ಅಸ್ಸಾಂ ಎನ್ಆರ್ಸಿ ನೊಂದಣಿ: ಹಿರಿಯ ನಾಯಕರನ್ನು ಭೇಟಿ ಮಾಡಿದ ದೀದಿ


ನವದೆಹಲಿ, ಅ.01 ಸ್ಸಾಂನ ರಾಷ್ಟ್ರೀಯ ಜನಸಂಖ್ಯಾ ನೊಂದಣಿ ಬಗ್ಗೆ ಚಚರ್ೆ ನಡೆಯುತ್ತಿದ್ದು, ಪಶ್ಚಿಮ ಬಂಗಾಳ ಸಿಎಂ ಅಡ್ವಾಣಿ ಸೇರಿದಂತೆ ಹಿರಿಯ ರಾಜಕಾರಣಿಗಳನ್ನು ಭೇಟಿ ಮಾಡಿದ್ದಾರೆ. ನವದೆಹಲಿಗೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿರುವ ಮಮತಾ ಬ್ಯಾನಜರ್ಿ, ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರನ್ನು ಸಂಸತ್ ಭವನದಲ್ಲಿ ಭೇಟಿ ಮಾಡಿದ್ದು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಅಡ್ವಾಣಿ ಅವರನ್ನು ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿದೆ. ಇದೊಂದು ಸಾಮಾನ್ಯವಾದ ಮಾತುಕತೆ ಎಂದು ಮಮತಾ ಬ್ಯಾನಜರ್ಿ ಹೇಳಿದ್ದಾರೆ. ಇದೇ ವೇಳೆ ಬಿಜೆಪಿ ಸಂಸದ ಕೀತರ್ಿ ಆಜಾದ್ ಅವರನ್ನೂ ಮಮತಾ ಬ್ಯಾನಜರ್ಿ ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ. ಬಿಜೆಪಿ ನಾಯಕರಷ್ಟೇ ಅಲ್ಲದೇ ಕಾಂಗ್ರೆಸ್ ನಾಯಕರಾದ ಗುಲಾಂ ನಭಿ ಆಜಾದ್, ಅಹ್ಮದ್ ಪಟೇಲ್, ಸಮಾಜವಾದಿ ಪಕ್ಷದ ನಾಯಕರಾದ ರಾಮ್ ಗೋಪಾಲ್ ಯಾದವ್, ಜಯಾ ಬಚ್ಚನ್ ಅವರನ್ನೂ ಮಮತಾ ಬ್ಯಾನಜರ್ಿ ಭೇಟಿ ಮಾಡಿದ್ದಾರೆ. 

ಮಮತಾ ಬ್ಯಾನಜರ್ಿಯನ್ನು ಭೇಟಿ ಮಾಡಿದ ಬಳಿಕ ಮಾತನಾಡಿರುವ ಕೀತರ್ಿ ಆಜಾದ್, ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಮಮತಾ ಬ್ಯಾನಜರ್ಿ ಅವರ ಶ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ ಬಳಿಕ ಮಾತನಾಡಿರುವ ಮಮತಾ ಬ್ಯಾನಜರ್ಿ ಎನ್ ಆರ್ ಸಿ ವಿರುದ್ಧ ಧ್ವನಿ ಎತ್ತುವಂತೆ ಶತೃಘ್ನ ಸಿನ್ಹಾ, ಯಶ್ವಂತ್ ಸಿನ್ಹಾ ಅವರಲ್ಲಿ ಮನವಿ ಮಾಡಿರುವುದಾಗಿ ಹೇಳಿದ್ದಾರೆ.