ಏಷ್ಯನ್ ಕ್ರೀಡಾಕೂಟ: ವೆಂಕಣ್ಣ ಕೆಂಗಲಗುತ್ತಿಗೆ ಒಲಿದ ಬಂಗಾರದ ಗರಿ

ಬಾಗಲಕೋಟೆ೧೧: ತಾಲೂಕಿನ ತುಳಸಿಗೇರಿ ಗ್ರಾಮದ ಸೈಕ್ಲಿಂಗ್ ಕ್ರೀಡಾಪಟು ವೆಂಕಣ್ಣ ಕೆಂಗಲಗುತ್ತಿ ನವದೆಹಲಿಯಲ್ಲಿ ನಡೆದ ಏಷಿಯನ್ ಕ್ರೀಡಾಕೂಟದಲ್ಲಿ ಬಂಗಾರದ ಪದಕವನ್ನು ಮುಡಿಗೇರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ನವದೆಹಲಿಯಲ್ಲಿ ನಡೆದ ಎರಡನೆಯ ದಿನದ ಏಷ್ಯನ್ ಕಪ್ ಸೈಕ್ಲಿಂಗ್ ಕ್ರೀಡಾಕೂಟದ ಜೂನಿಯರ್ ವಿಭಾಗದ 3 ಕಿ.ಮೀ ವೈಯಕ್ತಿಕ ಶೂಟ್ನಲ್ಲಿ ಬಂಗಾರದ ಪದಕವನ್ನು ಪಡೆದುಕೊಂಡಿದ್ದಾರೆ. ಅಲ್ಲದೇ 10 ಕಿ.ಮೀ ಸ್ಕ್ರ್ಯಾಚ್ ರೇಸ್ನಲ್ಲಿ ಬೆಳ್ಳಿ ಪದಕವನ್ನು ಪಡೆದು ರಾಜ್ಯಕ್ಕೆ ಕೀತರ್ಿಯನ್ನು ತಂದಿದ್ದಾರೆ. 

ತುಳಸಿಗೇರಿ ಗ್ರಾಮದ ಶಿವಪ್ಪ ಮತ್ತು ಬಾಗವ್ವ ದಂಪತಿಗಳ ಉದರದಲ್ಲಿ ಜನಿಸಿದ ಇವರು ಮೂರು ಜನ ಅಣ್ಣಂದಿರು ಹಾಗೂ ಓರ್ವ ಅಕ್ಕ ಇದ್ದಾರೆ. ತಂದೆ ಶಿವಪ್ಪ ಕೃಷಿಕರಾಗಿದ್ದಾರೆ. ವೆಂಕಣ್ಣ 1 ರಿಂದ 4ನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಣವನ್ನು ಕುವೆಂಪು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 5 ರಿಂದ 9ನೇ ತರಗತಿವರೆಗೆ ಬಾಗಲಕೋಟೆಯ ಸಕ್ರಿ ಪ್ರೌಢಶಾಲೆಯಲ್ಲಿ ಹಾಗೂ ಎಸ್.ಎಸ್.ಎಲ್.ಸಿಯನ್ನು ಬೆಳಗಾವಿ ಜಿಲ್ಲೆಯ ಕುಲಗೋಡದಲ್ಲಿ ಮುಗಿಸಿದ್ದಾರೆ. ಪಿಯುಸಿ ತರಗತಿಯನ್ನು ಜಮಖಂಡಿಯ ಬಿ.ಎಲ್.ಡಿ ಸಂಸ್ಥೆಯಲ್ಲಿ ಮುಗಿಸಿದ್ದಾರೆ.

ಕ್ರೀಡಾ ಶಾಲೆಗೆ 2013-14ರಲ್ಲಿ ಆಯ್ಕೆಗೊಂಡ ವೆಂಕಣ್ಣ ಅವರು 2016 ವರೆಗೆ ಸೈಕ್ಲಿಂಗ್ ತರಬೇತಿದಾರರಾದ ಅನಿತಾ ನಿಂಬರಗಿ ಅವರಿಂದ ತರಬೇತಿ ಪಡೆದಿದ್ದಾರೆ. ತದನಂತರ 2017ರಲ್ಲಿ ಇವರ ಸಾಧನೆ ಮೇರೆಗೆ ದೆಹಲಿಯ ಕೇಂದ್ರ ಸಕರ್ಾರದ ಸೈಕ್ಲಿಂಗ್ ಕ್ರೀಡಾ ನಿಲಯಕ್ಕೆ ಆಯ್ಕೆಯಾಗಿ ಅಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. 

ವೆಂಕಣ್ಣ ಕೆಂಗಲಗುತ್ತಿ ಅವರು ರಾಜ್ಯ ಮಟ್ಟದಲ್ಲಿ 6 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. ರಾಷ್ಟ್ರ ಮಟ್ಟದಲ್ಲಿ 2013 ರಿಂದ ಇದುವರೆಗೂ 10 ಚಿನ್ನದ ಪದಕ, 6 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಪಡೆದಿದ್ದಾರೆ. ಮೂರು ಅಂತರರಾಷ್ಟ್ರೀಯ ಏಷಿಯನ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿ 2018ರಲ್ಲಿ ಮಲೇಷಿಯಾದಲ್ಲಿ ನಡೆದ ಏಷಿಯನ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದಾರೆ. 2019ರ ಇಂಡೋನೇಷಿಯಾದಲ್ಲಿ ನಡೆದ ಏಷಿಯನ್ ಚಾಂಪಿಯನ್ಶಿಪ್ನಲ್ಲಿ 1 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಪಡೆದಿದ್ದಾರೆ.

2018ರಲ್ಲಿ ಸ್ವಿಡ್ಜರ್ಲ್ಯಾಂಡ್ನಲ್ಲಿ ನಡೆದ ವಲ್ರ್ಡ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ ಕನರ್ಾಟಕದ ಪ್ರಪ್ರಥಮ ಕ್ರೀಡಾಪಟುವಾಗಿ ಹೊರಹಿಮ್ಮಿದ್ದಾರೆ. ಬಾಗಲಕೋಟೆ ಜಿಲ್ಲಾಡಳಿತದ ವತಿಯಿಂದ ಒಳ್ಳೆಯ ಕ್ರೀಡಾಪಟು ಎಂದು 2018ರಲ್ಲಿ ಗಣರಾಜ್ಯೋತ್ಸವ ಪ್ರಶಸ್ತಿ, ಸ್ವಾತಂತ್ರ್ಯೋತ್ಸವ ದಿನಾಚರಣೆಯಂದು ಸನ್ಮಾನ ಮಾಡಿ ಗೌರವಿಸಲಾಗಿದೆ. ಅಲ್ಲದೇ ಕನರ್ಾಟಕ ರಾಜ್ಯ ಸಕರ್ಾರ ಅಸಾಧಾರಣ ಪ್ರತಿಭೆಗಾಗಿ 2017ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ. 

ಪ್ರಸಕ್ತ ನವದೆಹಲಿಯಲ್ಲಿ ನಡೆದ ಏಷಿಯನ್ ಸೈಕ್ಲಿಂಗ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಮುಡುಗೇರಿಸಿಕೊಂಡ ವೆಂಕಣ್ಣ ಕೆಂಗಲಗುತ್ತಿ ಅವರನ್ನು ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಭಿನಂದಿಸಿದೆ. ತುಳಸಿಗೇರಿ ಗ್ರಾಮವು ಸೈಕ್ಲಿಂಗ್ ಕ್ರೀಡಾಪಟುಗಳ ತಾಣವಾಗಿದ್ದು, ವೆಂಕಣ್ಣ ಕೆಂಗಲಗುತ್ತಿ ಅವರ ಈ ಸಾಧನೆಯಿಂದ ಜಿಲ್ಲೆಗೆ ಮತ್ತೊಂದು ಗರಿ ದೊರಕಿದಂತಾಗಿದೆ.