ಸಾಧನೆಗೈದ ಅಥರ್ವ ರಾಘವೇಂದ್ರಗೆ ಸನ್ಮಾನ

ಸಾಧನೆಗೈದ ಅಥರ್ವ ರಾಘವೇಂದ್ರಗೆ ಸನ್ಮಾನ Atharva Raghavendra felicitated for his achievement

ಲೋಕದರ್ಶನ ವರದಿ 

ಧಾರವಾಡ 07 : ಜೆ.ಎಸ್‌.ಎಸ್ ಆರ್‌.ಎಸ್‌.ಎಚ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾದ ಅಥರ್ವ ರಾಘವೇಂದ್ರ ಘಂಟೆಣ್ಣವರ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ, ಮುಂಬೈ ನಡೆಸಿದ ವಿಶಾರದ ಪರೀಕ್ಷೆಯಲ್ಲಿ ಹಿಂದೂಸ್ತಾನಿ ತಾಳವಾದ್ಯ ತಬಲಾ ವಿಭಾಗದಲ್ಲಿ "ಅಖಿಲ ಭಾರತ ಪ್ರಥಮ ಸ್ಥಾನ ಪಡೆದಿದ್ದಾರೆ.  ಸಾಧನೆಗೈದ ವಿದ್ಯಾರ್ಥಿಯನ್ನು ಜೆ.ಎಸ್‌.ಎಸ್‌ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಪ್ರಾಚಾರ್ಯೆ ಭಾರತಿ ಶಾನಬಾಗ, ಮಹಾವಿರ ಉಪಾದ್ಯೆ ಉಪಸ್ಥಿತರಿದ್ದರು.