ಆಶಾಕಿರಣ ಯೋಜನೆ: ಕಣ್ಣಿನ ದೃಷ್ಟಿದೋಷವುಳ್ಳವರಿಗೆ ವರದಾನ: ಡಿಹೆಚ್‌ಓ
Ashakirana SCHEME: Boon to the Visually Impaired: DHO
ಬಳ್ಳಾರಿ 08:ಕಣ್ಣಿನಸಮಸ್ಯೆಕಂಡುಬಂದಲ್ಲಿಗ್ರಾಮೀಣ ಭಾಗದಜನತೆಯುಜಿಲ್ಲೆಯಆರೋಗ್ಯ ಕೇಂದ್ರಗಳ ದೃಷ್ಟಿಕೇಂದ್ರಗಳಿಗೆ ಆಗಮಿಸಿ ನೇತ್ರ ಪರೀಕ್ಷೆಕೈಗೊಳ್ಳುವ ಮೂಲಕ ಕಣ್ಣಿನಆರೈಕೆ ಮಾಡಬೇಕುಎಂದುಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಡಾ.ಯಲ್ಲಾರಮೇಶಬಾಬುಅವರು ಹೇಳಿದರು.
ಮಂಗಳವಾರ ಮೋಕಾ ಸಮುದಾಯಆರೋಗ್ಯಕೇಂದ್ರದಲ್ಲಿಯದೃಷ್ಟಿಕೇಂದ್ರಕ್ಕೆ ಭೇಟಿ ನೀಡಿಕಣ್ಣಿನ ಪರೀಕ್ಷೆಕೈಗೊಂಡುಕನ್ನಡಕ ಪಡೆದುಕೊಂಡ ಸಾರ್ವಜನಿಕರಜೊತೆ ಮಾತನಾಡಿದಅವರು, ಕಳೆದ ಗುರುವಾರಉಪಮುಖ್ಯಮಂತ್ರಿಯವರು ಹಾಗೂ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಸಚಿವರು, ಏಕಕಾಲಕ್ಕೆ ರಾಜ್ಯಾದ್ಯಂತ ಈ ಯೋಜನೆಯ ಚಾಲನೆ ನೀಡಿದ್ದಾರೆ.ಇದುಕಣ್ಣಿನ ದೃಷ್ಟಿದೋಷವುಳ್ಳವರಿಗೆ ವರದಾನವಾಗಿದೆಎಂದುಅವರು ತಿಳಿಸಿದರು.ಕಣ್ಣಿನದೃಷ್ಟಿಯಿಂದಉಂಟಾಗುವ ಸಣ್ಣ ಹಾನಿಯುಜೀವನ ನಡೆಸುವುದಕ್ಕೆಕಷ್ಟವಾಗುವುದನ್ನು ಮನಗಂಡುಉಚಿತಕಣ್ಣಿನತಪಾಸಣೆ, ಕನ್ನಡಕ ವಿತರಣೆ ಹಾಗೂ ಅಗತ್ಯವುಳ್ಳವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಸೌಲಭ್ಯ ಒದಗಿಸಿದೆ ಎಂದರು.ಜಿಲ್ಲೆಯಲ್ಲಿ ಬಳ್ಳಾರಿಯ ಜಿಲ್ಲಾಆಸ್ಪತ್ರೆ, ಸಂಡೂರು, ಸಿರುಗುಪ್ಪ ಸಾರ್ವಜನಿಕಆಸ್ಪತ್ರೆ, ಮೋಕಾ, ರೂಪನಗುಡಿ, ಕಂಪ್ಲಿ, ಕುರುಗೋಡು, ತೋರಣಗಲ್ಲು, ತೆಕ್ಕಲಕೋಟೆ ಸಮುದಾಯಆರೋಗ್ಯ ಕೇಂದ್ರಗಳಲ್ಲಿ ರಾಜ್ಯ ಸರ್ಕಾರದನಿರ್ದೇಶನದಂತೆ ದೃಷ್ಟಿಕೇಂದ್ರಗಳನ್ನು ಆರಂಭಿಸಲಾಗಿದ್ದು, ಕಣ್ಣಿನತಪಾಸಣೆಗಾಗಿಯೇ ನಗರಗಳಿಗೆ ಆಗಮಿಸಿ ಹಣದ ವೆಚ್ಚ ಮಾಡಿಕೊಳ್ಳದೇ ತಮ್ಮ ಹತ್ತಿರದದೃಷ್ಟಿಕೇಂದ್ರಇರುವಆಸ್ಪತ್ರೆಗೆ ತೆರಳಿ ಕಣ್ಣಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು ಎಂದುವಿನಂತಿಸಿದರು.
ಈ ವೇಳೆ ಮೋಕಾ ಸಮುದಾಯಆರೋಗ್ಯಕೇಂದ್ರದ ಆಡಳಿತ ವೈದ್ಯಾಧಿಕಾರಿಡಾ.ಭಾರತಿ, ದಂತತಜ್ಞರಾದಡಾ.ಅರ್ಜುಂ ಮುನ್ನಿಸಾ, ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್‌ದಾಸಪ್ಪನವರ, ದೃಷ್ಟಿಕೇಂದ್ರದ ನೇತ್ರಾಧಿಕಾರಿ ಮಂಜುನಾಥ, ಸಿಬ್ಬಂದಿ ವೈಷ್ಣವಿ ಸೇರಿದಂತೆಇತರರುಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 