ದೇವಗಿರಿಯಲ್ಲಿ ಪಂ. ಪುಟ್ಟರಾಜ ಕವಿ ಗವಾಯಿಗಳವರ 111 ನೇ ಜಯಂತ್ಯೋತ್ಸವ, ಸನ್ಮಾನ ಸಮಾರಂಭ

At Devgiri Pt. 111th birth anniversary of Puttaraja Kavi Gawaigala, honor ceremony

ದೇವಗಿರಿಯಲ್ಲಿ ಪಂ. ಪುಟ್ಟರಾಜ ಕವಿ ಗವಾಯಿಗಳವರ 111 ನೇ ಜಯಂತ್ಯೋತ್ಸವ, ಸನ್ಮಾನ ಸಮಾರಂಭ 

ಗದಗ 05:  ಗಾನ ಗಂಧರ್ವ ಕಲಾಟ್ರಸ್ಟ್‌ ಗದಗ ಹಾಗೂ ಡಾ. ಪಂ. ಪುಟ್ಟರಾಜ  ಕವಿ ಗವಾಯಿಗಳವರ  ಸಂಗೀತ ಪಾಠಶಾಲೆ,  ಧಾರ್ಮಿಕ ಮತ್ತು ಸಾಂಸ್ಕೃತಿಕ  ಕೇಂದ್ರ ದೇವಗಿರಿ ಇವರ ಸಹಯೋಗದಲ್ಲಿ ಪದ್ಮಭೂಷಣ ಡಾ. ಪಂ. ಪುಟ್ಟರಾಜ  ಕವಿ ಗವಾಯಿಗಳವರ 111 ನೇ ಜಯಂತ್ಯೋತ್ಸವವನ್ನು  ದೇವಗಿರಿಯಲ್ಲಿ ಆಚರಿಸಲಾಯಿತು.  ಈ ಕಾರ್ಯಕ್ರಮದ  ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ  ಅಭಿನವ ಚನ್ನಬಸವ ಮಹಾಸ್ವಾಮಿಗಳು ವಹಿಸಿದ್ದರು. ಸಾನಿದ್ಯವನ್ನು  ಕೂಡಲ ಗುರು ನಂಜೇಶ್ವರಮಠದ ಗುರುಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು  ಮುಂಡರಗಿ ಬ್ರಹನ್ಮಠ ಪೂಜ್ಯಶ್ರೀ ಡಾ. ವೀರೇಶ್ವರ ಶರಣರು ಸಮ್ಮುಖ ವಹಿಸಿದ್ದರು.  ದೇವಗಿರಿಯ ಡಾ. ಪಂ. ಪುಟ್ಟರಾಜ  ಕವಿ ಗವಾಯಿಗಳವರ  ಸಂಗೀತ ಪಾಠಶಾಲೆ,  ಧಾರ್ಮಿಕ ಮತ್ತು ಸಾಂಸ್ಕೃತಿಕ  ಕೇಂದ್ರದ ಅಧ್ಯಕ್ಷರಾದ  ಕುಮಾರಸ್ವಾಮಿ, ಗಡ್ಡದಮಠ ಉಪಸ್ಥಿತರಿದ್ದರು. ಮಾಜಿ ಶಾಸಕ ಶಿವರಾಜ ಸಜ್ಜನ ಅಧ್ಯಕ್ಷತೆ ವಹಿಸಿದ್ದರು.  ಎಸ್‌. ಆರ್‌. ಪಾಟೀಲ, ಗದುಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೀರಯ್ಯಸ್ವಾಮಿ ಹಿರೇಮಠ, ಹಾವೇರಿ ಸಹಾಯಕ ನಿರ್ದೇಶಕರಾದ ಆರ್‌. ವಿ. ಚಿನ್ನಕಟ್ಟಿ, ಗದುಗಿನ  ನವರತ್ನ ಜೂವೇಲರ್ಸ್‌  ಮಾಲೀಕ ಶಿದ್ದಲಿಂಗೇಶ ಮೂರಶಿಳ್ಳಿನ, ಹುಬ್ಬಳ್ಳಿ ಬಿವಿಬಿ ಇಂಜನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ ಅನೀಲಕುಮಾರ ನಂದಿ, ಗುಜರಾತ ಸೂರತ ಸಾರ್ವಜನಿಕ ಇಂಜನಿಯರಿಂಗ್ ಪ್ರಾಚಾರ್ಯ ಡಾ.ವೈಶಾಲಿ  ಮುಂಗರವಾಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ನಂತರ ಶ್ರೀಗುರು ಪುಟ್ಟರಾಜರ ಸಂಗೀತ ಸಮಾರೋಪ ನಡೆಯಿತು,  ಇದೇ ಸಂದರ್ಭದಲ್ಲಿ  8 ಜೋಡಿಗಳ ಸಾಮೂಹಿಕ ವಿಹಾಹಗಳು ಜರುಗಿದವು. ಸಂಜೆ ಧರ್ಮಸಭೆ, ಶ್ರೀಗುರು ಪುಟ್ಟರಾಜ ಪುರಸ್ಕಾರ- 2025 ಸಮಾರಂಭ ಜರುಗಿತು. ಕಲಾವಿದರಿಗೆ, ಗಾಯನಶ್ರೀ, ವಾದನಶ್ರೀ, ಸಾಹಿತ್ಯಶಿ್ಭೂ, ರಂಗಶ್ರೀ, ಕೀರ್ತನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭವ್ಯ ಅಲಂಕಾರದಿಂದ ಶ್ರೀಗಳ ಭಾವಚಿತ್ರವನ್ನು ತೊಟ್ಟಿಲಲ್ಲಿ ಇಟ್ಟು ಜೋಗುಳ ಹಾಡಿದರು. ಇದಕ್ಕೂ ಮುನ್ನ  ಬೆಳಗ್ಗೆ 8 ಗಂಟೆಗೆ  ಗುರುಗಳ ಭಾವಚಿತ್ರದೊಂದಿಗೆ ಮೆರವಣಿಗೆ ಜರುಗಿತು.  ಈ ಮೆರವಣಿಗೆಯಲ್ಲಿ  ಸಕಲ ವಾದ್ಯಗಳೊಂದಿಗೆ, ಡೊಳ್ಳು ಕುಣಿತ, ಮುತ್ತೈದೆಯರು ಕುಂಬ ಹೊತ್ತು ನಡೆದರು.