ಲೋಕದರ್ಶನ ವರದಿ
ಗುಳೇದಗುಡ್ಡ: ಅಟಲ್ಜೀ ಅಜಾತ ಶತ್ರು. ಅವರನ್ನು ಇಡೀ ಮಾನವ ಕುಲವೇ ಕೊಂಡಾಡುತ್ತದೆ. ದೇಶ ಕಂಡ ಅಪರೂಪದ ರಾಜಕಾರಣಿ ಎಂದು ಇಲ್ಲಿನ ಮಾಜಿ ಶಾಸಕ ಮಲ್ಲಿಕಾಜರ್ುನ ಬನ್ನಿ ಹೇಳಿದರು.
ಬುಧವಾರ ಅವರು ತಾಲೂಕಿನ ತೆಗ್ಗಿ ಗ್ರಾಮದ ಮುತ್ತಪ್ಪ ಕಾಳನ್ನವರ್ ಅವರ ಹೊಲದಲ್ಲಿ ಸಸಿ ನೆಡುವುದರ ಮೂಲಕ ಮಾಜಿ ಪ್ರಧಾನಿ ಅಟಲ್ಬಿಹಾರಿ ವಾಜಪೇಯಿ ಅವರ ಹುಟುಹಬ್ಬ ಆಚರಿಸಿ ಮಾತನಾಡಿ, ಅಟಲ್ಜೀ ಅವರು ಗುಳೇದಗುಡ್ಡಕ್ಕೆ 1983 ರಲ್ಲಿ ರಾಜ್ಯದ ವಿಧಾನಸಭೆ ಚುನಾವಣೆ ಪ್ರಚಾರಾರ್ಥವಾಗಿ ಬಂದ ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿ ಭ್ರಷ್ಠಾಚಾರ ವಿಷಯದ ಕುರಿತು ಪ್ರಸ್ತಾಪಿಸುತ್ತ, ಮೈತೋ ತೋಲಾಗಯಾ ಲೇಕಿನ್ ಅಂತೋಲೆ ನಹಿ ಎಂದು ಲೇವಡಿ ಮಾಡಿದ್ದರು. ನನಗೆ ನೇಕಾರ ಸಮುದಾಯದಿಂದ ವಿಧಾನಸಭೆಗೆ ಟಿಕೇಟ್ ನೀಡಿದ್ದರು. ಆನ ಅವರ ಭಾಷಣಕ್ಕೆ ಮರುಳಾಗಿ ನನ್ನನ್ನು ಗೆಲ್ಲಿಸಿದ್ದರು. ಅವರಲ್ಲಿ ಅಗಾಧವಾದ ಜ್ಞಾಪಕಶಕ್ತಿ ಇತ್ತು. ಒಂದು ಸಲ ಅವರು ಕಂಡು ಮಾತನಾಡಿಸಿದವರನ್ನು ಪುನ: ಎಷ್ಟೇ ವರ್ಷಗಳ ನಂತರ ಭೇಟಿಯಾದರೂ ಗುತರ್ಿಸುತ್ತದ್ದರೆಂದು ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿ ಹೆಳಿದರು.1924 ಡಿ. 25 ರಂದು ಜನಿಸಿದ ಅಟಲ್ಜೀಯವರ ಸ್ಮರಣೆ ನಮಗೆ ಸದಾ ದಾರಿದೀಪ. ರಾಜಕಾರಣ ಮಾಡುವ ಪ್ರತಿಯೊಬ್ಬರಿಗೂ ದೇಶದ ಅಭಿವೃದ್ಧಿ ಹಾಗೂ ಸರ್ವಪಕ್ಷಗಳೊಂದಿಗಿನ ಸ್ನೇಹಮಯ ಸಂಬಂಧವನ್ನು ಅವರಿಂದ ಕಲಿಯಬೇಕೆಂದು ಹೇಳಿದರು. ಅಂತಹ ಅಪ್ರತಿಮ ರಾಜಕರಣಿಗಳ ಹುಟ್ಟು ಹಬ್ಬವನ್ನು ರೈತ ಸಮುದಯದ ತೆಗ್ಗಿ ಗ್ರಾಮದ ಜನತೆ ವಿನೂತನವಾಗಿ ಹೊಲದಲ್ಲಿ ಸಸಿ ನೆಟ್ಟು ಆಚರಿಸುತ್ತಿರುವುದು ಮಾದರಿ. ಈ ಸಸಿ ಅವರಂತೆ ಹೆಮ್ಮರವಾಗಿ ನೆರಳು ನೀಡಲಿ ಎಂದರು.
ಮುತ್ತಪ್ಪ ಕಾಳನ್ನವರ್, ಚಂದ್ರಶೇಖರ ಕಾಳನ್ನವರ್, ಸಂತೋಷ ಕಾಳನ್ನವರ್, ವೀರಯ್ಯ ಮಣ್ಣೂರಮಠ, ಕಮಲಕಿಶೋರ್ ಮಾಲಪಾಣಿ, ಗೋಕುಲ ಮಾಲಪಾಣಿ, ಯಲ್ಲಪ್ಪ ಶಡ್ಲಗೇರಿ, ನಾಗವ್ವ ಕಾಖನ್ನವರ್ ಸೇರಿದಂತೆ ರೈತರು,ರೈತ ಮಹಿಳೆಯರು ಪಾಲ್ಗೊಂಡಿದ್ದರು.