ಲಿಂಗರಾಜ ಪದವಿ ಮಹಾವಿದ್ಯಾಲಯದಲ್ಲಿ ವಾರ್ಷಿ ಕ ಸಮಾರೋಪ

ಬೆಳಗಾವಿ, 15: ಪರಿಶ್ರಮ ಹಾಗೂ ಶ್ರದ್ಧೆಯಿಂದ ಮಾಡಿದ ಕೆಲಸಕ್ಕೆ ಪ್ರತಿಫಲ ದೊರೆಯುತ್ತದೆ. ನಿಷ್ಠೆಯಿಂದ ವಿದ್ಯಾಥರ್ಿಗಳು ಅಭ್ಯಾಸದಲ್ಲಿ ನಿರತರಾಗಿ ಸಾಫಲ್ಯತೆಯನ್ನು ಹೊಂದಬೇಕೆಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಘಟಕ ನಿದೇರ್ಶಕರಾದ ಡಾ.ಎಸ್.ಎಂ.ಹುರಕಡ್ಲಿ ಹೇಳಿದರು.

ಅವರು ದಿ. 15ರಂದು ಲಿಂಗರಾಜ ಪದವಿ ಮಹಾವಿದ್ಯಾಲಯದ ಪ್ರಶಸ್ತಿ ವಿತರಣೆ ಹಾಗೂ ವಾರ್ಷಿ ಕ  ಚಟುವಟಿಕೆಗಳ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ವಿದ್ಯಾಥರ್ಿಗಳ ಜೀವನ ಬಂಗಾರಮಯವಾಗಿದ್ದು ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಸತತ ಅಭ್ಯಾಸ ಹಾಗೂ ಪರಿಶ್ರಮದಿಂದ ನಿರ್ದಿ ಷ್ಟವಾದ ಗುರಿಯನ್ನು ತಲುಪಬೇಕು. ಜೀವನದಲ್ಲಿ ಬರುವ ಎಡರುತೊಡರುಗಳನ್ನು ಸಮರ್ಥವಾಗಿ ಎದುರಿಸಿ ಜೀವನದಲ್ಲಿ ಸಾಧನೆಯನ್ನು ಗಳಿಸಬೇಕೆಂದು ಕರೆನೀಡಿದರು. ಕೆಎಲ್ಇ ಸಂಸ್ಥೆಯನ್ನು ಕಟ್ಟಿದ ಮಹನೀಯರು ಸಮಾಜಕ್ಕೆ ಮೌಲಿಕವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ಕನಸನ್ನು ನನಸಾಗಿಸುವುದು ವಿದ್ಯಾರ್ಥಿಗಳಾದವರ ಕರ್ತವ್ಯವೆಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಡಾ.ಆರ್.ಎಂ.ಪಾಟೀಲ ಅವರು ಮಾತನಾಡಿದ ಮಹಾವಿದ್ಯಾಲಯವು ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದೆ. ಅದನ್ನು ವಿದ್ಯಾಥರ್ಿಗಳು ಸದುಪಯೋಗಪಡಿಸಿಕೊಳ್ಳಬೇಕು. ಭವಿಷ್ಯತ್ತಿನಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿಕೊಂಡು ಜೀವನ ರೂಪಿಸಿಕೊಳ್ಳಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಇತ್ತೀಚಿಗೆ ಪಿಎಚ್.ಡಿ. ಪದವಿಯನ್ನು ಪಡೆದ ಕೆಎಲ್ಇ ಸಂಸ್ಥೆಯ ಆಜೀವ ಸದಸ್ಯ ಹಾಗೂ ಲಿಂಗರಾಜ ಬಿಬಿಎ ಕಾಲೇಜಿನ ಪ್ರಾಚಾರ್ಯ ಡಾ.ಪ್ರಕಾಶ ಕಡಕೋಳ, ಡಾ.ಬಿ.ಎಂ.ತೇಜಸ್ವಿ, ಹಾಗೂ ಎನ್ಎಸ್ಎಸ್ ಪ್ರಶಸ್ತಿಯನ್ನು ಪಡೆದ ಪ್ರೊ.ಎಸ್.ಎನ್.ಮೂಲಿಮನಿ ಮತ್ತು ಸಾಧನೆಗೈದ ಪ್ರೊ.ವಿನಾಯಕ ವರೂಟೆ, ರಾಘವೇಂದ್ರ ಹಜಗೋಳ್ಕರ, ಪ್ರೊ.ಮಹಾದೇವ ಧರಿಗೌಡರ ಅವರನ್ನು ಸನ್ಮಾನಿಸಲಾಯಿತು.

ಕುಮಾರ ಪ್ರಸಾದ ಪ್ರಾಥರ್ಿಸಿದರು. ಡಾ.ಬಿ.ಎಂ.ತೇಜಸ್ವಿ ಅತಿಥಿಗಳನ್ನು ಪರಿಚಯಸಿದರು. ಡಾ.ಗುರುದೇವಿ ಹುಲೆಪ್ಪನವರಮಠ ವಾರ್ಷಿ ಕ ವರದಿ ವಾಚಿಸಿದರು. ಪ್ರೊ.ಸಾರಿಕಾ ನಗರೆ, ಪ್ರೊ. ಸರಯೂ ಪೋತ್ನಿಸ್, ನೀತಾ ಗಂಗರೆಡ್ಡಿ ನಿರೂಪಿಸಿದರು. ರವೀಂದ್ರ ಚಿಕ್ಕಮಠ ವಂದಿಸಿದರು.

ಬಿ.ಎ. ಪದವಿಯಲ್ಲಿ ಆದರ್ಶ ವಿದ್ಯಾರ್ಥಿ ಗಳಾಗಿ ಕು.ಅರುಣ ಲೋಕಣ್ಣವರ ಹಾಗೂ ಕು.ವರ್ಷ ದೇಶಪಾಂಡೆ, ಬಿ.ಕಾಂ.ದಲ್ಲಿ ಸ್ನೇಹಾ ಮಗದುಮ್ಮ, ಗೌರವ ಸಿಂಗ್ ಅವರಿಗೆ ಗೌರವಿಸಿ ಸತ್ಕರಿಸಲಾಯಿತು.