ಸಂಸ್ಕೃತಿ ಸಂಘದಿಂದ ಸಂತ್ರಸ್ತರಿಗೆ ನೆರವು

ಬಾಗಲಕೋಟೆ: ಮೈಸೂರಿನ ಉತ್ತರ ಕನರ್ಾಟಕ ಸಂಸ್ಕೃತಿ ಸಂಘದ ವತಿಯಿಂದ ಜಿಲ್ಲೆಯ ನೆರೆ  ಸಂತ್ರಸ್ತರ   ನೆರವಿಗಾಗಿ 2 ಲಕ್ಷ ರೂ.ಗಳ ಚೆಕ್ನ್ನು ಸೋಮವಾರ ಜಿಲ್ಲಾಧಿಕಾರಿಗಳಾದ ಆರ್.ರಾಮಚಂದ್ರನ್ ಅವರಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಸಂಘದ ಅಧ್ಯಕ್ಷ ಪಿ.ವಿ.ಅವರಾದಿ, ಬನಶಂಕರಿ ಗೃಹ ನಿಮರ್ಾಣ ಮಂಡಳಿಯ ಅಧ್ಯಕ್ಷ ಎಚ್.ಬಿ.ತಳವಾರ, ಸದಸ್ಯರಾದ ಎನ್.ವಾಯ್.ಚಿಗರಿ, ವಿ.ಎ.ಪಾಟೀಲ, ಕೆ.ಟಿ.ಯತ್ನಟ್ಟಿ, ಕಾರ್ಯದಶರ್ಿ ಎಸ್.ವಿ.ಶಿವನಾಯ್ಕರ ಇದ್ದರು.