ಬೆಳಗಾವಿ ನಗರಕ್ಕೆ ಅಜಾತಶತ್ರು ಅಟಲ್ ಚಿತಾಭಸ್ಮ

ಬೆಳಗಾವಿ 25: ದೇಶದ ಅಪ್ರತಿಮ ವ್ಯಕ್ತಿ ಹಾಗೂ ರಾಜಕಾರಣದ ಅಜಾತಶತ್ರು, ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿ ಕಳಶ ಹೊತ್ತ ವಾಹನವು ಶನಿವಾರ ಬೆಳಿಗ್ಗೆ ನಗರಕ್ಕೆ ಆಗಮಿಸಿತು. ಶನಿವಾರದಂದು ನಗರದ ಚೆನ್ನಮ್ಮ ವೃತಕ್ಕೆ ಆಗಮಿಸಿದ ಈ ವಾಹನವನ್ನು ಸಂಸದ ಸುರೇಶ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ್ ಬೆನಕೆ, ಮಹಾಂತೇಶ ದೊಡ್ಡಗೌಡರ, ಲಕ್ಷ್ಮಿ ಹೆಬ್ಬಾಳಕರ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮೇಯರ್ ಬಸಪ್ಪ ಚಿಕ್ಕಲದಿನ್ನಿ ಸ್ವಾಗತಿಸಿ, ಪುಷ್ಪಾರ್ಪಣೆ ಸಮಪರ್ಿಸಿದರು. ಬೆಳಗಾವಿ ಉತ್ತರ ಹಾಗೂ ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಈ ವಾಹನ ಸಂಚರಿಸಿತು.

ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಗೌರವ ಸಮಪರ್ಿಸಿದರು. ಬಳಿಕ ಹಿರೇಬಾಗೇವಾಡಿ ಮಾರ್ಗವಾಗಿ ಬೈಲಹೊಂಗಲ, ಸವದತ್ತಿ, ರಾಮದುರ್ಗ, ಯರಗಟ್ಟಿ, ಗೋಕಾಕ ಹಾಗೂ ಅರಬಾವಿಯಲ್ಲಿ ಈ ವಾಹನ ಸಂಚರಿಸಿ ಸಂಜೆ ಗೋಕಾಕ್ ಪಟ್ಟಣದ ಹೊರವಲಯದ ಘಟಪ್ರಭಾ ನದಿಯಲ್ಲಿ ವಾಜಪೇಯಿ ಅವರ ಚಿತಾಭಸ್ಮ ವಿಸರ್ಜನೆ ಮಾಡಲಾಯಿತು ಎಂದು ತಿಳಿದು ಬಂದಿದೆ.   ಪೋಟೊ ವಾಜಪೇಯಿ