ರಾಜೀವ್ ಗಾಂಧಿ ರೀತಿಯಲ್ಲೇ ನರೇಂದ್ರ ಮೋದಿ ಹತ್ಯೆ ಸಂಚು; 19 ಮಂದಿ ವಿರುದ್ದ ಕೋರ್ಟ್ ಗೆ ಚಾರ್ಜ್ ಶೀಟ್ ದಾಖಲು

ಪುಣೆ,  ಡಿ  20  ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಒಂಬತ್ತು   ಮಂದಿ ಸಾಮಾಜಿಕ  ಹಕ್ಕುಗಳ ಮುಖಂಡರು ಸೇರಿದಂತೆ 19 ಜನರ ವಿರುದ್ಧ ಪ್ರಾಸಿಕ್ಯೂಷನ್  ದೋಷಾರೋಪಗಳನ್ನು    ನ್ಯಾಯಾಲಯಕ್ಕೆ  ಸಲ್ಲಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ  ಮಾವೋವಾದಿಗಳು ಸಂಚು ರೂಪಿಸಿ,  ಮಾವೋವಾದಿಗಳ ಬಗ್ಗೆ  ಸಹಾನುಭೂತಿ ಹೊಂದಿರುವ  ಮುಖಂಡರೊಂದಿಗೆ  ಸಂಬಂಧ ಇರಿಸಿಕೊಂಡಿದ್ದರು   ಎಂದು ಆರೋಪಿಸಿ ಪುಣೆಯ ಕಾನೂನು ಬಾಹಿರ  ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ದಾಖಲಿಸಲಾಗಿದೆ.ಸಾಮಾಜಿಕ ಹಕ್ಕುಗಳ ನಾಯಕರಲ್ಲಿ ಕ್ರಾಂತಿಕಾರಿ  ಕವಿ  ವರವರಾವ್, ಸುಧೀರ್  ಧವಾಳೆ,  ರೋನಾ ವಿಲ್ಸನ್, ಸುರೇಂದ್ರ ಗಾಡ್ಲಿಂಗ್, ಮಹೇಶ್ ರಾವತ್,  ಶೋಮಾ ಸೇನ್, ಅರುಣ್ ಫೆರೀರಾ, ವರ್ಮನ್ ಗೊನ್ಸಾಲ್ವೆಸ್ ಮತ್ತು ಸುಧಾ ಭಾರದ್ವಾಜ್ ಸೇರಿದ್ದಾರೆ.2017 ಡಿಸೆಂಬರ್ 31 ರಂದು  ಭೀಮಾ ಕೋರೆಗಾಂವ್  ಪ್ರದೇಶದಲ್ಲಿ  ಎಲ್ಗಾರ್  ಪರಿಷತ್  ಸಮಾವೇಶ  ನಡೆಯಿತು. ಈ ಕಾರ್ಯಕ್ರಮವನ್ನು  ಮಾವೋವಾದಿಗಳು  ಆಯೋಜಿಸಿದ್ದರು ಎಂಬುದು  ಪೊಲೀಸರು ಆರೋಪ.   ನಂತರ,  ಭೀಮಾ ಕೋರೆಗಾಂವ್  ಸಭೆಯಲ್ಲಿ ಪ್ರಚೋಧನಕಾರಿ ಭಾಷಣಗಳ  ನಂತರ ಹಿಂಸಾಚಾರ ...   ಇವುಗಳಿಗೆ  ನಾಗರೀಕ ಹಕ್ಕುಗಳ ನಾಯಕರೇ ಕಾರಣ ಎಂದು  ಆರೋಪಿಸಿ   ಈ ಒಂಬತ್ತು  ಮಂದಿ  ನಾಯಕರನ್ನು ವಶಕ್ಕೆ ಪಡೆದುಕೊಂಡಿದ್ದರು.   ಸುಮಾರು ಎರಡು ವರ್ಷಗಳ ನಂತರ,  ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. “ರಾಜೀವ್ ಗಾಂಧಿ ಅವರನ್ನು ಶ್ರೀ ಪೆರಂಬದೂರಿನಲ್ಲಿ  ಹತ್ಯೆ ನಡೆಸಿದ  ರೀತಿಯಲ್ಲೇ   ರೋಡ್  ಶೋ   ನಡೆಸುವಾಗ  ನರೇಂದ್ರ ಮೋದಿಯವರನ್ನು  ಮುಗಿಸಲು  ಸಂಚು ರೂಪಿಸಿದ್ದರು ಎಂದು   ಆರೋಪಿಸಲಾಗಿದೆ.  ಇದಕ್ಕಾಗಿ   8  ಕೋಟಿ ರೂ. ನಗದು ಹಣ,   ಒಂದು  ಅತ್ಯಾಧುನಿಕ ಎಂ -4 ರೈಫಲ್, 4 ಲಕ್ಷ ಸುತ್ತಿನ ಮದ್ದು ಗುಂಡು,  ಕೆಲವು ಮಾರಕ ಆಯುಧಗಳನ್ನು  ಪೂರೈಕೆದಾರನೊಬ್ಬನಿಂದ  ನೇಪಾಳ,  ಮಣಿಪುರ  ಮೂಲಕ   ತರಲು   ಪ್ರಯತ್ನ ನಡೆಸಿದ್ದರು ಎಂದು   ದೋಷಾರೋಪ ಪಟ್ಟಿಯಲ್ಲಿ ಆರೋಪಿಸಲಾಗಿದೆ.    ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳ ವಿರುದ್ದ ಸಮರ ಸಾರಲು,   ಪತನಗೊಳಿಸಲು  ಸಂಚು ರೂಪಿಸಿದ್ದರು.   ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್.ಆರ್.ನವಾಂದರ್ ಈ ಬಗ್ಗೆ ಪರಿಶೀಲನೆ ನಡೆಸಿ ಆರೋಪಗಳನ್ನು ನೋಂದಾಯಿಸಿಕೊಳ್ಳಲು ಆದೇಶಿಸಿ  ವಿಚಾರಣೆ  ಆರಂಭಿಸಿದ್ದಾರೆ.