ಬಾಗಲಕೋಟೆ12: ಜಿಲ್ಲೆಯಲ್ಲಿ ವಿವಿಧ ರೀತಿಯ ತೊಂದರೆ ಅನುಭವಿಸುತ್ತಿರುವ 1683 ಹಿರಿಯ ನಾಗರಿಕರು ಕಳೆದ ಆರು ತಿಂಗಳಲ್ಲಿ ಹಿರಿಯರ ಸಹಾಯವಾಣಿಯಿಂದ ನೆರವು ಪಡೆದಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.
ಮಕ್ಕಳು ಸೊಸೆಯರಿಂದ ಆಸ್ತಿ ವಿಚಾರ, ದೈಹಿಕ ಹಾಗೂ ಮಾನಸಿಕ ಹಿಂಸೆಗೊಳಪಡುವ ಹಿರಿಯ ನಾಗರಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿರುವ ಹಿರಿಯರ ಸಹಾಯವಾಣಿ 1090 ರಿಂದ ಪ್ರತಿ ದಿನ ಒಂದಿಲ್ಲ ಒಂದು ರೀತಿಯ ಪ್ರಕರಣ ದಾಖಲಾಗುತ್ತಿದ್ದು, ಪೊಲೀಸ್ ಇಲಾಖೆ ಇಂತಹ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿ ನೆರವು ನೀಡುತ್ತಿದೆಯೆಂದು ತಿಳಿಸಿದ್ದಾರೆ.
ತಂದೆ ತಾಯಿಗಳು ಇಳಿಯವಯಸ್ಸಿನಲ್ಲಿ ಮಕ್ಕಳಿಂದ ತೊಂದರೆ ಅನುಭವಿಸುವದನ್ನು ತಡೆಯಲು ಸಕರ್ಾರವು ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸಿದ್ದು, ಹಿರಿಯ ನಾಗರಿಕರ ಕಲ್ಯಾಣ ಹಾಗೂ ಭದ್ರತಾ ಕಾಯ್ದೆ 2007ರ ರನ್ವಯ ತಂದೆ ತಾಯಿಯರ ಯೋಗಕ್ಷೇಮ ನೋಡಿಕೊಳ್ಳದ ಮಕ್ಕಳು ಸೊಸೆಯಂದಿರಿಗೆ ಮೂರು ತಿಂಗಳು ಜೈಲು ಹಾಗೂ ದಂಡವನ್ನು ವಿಧಿಸಬಹುದಾಗಿದೆ.
ಆಧುನಿಕತೆಯ ಆಡಂಭರಗಳಿಗೆ ಹಣದಾಸೆಗೆ ಒಗ್ಗುವ ಯುವ ಪೀಳಿಗೆಯು ಹಿರಿಯ ನಾಗರಿಕರನ್ನು ಸಂಕಷ್ಟಕ್ಕೆ ದೂಡಿದ್ದು ಇಂಥ ಹಿರಿಯರ ಸುರಕ್ಷತೆಗೆ ಪೊಲೀಸ ಇಲಾಖೆ ಸದಾ ಅಭಯ ಹಸ್ತ ನೀಡುತ್ತಿದೆ. ಹಿರಿಯರನ್ನು ಗೌರವಿಸುವ ಅರಿವು ಕಾರ್ಯಕ್ರಮಗಳನ್ನು ಸಂಬಂಧಿಸಿದ ಇಲಾಖೆಗಳು ಹೆಚ್ಚು ಹಮ್ಮಿಕೊಂಡು ಯುವ ಸಮೂಹದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಲೋಕೇಶ ಜಗಲಾಸರ ತಿಳಿಸಿದ್ದಾರೆ.
ಸಹಾಯವಾಣಿಯಲ್ಲಿ ಕುಮಾರ ರೋಣದ ಬೈರೇಗೌಡ ಮಲ್ಲಾಪುರ ಹಾಗೂ ಲಕ್ಷ್ಮಣ ಬಡಿಗೇರ ಇಲಾಖೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ನೆರವು ಕೋರಿ ಬರುವವರ ಸಂಬಂಧಿಗಳನ್ನು ಕರೆಸಿ ಆಪ್ತಸಲಹೆ ನೀಡುತ್ತೆವೆ, ತಿಳಿ ಹೇಳುತ್ತವೆ.
ಸಮಸ್ಯೆ ಪರಿಹಾರ ಆಗುವಲ್ಲಿ ಕೌನ್ಸಲಿಂಗ್ ಮಾಡುತ್ತೇವೆ. ಸ್ಥಳದಲ್ಲಿ ಬಗೆಹರಿದರೂ ಸಂಬಂಧಿಗಳ ಮೇಲೆ ನಿಗಾ ವಹಿಸುತ್ತೆವೆ ಎಂದು ತಿಳಿಸಿದ್ದಾರೆ.
ಸಮಸ್ಯೆ ಬಗೆಹರಿಯದಿದ್ದರೆ ತಾಲೂಕು ಹಾಗೂ ಉಪವಿಭಾಗದ ದಂಡಾಧಿಕಾರಿಗಳಿಗೆ ಬರೆಯುತ್ತೆವೆ. ಹಾಗೂ ವೃದ್ಧಾಶ್ರಮಕ್ಕೆ ಕಳುಹಿಸುತ್ತೆವೆ. ಸಂಬಂಧಪಟ್ಟವರ ಮೇಲೆ ಕಾನೂನುಕ್ರಮ ಜರುಗಿಸುತ್ತೆವೆ ಎಂದು ಸಹಾಯವಾಣಿ ಸಿಬ್ಬಂದಿಗಳು ಹೇಳಿದರು.
ಜಿಲ್ಲೆಯಲ್ಲಿ ಹಿರಿಯ ನಾಗರಿಕರಿಗಾಗಿ 3 ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಬೀಳಗಿಯ ಶ್ರೀ ಕನಕದಾಸ ಗ್ರಾಮೀಣ ಅಭವೃದ್ಧಿ ಸಂಸ್ಥೆ, ಇಳಕಲ್ಲಿನ ಅಮ್ಮಾ ಸೇವಾಸಂಸ್ಥೆ ಹಾಗೂ ಬಾಗಲಕೋಟೆಯಲ್ಲಿನ ನಿರ್ಗತಿಕರ ವಸತಿ ಕೇಂದ್ರಗಳು ಹಿರಿಯರ ಯೋಗಕ್ಷೇಮಕ್ಕೆ ಸೇವೆ ಸಲ್ಲಿಸುತ್ತಿವೆ.
ಸಪ್ಟಂಬರ ಮಾಹೆಯಲ್ಲಿ 1090 ಟೊಲ್ ಪ್ರೀ ಮೂಲಕ 616 ಕರೆಗಳು, ಇತರೆ ದುರವಾಣಿ ಸಂಖ್ಯೆ ಮೂಲಕ 544 ಕರೆಗಳು, ದೂರುಗಳು 32, ಮಾಹಿತಿ ಕೊರಿಬಂದ ಕರೆಗಳು 418 ಸೇರಿ ಒಟ್ಟು 1610 ಕರೆಗಳು ಬಂದಿರುತ್ತವೆ. ಹಾಗೂ ಕಟುಂಬದ ಸದಸ್ಯರಿಂದ ಮೊಸ, ವಂಚನೆ ಹಾಗೂ ಕಿರುಕುಳಕ್ಕೆ ಸಂಬಂಧಿಸಿದ 32 ದೂರುಗಳು ದಾಖಲಾಗಿವೆ.
ಈ ಪೈಕಿ 731 ದೂರುಗಳಿಗೆ ಕಾನೂನು ಸಲಹೆ ಹಾಗೂ ಸಹಾಯ, 864 ಸಮಾಲೊಚನೆ, 12 ಮನೆ ಭೇಟಿ, 3 ವೃದ್ಧಾಶ್ರಮ ಭೇಟಿ ಸೇರಿ ಒಟ್ಟು 1610 ದೂರುಗಳಿಗೆ ಸೇವೆ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯ ಬೀಳಗಿ ತಾಲೂಕಿನ ತೆಗ್ಗಿ ಗ್ರಾಮದ ಶ್ರೀ ಕನಕದಾಸ ಗ್ರಾಮೀಣ ಅಭಿವೃದ್ದಿ ಸಂಸ್ಥೆಯು ಕಳೆದ 2008-09 ರಿಂದಲೇ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಾಬಂದಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಆವರಣದಲ್ಲಿ ಇರುವ ಸಹಾಯವಾಣಿ ಕೇಂದ್ರದಲ್ಲಿ ದಿನದ 24 ಗಂಟೆಗಳ ಅವಧಿಯಲ್ಲಿ ಸಂಸ್ಥೆಯ ಸಿಬ್ಬಂದಿಗಳು ಎರಡು ಶಿಪ್ಟಗಳಲ್ಲಿ ತಲಾ ಇಬ್ಬರಂತೆ ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ಬಂದ ಕರೆಗಳನ್ನು ದಾಖಲಿಸುವದರ ಕ್ರಮವಹಿಸಲಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೆರವು ಈ ನಿಟ್ಟಿನಲ್ಲಿ ಸಾಕಷ್ಟು ಸಹಕಾರವಾಗಿದೆ.
- ಪರಶುರಾಮ ದರೇಗೌಡ, ಅಧ್ಯಕ್ಷರು, ಕನಕದಾಸ ಗ್ರಾಮೀಣ ಅಭಿವೃದ್ದಿ ಸಂಸ್ಥೆ, ತೆಗ್ಗಿ