ವಿಜಯಪುರ, 12 : ವಿಜಯಪುರದ ಬಾಲಕಿಯರ ಸಕರ್ಾರಿ ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ಮಿನಿ ಸ್ಟೇಡಿಯಂ, ಸುಸಜ್ಜಿತ ಗ್ರಂಥಾಲಯ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದರು.
ವಿಜಯಪುರದ ಬಾಲಕಿಯರ ಸರ್ಕಾರರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ಇಕೋ ಕ್ಲಬ್ ಉದ್ಘಾಟನೆ ಹಾಗೂ 1 ಕೋಟಿ ರೂ. ವೆಚ್ಚದಲ್ಲಿ ನಿಮರ್ಿಸಲಾಗುವ ವರ್ಗಕೋಣೆಗಳ ನಿಮರ್ಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಕರ್ಾರಿ ಕಾಲೇಜುಗಳೆಂದರೆ ಒಂದು ರೀತಿ ತಾತ್ಸಾರ ಮನೋಭಾವನೆ ಇದೆ, ಈ ಮನೋಭಾವನೆ ಹೋಗಲಾಡಿಸಲು ನಾನು ಪ್ರಾಮಾಣಿಕವಾಧ ಪ್ರಯತ್ನ ಮಾಡುತ್ತೇನೆ. ಎಸ್ಡಿಎಂಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯೂ ನನ್ನ ಮೇಲಿರುವುದರಿಂದ ಸರ್ಕಾರರಿ ಮಹಾವಿದ್ಯಾಲಯಗಳ ಪ್ರಗತಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.
ಈಗಾಗಲೇ ಸುಸಜ್ಜಿತ ವರ್ಗಕೋಣೆಗಳ ನಿಮರ್ಾಣ, ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗಿದೆ. ಅದರಂತೆ ಮುಂದಿನ ದಿನಗಳಲ್ಲಿ ಸುಸಜ್ಜಿತ ಗ್ರಂಥಾಲಯ, ಮಿನಿ ಸ್ಟೇಡಿಯಂ ಮುಂತಾದವುಗಳನ್ನು ಸ್ಥಾಪಿಸುವುದರ ಮೂಲಕ ಮಾದರಿ ಮಹಾವಿದ್ಯಾಲಯವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಕಾಲೇಜಿನ ಆವರಣ ಹಸಿರುಮಯ ಮಾಡಿ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿ ವಿದ್ಯಾಥರ್ಿನಿಯರ ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.
ಇದೇ ಸಂದರ್ಭದಲ್ಲಿ ಕಾಲೇಜಿನ ವತಿಯಿಂದ ಶಾಸಕ ಯತ್ನಾಳ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ವಿಶ್ರಾಂತ ಜಂಟಿ ನಿದರ್ೆಶಕ ಆರ್.ಪಿ.ಚವ್ಹಾಣ, ವಿಶ್ರಾಂತ ಉಪ ಪ್ರಾಚಾರ್ಯ ಎನ್.ಕೆ.ಮನಗೊಂಡ, ಶರಣಮ್ಮ ಅವಜಿ, ಮಡಿವಾಳಪ್ಪ ಮಡಿವಾಳರ, ಭಿಮಾಶಂಕರ ಲಕ್ಕೋಂಡ, ಧಮರ್ು ರಾಠೋಡ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿದರ್ೆಶಕ ಎ.ಬಿ.ಅಂಕದ, ಇಕೋ ಕ್ಲಬ್ ಸಂಚಾಲಕ ಪ್ರೊ.ಎಸ್.ಆರ್.ಹಳ್ಳಿ, ಶ್ರೀಮತಿ.ಎಂ.ಎಂ.ಪಾಟೀಲ, ಪ್ರೊ. ಎಸ್.ಸಿ.ತೋಳನೂರ, ಪ್ರೊ.ಎ.ಎಂ.ಕಂದಗಲ್ಲ, ಪ್ರೊ.ಎಸ್.ಬಿ.ಪಾಟೀಲ, ಶ್ರೀಮತಿ.ಎಲ್.ಬಿ.ರೆಡ್ಡಿ, ಶ್ರೀಮತಿ.ಎಸ್.ಎನ್.ದೀಕ್ಷಿತ, ಶ್ರೀಮತಿ ಛಾಯದೇವಿ ದ್ಯಾಪೂರ, ಶ್ರೀಮತಿ.ಎಂ.ಎಂ.ಪಾಟೀಲ, ವೀಣಾ ಮೈತ್ರಿ ಉಪಸ್ಥಿತರಿದ್ದರು.
ಪ್ರಾಚಾರ್ಯ ಪ್ರೊ. ಎಚ್.ಐ.ಮಾಲಗಾರ ಸ್ವಾಗತಿಸಿದರು. ಪ್ರೊ.ಎಂಬಿ.ರಜಪೂತ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಎಸ್.ಬಿ.ಸಾವಳಸಂಗ ವಂದಿಸಿದರು.