ಬಾಗಲಕೋಟೆ: ಪ್ರತಿನಿತ್ಯದ ಕಾರ್ಯ ಒತ್ತಡದಲ್ಲಿಯೂ ಸಹ ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ನೌಕರರ ರಕ್ಷಣೆಗೆ ಸರಕಾರಿ ನೌಕರರ ಸಂಘ ಬದ್ಧವಾಗಿದೆ ಎಂದು ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ನವನಗರದ ಸಾಹಿತ್ಯ ಪರಿಷತ್ ಸಭಾಭವನದಲ್ಲಿಂದು ಜಿಲ್ಲೆಯ ನೂತನ ಪಧಾದಿಕಾರಿಗಳ ಪದಗ್ರಹಣ ಹಾಗೂ ರಾಜ್ಯ ಪದಾಧಿಕಾರಿಗಳಿಗೆ ಅಭಿನಂಧನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇದುವರೆಗೆ ರಾಜ್ಯ ಸಕರ್ಾರ ನೌಕರರ ಸಂಘದ ಅದ್ಯಕ್ಷ ಸ್ಥಾನವನ್ನು ದಕ್ಷಿಣ ಕನರ್ಾಟಕದವರೆ ವಹಿಸಿಕೊಳ್ಳುತ್ತಿದ್ದು, ಈ ಬಾರಿ ಅದೃಷ್ಟ ಎಂಬಂತೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳೆರಡೂ ಉತ್ತರ ಕನರ್ಾಟಕಕ್ಕೆ ಸ್ಥಾನ ದೊರೆತಿರುವುದು ಸಂತಸ ತಂದಿದೆ ಎಂದರು.
2013 ರಲ್ಲಿಯೇ ಬಾಗಲಕೋಟೆಯ ಜಿಲ್ಲಾಧ್ಯಕ್ಷ ಎಂ.ಬಿ.ಬಳ್ಳಾರಿ ಹಾಗೂ ನಾವು ಸರಕಾರಿ ನೌಕರರ ಸಂಘದಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘದಲ್ಲಿ ಖಜಾಂಚಿ ಹಾಗೂ ಕಾರ್ಯದಶರ್ಿ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವದಕ್ಕೆ ಬಳ್ಳಾರಿಯವರ ಶ್ರಮ ಅತೀಯಾಗಿದ್ದು ರಾಜ್ಯಾದ್ಯಾಂತ 17 ಸಾವಿರ ಕಿ.ಮೀ ಪ್ರವಾಸಮಾಡಿ ಜಯಕ್ಕೆ ಕಾರಣರಾದ ಬಳ್ಳಾರಿ ಹಾಗೂ ಬಾಗಲಕೋಟೆ ಜಿಲ್ಲಾ ಸರಕಾರಿ ನೌಕರರ ಸಂಘದ ಸರ್ವ ಸದಸ್ಯರಿಗೂ ಋಣಿಯಾಗಿರುತ್ತೇನೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಾಗಲಕೋಟೆ ಜಿಲ್ಲಾ ಸರಕಾರಿ ನೌಕರ ಸಂಘದ ಅಧ್ಯಕ್ಷ ಎಂ.ಬಿ.ಬಳ್ಳಾರಿ ಜಿಲ್ಲಾ ಸರಕಾರಿ ನೌಕರರ ಸಂಘವು ಜಿಲ್ಲೆಯ ಎಲ್ಲ ಸರಕಾರಿ ನೌಕರರ ರಕ್ಷಣೆಗೆ ಸದಾ ಸಿದ್ಧವಾಗಿದು,್ದ ತಮ್ಮ ಸೇವೆಗೆ ಅಣಿಮಾಡಿಕೊಟ್ಟಿರುವದಕ್ಕೆ ಜಿಲ್ಲೆಯ ಎಲ್ಲ ಸರಕಾರಿ ನೌಕರರಿಗೆ ಅಭಿನಂದಿಸಿದರು.
ಜಿಲ್ಲಾ ನೌಕರರ ಸಂಘದ ಕಾರ್ಯಕಾರಿ ಸಮಿತಿ, ಕನರ್ಾಟಕ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಘ, ಪದವಿ ಶಿಕ್ಷಣ ಇಲಾಖೆ ಸಂಘ, ಜಿಲ್ಲಾ ಹಾಗೂ ತಾಲೂಕಾ ನೌಕರರ ಸಂಘದ ವತಿಯಿಂದ ಜಿಲ್ಲಾ ಹಾಗೂ ರಾಜ್ಯ ನೌಕರರ ಸಂಘದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯ ಮಂಜುನಾಥ ಸುಳ್ಳೊಳ್ಳಿ, ರಾಜ್ಯ ನೌಕರರ ಸಂಘದ ಪ್ರಧಾನ ಕಾರ್ಯದಶರ್ಿ ಜಗದೀಶ ಪಾಟೀಲ, ಖಜಾಂಚಿ ಆರ್.ಶ್ರೀನಿವಾಸ, ಉಪಾದ್ಯಕ್ಷ ಬಸವರಾಜ ಎಸ್, ರಾಜ್ಯ ಪರಿಷತ್ ಸದಸ್ಯ ಎಸ್.ವಿ.ಸತ್ಯರಡ್ಡಿ, ಕಾರ್ಯದಶರ್ಿ ವಿಠಲ ವಾಲಿಕಾರ, ಖಜಾಂಚಿ ಎಸ್.ಕೆ.ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.