ತಾಳಿಕೋಟಿ 09: ಪಟ್ಟಣದ ಶ್ರೀ ಸಂಗಮೇಶ್ವರ ಪ್ರೌಢಶಾಲೆಯ ಮುಖ್ಯೋ ಪಾಧ್ಯಾಯರಾದ ಅಶೋಕ ಕಟ್ಟಿ ಇವರು ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢ ಶಾಲೆ ಇದರ ವಿಜಯಪುರ ಮಹಾ ಮಂಡಲದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಹಾಮಂಡಲದ ತೆರವಾದ ಒಂದು ಸ್ಥಾನಕ್ಕೆ (2025-26 ನೇ ಸಾಲಿನ) ಮಾರ್ಚ್ 7ರಂದು ನಡೆದ ಚುನಾವಣೆಯಲ್ಲಿ ಅಶೋಕ ಕಟ್ಟಿ ಇವರು ಅವಿರೋಧವಾಗಿ ಜಿಲ್ಲಾ ಮಹಾಮಂಡಲದ ನಿರ್ದೇಶಕರಾಗಿ ಆಯ್ಕೆಯಾದರು.
ಕೃತಜ್ಞತೆ: ತಮ್ಮನ್ನು ವಿಜಯಪುರ ಜಿಲ್ಲಾ ಮಹಾಮಂಡಲದ ನಿರ್ದೇಶಕರಾಗಿ ಒಮ್ಮತ ಅಭಿಪ್ರಾಯದಿಂದ ಅವಿರೋಧವಾಗಿ ಆಯ್ಕೆ ಮಾಡಿದ ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢ ಶಾಲೆಗಳ ಶಿಕ್ಷಕ ವರ್ಗಕ್ಕೆ ಅಶೋಕ ಕಟ್ಟಿ ಅವರು ಕೃತಜ್ಞತೆಗಳನ್ನು ಸಲ್ಲಿಸಿ, ಅವರ ಆಶೋತ್ತರಗಳಿಗೆ ಸ್ಪಂದಿಸುವಂತೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.