ಜಕಾರ್ತಾ 08: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಮೂರನೇ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತದ ಸಂದೀಪ್ ಚೌಧರಿ ಚಿನ್ನದ ಪದಕ ಗಳಿಸಿದ್ದಾರೆ. ಪ್ರಸಕ್ತ
ಸಾಲಿನ ಕ್ರೀಡಾಕೂಟದಲ್ಲಿ ಇದು ಭಾರತ ಪರ
ಬಂದಿರುವ ಪ್ರಥಮ ಚಿನ್ನದ ಪದಕವಾಗಿದ್ದು ಸಂದೀಪ್ ಜಾವಲಿನ್ ಥ್ರೋ ವಿಭಾಗದಲ್ಲಿ ಈ
ಸಾಧನೆ ಮಾಡಿದ್ದಾರೆ.
ಪುರುಷರ ಈ42-44
/ 61-64 ವಿಬಾಗದಲ್ಲಿ ಸಂದೀಪ್ ಚೌಧರಿ 60.01 ಮೀಟರ್ ದೂರಕ್ಕೆ ಜಾವಲಿನ್ ಎಸೆಯುವ ಮೂಲಕ ಚಿನ್ನದ ಸಾಧನೆ
ಮಾಡಿದ್ದಾರೆ. ಇಏ ವಿಭಾಗದಲ್ಲಿ ಶ್ರೀಲಂಕಾ
ಆಟಗಾರ ಬೆಳ್ಳಿ ಪದಕ ಗಳಿಸಿದರೆ ಇರಾನ್
ನ ಸ್ಪಧರ್ಿ ಕಂಚಿನ ಪದಕ ಗಳಿಸಿದ್ದಾರೆ.
ನಿನ್ನೆ (ಭಾನುವಾರ) ಭಾರತ ಎರಡು ಬೆಳ್ಳಿ
ಮತ್ತು ಮೂರು ಕಂಚಿನ ಪದಕಗಳನ್ನು
ಗೆದ್ದಿತ್ತು.
49 ಕೆ.ಜಿ ಪುರುಷರ
ಶವರ್ ಲಿಫ್ಟಿಂಗ್ ಪಂದ್ಯಾವಳಿಯಲ್ಲಿ, ಫರ್ಮನ್ ಬಾಷಾ ಬೆಳ್ಳಿಯನ್ನು
ಮತ್ತು ಪರಮೀತ್ ಕುಮಾರ್ ಕಂಚಿನ ಪದಕ ಗೆದ್ದುಕೊಂಡರು.
ಈಜು ವಿಭಾಗದಲ್ಲಿ ದೇವಂಶಿ
ಸತಿಜವಾನ್, ಸುಯಾಶ್ ಜಾಧವ್ ಕಂಚಿನ ಪದಕವನ್ನು ಗೆದ್ದುಕೊಂಡರು.