ವಿಧಾನಸಭಾ ಉಪ-ಚುನಾವಣೆ: ಮತ ಚಲಾಯಿಸಿದ ಅಭ್ಯರ್ಥಿಗಳು

ಲೋಕದರ್ಶನವರದಿ

ರಾಣೇಬೆನ್ನೂರು: ನಗರವೂ ಸೇರಿದಂತೆ ತಾಲೂಕಿನಲ್ಲಿ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯು ಇಂದು ಅತ್ಯಂತ ಶಾಂತಿ-ಸುವ್ಯವಸ್ಥೆಯೊಂದಿಗೆ ಪೋಲೀಸ್ ಭದ್ರತೆಯ ಮಧ್ಯ ಮತದಾನ ಪ್ರಕ್ರೀಯೆ ನಡೆಯಿತು.  ಮಾಜಿ ಸಭಾಪತಿ, ಕಾಂಗ್ರೇಸ್ ಪಕ್ಷದ ಅಭ್ಯಥರ್ಿ ಕೃಷ್ಣಪ್ಪ ಭೀಮಪ್ಪ ಕೋಳಿವಾಡ ಅವರು ತಮ್ಮ ಸ್ವಗ್ರಾಮ ಗುಡಗೂರು 20ನೇ ಕ್ರಮಸಂಖ್ಯೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.  ಬಿಜೆಪಿ ಅಭ್ಯಥರ್ಿ ಕರುಣಕುಮಾರ ಪೂಜಾರ(ಗುತ್ತೂರು) ಅವರು ಕವಲೆತ್ತು ಗ್ರಾಮದ ಮತಗಟ್ಟೆಯಲ್ಲಿ ಮತ ಹಕ್ಕು ಚಲಾಯಿಸಿದರು.  ಇನ್ನು ಜೆಡಿಎಸ್ನ ಅಭ್ಯಥರ್ಿ ಮಲ್ಲಿಕಾಜರ್ುನ ಹಲಗೇರಿ ಅವರು ನಾಗೇನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಹಾಗೂ ಇನ್ನುಳಿದಂತೆ ಗೌತಮ್ ಶಿವಪ್ಪ ಕಂಬಳಿ, ನಾಗಪ್ಪ ನೀಲಪ್ಪ ಸಂಶಿ, ಐ. ಎಚ್.ಪಾಟೀಲ, ಡಾ|| ಜಿ.ಎಂ.ಕಲ್ಲೇಶ್ವರಪ್ಪ, ಪವನ್ಕುಮಾರ ಎಂ. ಮತ್ತು  ಶಿವಯೋಗಿ ಜಿ. ಮಹಾನುಭಾವಿಮಠ ಅವರು ಸಂಬಂಧಿಸಿದ ಮತಗಟ್ಟೆಗಳಲ್ಲಿ ತಮ್ಮ ಹಕ್ಕು ಚಲಾಯಿಸಿದರು. 

ಈ ಭಾರಿ ಮತದಾನದ ವಿಶೇಷತೆಯೆಂದರೆ, ಕೋಳಿವಾಡರು ಕುಟುಂಬ ಸಮೇತರಾಗಿ ಹಾಗೂ ಅರುಣಕುಮಾರ ಮಂಗಳಗೌರಿ ಪೂಜಾರ, ಮಲ್ಲಿಕಾಜರ್ುನ ಹಲಗೇರಿ ದಂಪತಿಗಳ ಸಮೇತವಾಗಿ ಮತಚಲಾಯಿಸಿದ್ದು ಗಮನಸೆಳೆಯಿತು.