ಕೃಷಿ ಪತ್ತಿನ ಸಂಘದ ಚುನಾವಣೆ : ಸಹಕಾರ ಪೆನಲ್ಗೆ ಜಯ

ಶಾಸಕ ಉಮೇಶ ಕತ್ತಿಯವರ ಜೊತೆ ಸಹಕಾರ ಪೆನೆಲಿನ ವಿಜಯಶಾಲಿ ಅಭ್ಯಥರ್ಿಗಳು.



ಹುಕ್ಕೇರಿ 30: ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ  ರವಿವಾರ ದಿ.29ರಂದು ಐದು ವರ್ಷದ ಕಾಲಾವಧಿಯ ಆಡಳಿತ ಮಂಡಳಿಗೆ ಬಿರುಸಿನ ಚುನಾವಣೆ ನಡೆದು ರೈತ ಅಭಿವೃದ್ಧಿ ಪೆನಲ್ 4 ಸ್ಥಾನ ಹಾಗೂ ಸಹಕಾರ ಪೆನಲ್ 8 ಸ್ಥಾನಗಳನ್ನು ಗಳಿಸಿ ಆಡಳಿತ ಪಕ್ಷ ತನ್ನ ವರ್ಚಸನ್ನು ಉಳಿಸಿಕೊಂಡರೆ ರೈತ ಅಭಿವೃದ್ಧಿ ಪೆನ್ಲಗೆ ಮುಖಭಂಗವಾದಂತಾಯಿತು. ಕೊನೆ ಕ್ಷಣದಲ್ಲಿ ಪೆನಲ್ ಬಿಟ್ಟು ಅಭ್ಯಥರ್ಿಗಳು ವೈಯಕ್ತಿಕವಾಗಿ ಪ್ರಚಾರ ಮಾಡಿದರು. ಪ್ರತಿಶತ 71 ರಷ್ಠು ಮತದಾನವಾಯಿತು ಸದಸ್ಯರು ಸರದಿಯಲ್ಲಿ ನಿಂತು ನಿಭರ್ಿಡೆಯಿಂದ ಮತದಾನ ಮಾಡಿದರು.

          2018-19 ರಿಂದ 2023-24 ನೇ ಸಾಲಿಗಾಗಿ ಒಟ್ಟು 12 ಸ್ಥಾನಗಳ ಪೈಕಿ ಚುನಾವಣೆ ಮುನ್ನ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಉಮೇದರರು ಅವಿರೋಧವಾಗಿ ಆಯ್ಕೆಗೊಂಡಿದ್ದರಿಂದ ಉಳಿದ 10 ಸ್ಥಾನಗಳಿಗಾಗಿ 25 ಉಮೇದವಾರರು ಚುನಾವಣಾ ಕಣದಲ್ಲಿದ್ದರು. ಸಹಕಾರ ಪೆನಲ್ ಹಾಗೂ ರೈತ ಅಭಿವೃದ್ಧಿ ಪೆನಲ್ಗಳ ಮಧ್ಯ ರವಿವಾರ ಮುಂಜಾನೆ 9 ರಿಂದ ಮಧ್ಯಾನ್ಹ 4 ಘಂಟೆವರೆಗೆ ಮತದಾನ ಶಾಂತಿಯುತವಾಗಿ ನಡೆಯಿತು. 

ಸಹಕಾರ ಪೆನಲ್ ಹಾಗೂ ರೈತ ಅಭಿವೃದ್ಧಿ ಪೆನಲ್ಗಳ ಮಧ್ಯ ಸಂಧಾನದ ಮಾತುಕತೆ ನಡೆದು ವಿಫಲಗೊಂಡ ಹಿನ್ನೆಲೆಯಲ್ಲಿ ಚುನಾವಣೆ ಎದುರಿಸುವ ಪರಿಸ್ಥಿತಿ ನಿಮರ್ಾಣವಾಗಿತ್ತು. ಸಾಲಗಾರ ಸಾಮಾನ್ಯ ಕ್ಷೇತ್ರದ 5 ಸ್ಥಾನ, ಸಾಲಗಾರರ ಹಿಂದುಳಿದ ವರ್ಗಅ ಮೀಸಲು ಕ್ಷೇತ್ರ 1 ಸ್ಥಾನ ಸಾಮಾನ್ಯ ಬಿನ್ ಸಾಲಗಾರ ಕ್ಷೇತ್ರದ ಒಂದು ಸ್ಥಾನ ಹಾಗೂ ಸಾಲಗಾರ ಮಹಿಳಾ ಮೀಸಲು ಕ್ಷೇತ್ರದಿಂದ 2 ಸ್ಥಾನಗಳಿಗೆ ಹೀಗೆ ಒಟ್ಟು 10 ಸ್ಥಾನಗಳಿಗೆ  ಮತದಾನ ನಡೆಯಿತು. ಈ ಚುನಾವಣೆಯಿಂದಾಗಿ ಸುಮಾರು ರೂ. 3 ಲಕ್ಷಕ್ಕೂ ಮಿಕ್ಕಿ ಸಂಘದ ಮೇಲೆ ಆಥರ್ಿಕ ಹೊರೆ ಬಿದ್ದಿದೆ.. ಚುನಾವಣೆಯ ಮತದಾನ ಸುರಕ್ಷಿತವಾಗಿ ನಡೆಯಲು 6 ಮತದಾನ ಕೇಂದ್ರಗಳ ವ್ಯವಸ್ಥೆ ಮಾಡಲಾಗಿತ್ತು. ಮತದಾನದ ಪ್ರಕ್ರಿಯೆ ಮುಗಿದ ನಂತರ ಮತ ಎಣಿಕೆ ನಡೆದು ಚುನಾವಣಾಧಿಕಾರಿ ಎಮ್.ಎಮ್. ಬಿರಾದರ ಪಾಟೀಲ ಫಲಿತಾಂಶ ಘೋಷಿಸಿದ ನಂತರ ವಿಜಯಸಾಲಿ ಅಭ್ಯಥರ್ಿಗಳ ಬೆಂಬಲಿಗರು ಸಿಹಿ ಹಂಚುವದರ ಜೊತೆಗೆ ಗುಲಾಲು ಹಾಗೂ ಪಟಾಕಿಗಳನ್ನು ಹಾರಿಸಿ ವಿಜಯೋತ್ಸವ ಆಚರಿಸಿದರು 

         ಸಾಮಾನ್ಯ ಸಾಲಗಾರ ಸಾಮಾನ್ಯ ಕ್ಷೇತ್ರದ 1948 ಸದಸ್ಯರ ಪೈಕಿ 1438 ಹಾಗೂ ಬಿನ್ ಸಾಲಗಾರ ಕ್ಷೇತ್ರದ 438 ಸದಸ್ಯರ ಪೈಕಿ 312 ಸದಸ್ಯರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು 

ವಿಜಯಶಾಲಿ ಅಭ್ಯಥರ್ಿಗಳು : ಅಣ್ಣಪ್ಪಾ ಕಲಗೌಡ ಪಾಟೀಲ (764) ಮಲ್ಲಿಕಾಜರ್ುನ ಬಸಪ್ರಭು ನಾಯಿಕ (413) ರೈತ ಅಭಿವೃದ್ಧಿ ಪೆನಲ್ ಅಭ್ಯಥರ್ಿಗಳು. ಅಣ್ಣಪ್ಪ ಈಶ್ವರಯ್ಯಾ ಸಂಬಾಳ (456), ಭೀಮಪ್ಪಾ ಮಹಾವೀರ ಅಳವಡೆ (545) ಸೋಮನಾಥ ಬಸವರಾಜ ಪರಕನಟ್ಟಿ (435) ಸರ್ವರೂ ಸಹಕಾರ ಪೆನಲ್ ಅಭ್ಯಥರ್ಿಗಳು

ಸಾಲಗಾರರ ಮಹಿಳಾ ಮೀಸಲು ಕ್ಷೇತ್ರ : ಭಾಗೀರಥಿ ಚಂದ್ರಶೇಖರ ಖಾಡ್ಯಾಗೋಳ (667)  ಶೋಭಾ ಸುರೇಶ ಬಾಯಿನಾಯಿಕ (606) ಇರ್ವರೂ ಸಹಕಾರ ಪೆನಲ್ ಅಭ್ಯಥರ್ಿಗಳು

ಸಾಲಗಾರರ ಹಿಂದುಳಿದ ವರ್ಗ ಅ ಮೀಸಲು ಕ್ಷೇತ್ರ  : ರಾಜು ಕರಿಗಾರ ಸಹಕಾರ ಪೆನಲ್. ಬಾಬು ದೇವಪ್ಪಾ ಖುಬನ್ನಗೋಳ ರೈತ ಅಭಿವೃದ್ಧಿ ಪೆನಲ್

ಸಾಮಾನ್ಯ ಬಿನ್ ಸಾಲಗಾರ ಕ್ಷೇತ್ರ : ಅರವಿಂದ (ಪುಟ್ಟು) ನಾರಾಯಣ ದೇಶಪಾಂಡೆ (184) ರೈತ ಅಭಿವೃದ್ಧಿ ಪೆನಲ್