ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಹತ್ಯೆ; ಮತ್ತೊಬ್ಬ ವ್ಯಕ್ತಿಯ ಬಂಧನ

ಬೆಂಗಳೂರು, ಜ 10, ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ  ವಿಶೇಷ ತನಿಖಾ ತಂಡ ( ಎಸ್ ಐಟಿ)ದ ಅಧಿಕಾರಿಗಳು  ಗುರುವಾರ  ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು  ಮಹಾರಾಷ್ಟ್ರದ ಋುಷಿಕೇಶ್ ದೇವ್ಡೇಕರ್  ಅಲಿಯಾಸ್ ಮುರಳಿ(44) ಎಂದು  ಗುರುತಿಸಲಾಗಿದೆ.2017 ಸೆಪ್ಟಂಬರ್ 5 ರಂದು  ಗೌರಿ ಲಂಕೇಶ್  ಅವರನ್ನು  ಗುಂಡು ಹಾರಿಸಿ ಹತ್ಯೆ ನಡೆಸಿದ ನಂತರ  ಆರೋಪಿ ಋಷಿಕೇಶ್  ತಲೆ ಮರೆಸಿಕೊಂಡಿದ್ದ,  ಜಾರ್ಖಂಡ್  ಧನಬಾದ್ ಜಿಲ್ಲೆಯ ಕತ್ರಾಸ್ ನಲ್ಲಿ ಅಡಗಿಕೊಂಡಿರುವ  ಮಾಹಿತಿ ಪಡೆದುಕೊಂಡ   ಎಸ್ ಐಟಿ ಅಧಿಕಾರಿಗಳು  ಆರೋಪಿಯನ್ನು  ಗುರುವಾರ ಬಂಧಿಸಲಾಗಿದೆ ಎಂದು  ಹೇಳಿಕೆಯಲ್ಲಿ ತಿಳಿಸಿದ್ದಾರೆ.ಆರೋಪಿಯನ್ನು  ಬಂಧಿಸಿದ ನಂತರ  ಆತ   ನೆಲಸಿದ್ದ  ಜಾರ್ಖಂಡ್ ಮನೆಯನ್ನು  ಪರಿಶೀಲನೆ ನಡೆಸಲಾಯಿತು.  ಶುಕ್ರವಾರ  ಆತನ್ನು  ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಎಸ್ ಐಟಿ  ಹೇಳಿದೆ.ಸೈದ್ಧಾಂತಿಕ ಭಿನ್ನಾಬಿಪ್ರಾಯಗಳ  ಹಿನ್ನಲೆಯಲ್ಲಿ  ಮಹಾರಾಷ್ಟ್ರ  ಹಾಗೂ ಕರ್ನಾಟಕ ರಾಜ್ಯಗಳಲ್ಲಿ  ಹಲವು ಮಂದಿ  ವಿಚಾರವಾದಿಗಳನ್ನು  ಕೊಲ್ಲಲು  ಈ ತಂಡ ಪಟ್ಟಿ ಸಿದ್ದಪಡಿಸಿಕೊಂಡಿತ್ತು. ಈ ಪಟ್ಟಿಯಲ್ಲಿ  ವಿಚಾರವಾದಿ ಕೆ.ಎಸ್. ಭಗವಾನ್  ಹಾಗೂ ದಿ. ನಾಟಕಕಾರ ಗಿರೀಶ್ ಕಾರ್ನಾಡ್  ಅವರುಗಳ ಹೆಸರಿದ್ದವುಧಾರವಾಡದಲ್ಲಿ  ವಿಚಾರವಾದಿ ಎಂ.ಎಂ. ಕಲಬುರಗಿ  ಹತ್ಯೆ ನಡೆಸಿದ್ದ  ಬಲಪಂಥೀಯ ಗುಂಪಿನ ಆರೋಪಿಗಳೇ ಗೌರಿ ಲಂಕೇಶ್ ಹತ್ಯೆ ನಡೆಸಿದ್ದಾರೆ ಎಂಬ  ಸುಳಿವನ್ನು ಎಸ್ ಐಟಿ  ಪತ್ತೆ ಹಚ್ಚಿತ್ತು.