ಲವ್ಡೇಲ್ ಸೆಂಟ್ರಲ್ ಶಾಲೆಯಲ್ಲಿ ಸಿ.ಬಿ.ಎಸ್.ಇ ಸಂಪನ್ಮೂಲ ವ್ಯಕ್ತಿಗಳ ಕಾರ್ಯಾಗಾರ

ಬೆಳಗಾವಿ 21: ಮಹಾಂತೇಶ ನಗರದ ಲವ್ಡೇಲ್ ಸೆಂಟ್ರಲ್ ಶಾಲೆಯಲ್ಲಿ ಶನಿವಾರ ದಿ. 21ರಂದು 'ಮಾಧ್ಯಮಿಕ ಶಿಕ್ಷಣದಲ್ಲಿ ಬದಲಾದ ಮೌಲ್ಯಮಾಪನ ಪದ್ಧತಿ ಮತ್ತು ರಚನಾತ್ಮಕ ಪರಿಹಾರೋಪಾಗಳು' (ಖಜಟಠಜಜಟಟಜಜ ಣಡಿಣಛಿಣಣಡಿಜ ಠಜಿ ಚಿಜಟಜಟಿಣ ಜಿಠಡಿ ಜಛಿಠಟಿಜಚಿಡಿಥಿ ಛಿಟಚಿಜ)ಎಂಬ ವಿಷಯದ ಕುರಿತಾಗಿ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. 

 ಕೇಂದ್ರೀಯ ಶಿಕ್ಷಣ ವಲಯ ಚೆನ್ನೈ ವ್ಯಾಪ್ತಿಯಲ್ಲಿ ಬರುವ ವಿವಿಧ ಸಿ.ಬಿ.ಎಸ್.ಇ ಶಾಲೆಗಳ ಸುಮಾರು 66 ಕ್ಕೂ ಹೆಚ್ಚು ಪ್ರಾಚಾರ್ಯರುಗಳು ಕಾಯರ್ಾಗಾರದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲವ್ ಡೇಲ್ ಸೆಂಟ್ರಲ್ ಶಾಲೆಯ ಪ್ರಾಚಾರ್ಯ ಲಕ್ಷ್ಮೀ ಇಂಚಲ ಅವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ 'ಉತ್ತರ ಕನರ್ಾಟಕ ಸಹೋದಯ'ದ ಅಧ್ಯಕ್ಷ ಅರಿಂಧಮ್ ರಾಯ್ ಚೌಧರಿ ಮತ್ತು ವಿಜಯಪುರದ ಶಾರದಾ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಜಿಮೇಶ ಪೌಲ್ ಅವರು ಆಗಮಿಸಿದ್ದರು. ಕಾರ್ಯಕ್ರಮವು ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಂಡಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಅರಿಂಧಮ್ ರಾಯ್ ಚೌಧರಿ ಮತ್ತು ಜಿಮೇಶ ಪೌಲ್ ರವರುಗಳು ಬದಲಾದ ಮೌಲ್ಯಮಾಪನ ಪದ್ಧತಿಯಲ್ಲಿ ಅಳವಡಿಸಲಾದ ಹೊಸ ಪ್ರಸ್ತಾವಗಳು, ಸುಧಾರಣಾ ಪದ್ಧತಿಗಳು, ವಿದ್ಯಾಥರ್ಿಗಳ ಮೌಲ್ಯಮಾಪನ ಹಂತಗಳು, ನೋಟ್ ಪುಸ್ತಕಗಳನ್ನು ನಿರ್ವಹಿಸುವ ಅಂಶಗಳು, ಮಾದರಿ ಪ್ರಶ್ನೆಪತ್ರಿಕೆ-ಉತ್ತರ ಪತ್ರಿಕೆ-ನೀಲನಕ್ಷೆ ರಚನೆ ಮತ್ತು ಅವುಗಳನ್ನು ನಿರ್ವಹಿಸುವ ಕುರಿತಾಗಿ ಅಗತ್ಯ ಮಾಹಿತಿಯನ್ನು ಮನದಟ್ಟಾಗುವಂತೆ ನೀಡಿದರು. ಕಾಯರ್ಾಗಾರದಲ್ಲಿ ಪಾಲ್ಗೊಂಡ ಪ್ರಾಚಾರ್ಯರುಗಳ ಸಂದೇಹಗಳನ್ನು ಅತ್ಯಂತ ಅರ್ಥಪೂರ್ಣವಾಗಿ ಪರಿಹರಿಸಿದರು.

        ಸಮಾರಂಭದಲ್ಲಿ ಶಾಲೆಯ ವಿವಿಧ ಶಾಲೆಗಳ ಪ್ರಾಚಾರ್ಯರುಗಳು, ಶಿಕ್ಷಕ ವೃಂದ, ಶಾಲಾ ಸಿಬ್ಬಂದಿ, ಉಪಸ್ಥಿತರಿದ್ದರು.