ಲೋಕದರ್ಶನ ವರದಿ
ಚಿಂಚಲಿ 03: ಜಿಲ್ಲೆಯಾದ್ಯಂತ ಆರೋಗ್ಯ ಇಲಾಖೆಯಿಂದ ಶ್ರವಣ ದೋಷ ನಿವಾರಣೆ ಕುರಿತು ಹಮ್ಮಿಕೊಂಡು ಜನರಿಗೆ ತಿಳುವಳಿಕೆ ಮೂಡಿಸಲು ಬೀದಿ ನಾಟಕ ಕಲಾವಿದರ ಮೊರೆ ಹೋಗಿ ಶ್ರವಣ ದೋಷ ನಿವಾರಣೆ ಕುರಿತು ಅಥಣಿ ತಾಲೂಕಿನ ಶಂಕರಹಟ್ಟಿ, ನದಿಇಂಗಳಗಾಂವ, ಹಲ್ಯಾಳ ಆಯ್ದ ಗ್ರಾಮಗಳಿಗೆ ಬೀದಿ ನಾಟಕ ಕಾರ್ಯಕ್ರಮ ಆಯೋಜಿಸಿ ಶ್ರವಣ ದೋಷ ಕುರಿತು ಜನರಿಗೆ ಜಾಗೃತಿ ಮೂಡಿಸಲಾಯಿತು.
ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದ ಡಾ. ಅಂಬೇಡ್ಕರ ಜಾನಪದ ಕಲಾ ಪೋಷಕ ಸಂಘ ಚಿಂಚಲಿ ತಂಡದ ಕಲಾವಿದರಿಂದ ಆರೋಗ್ಯ ಇಲಾಖೆ ಐದು ತಾಲೂಕಿನಲ್ಲಿ ಆಯ್ದ ಗ್ರಾಮಗಳಿಗೆ ಆಯ್ಕೆ ಮಾಡಿದ ಕಲಾ ತಂಡಕ್ಕೆ ಕಾರ್ಯಕ್ರಮ ನೀಡಿ ಬೀದಿ ನಾಟಕ ಯಶಸ್ವಿಗೊಳಿಸಿದರು. ಆರೋಗ್ಯ ಇಲಾಖೆ ಆಯ್ಕೆ ಮಾಡಿ ಸೂಚಿದ ಗ್ರಾಮಗಳಿಗೆ ತೆರಳಿ ಕಾರ್ಯಕ್ರಮ ನೀಡಿದರು.
ಬೀದಿ ನಾಟಕ ತಂಡದ ಕಲಾವಿದರಾದ ರಾಮಚಂದ್ರ ಕಾಂಬಳೆ, ಪರಶುರಾಮ ಸಂಗಣ್ಣವರ, ಪ್ರಶಾಂತ ಕಾಂಬಳೆ, ಸಂತೋಷ ಕಾಂಬಳೆ, ಜಿನ್ನಪ್ಪ ಕಾಂಬಳೆ, ಶ್ಯಾಮಸುಂದರ ಬ್ಯಾಕುಡೆ, ಅಕ್ಕಮಹಾದೇವಿ ಜೋಕಾನಟ್ಟಿ, ಸರಸ್ವತಿ ಜೋಕಾನಟ್ಟಿ, ಚನ್ನಮಲ್ಲ ಕಾಂಬಳೆ ಅನೇಕ ಬೀದಿ ನಾಟಕ ಕಲಾವಿದರು ನಾಟಕದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗುಳೇದಾ, ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಮತ್ತು ಆಶಾ ಕಾರ್ಯಕತರ್ೆಯರು, ಅಂಗವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮದ ಮುಖಂಡರು, ಸಾರ್ವಜನಿಕರು, ವಿದ್ಯಾರ್ಥಿ, ವಿದ್ಯಾಥರ್ಿನಿಯರು ಬೀದಿ ನಾಟಕವನ್ನು ವೀಕ್ಷಿಸಿ ಹಮ್ಮಿಕೊಂಡ ಬೀದಿ ನಾಟಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.