀಡಾಂಗಣದಲ್ಲಿ ತರಬೇತಿ ನೀಡುತ್ತಿದ್ದ ವೇಳೆ ಕೋಚ್ ಅಥ್ಲೆಟ್ಗೆ ಲೈಂಗಿಕ ಕಿರುಕುಳ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಯಾರಿಗಾದರೂ ಮಾಹಿತಿ ನೀಡಿದರೆ ನಿನ್ನ ಮುಂದಿನ ಕ್ರೀಡಾ ಬದುಕು ಹಾಳಾಗುವುದು ಎಂದು ಬೆದರಿಕೆ ಹಾಕಿದ್ದರಂತೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಇನ್ನು ಕೋಚ್ ವಿರುದ್ಧ ಸೆಕ್ಷನ್ 342, 354, 376(ಅತ್ಯಾಚಾರ), 511 ಮತ್ತು 506 (ಕ್ರಿಮಿನಲ್ ಬೆದರಿಕೆ ಅಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.