ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ ಖಾತರಿ ಪಡಿಸಬೇಕೆಂದು ಮನವಿ

ಲೋಕದರ್ಶನ ವರದಿ

ಕುರುಗೋಡು, ಜೂ, 30 :ಆಶಾ ಕಾರ್ಯಕತರ್ೆಯರಿಗೆ ಮಾಸಿಕ ಗೌರವಧನ 12000.ರೂ ಖಾತರಿ ಪಡಿಸಬೇಕು ಮತ್ತು ಅಗತ್ಯವಿರುವಷ್ಟು ಆರೋಗ್ಯ ರಕ್ಷಣಾ ಸಾಮಗ್ರಿಗಳನ್ನು ನೀಡಬೇಕೆಂದು ಒತ್ತಾಯಿಸಿ ಕನರ್ಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸ್ಥಳಿಯ ಸಮಿತಿ ಮುಖ್ಯಮಂತ್ರಿ ಬಿಎಸ್.ಯಡಿಯುರಪ್ಪ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ರವರಿಗೆ ಪಟ್ಟಣದ ತಹಶೀಲ್ದಾರರ ಮೂಲಕ ಮಂಗಳವಾರ ಮನವಿ ಸಲ್ಲಿಸಿದರು.

ಸ್ಥಳೀಯ ಸಮಿತಿ ಅಧ್ಯಕ್ಷೆ ಎಂ.ರಾಜೇಶ್ವರಿ ಮಾತನಾಡಿ, ಆಶಾ ಕಾರ್ಯಕತರ್ೆಯರು ಆರೋಗ್ಯ ಇಲಾಖೆಯ ನಾನಾ ಕಾರ್ಯಕ್ರಮಗಳಲ್ಲಿ ಅನೇಕ ಕೆಲಸಗಳು ಮಾಡುತ್ತಿದ್ದು, ಪ್ರೋತ್ಸಾಹ ಮತ್ತು ಗೌರವ ಧನ ಎರಡು ರೀತಿಯ ವೇತನ ಪಾವತಿಸುತ್ತಿದ್ದು, ಇದರಿಂದ ಎಲ್ಲಾ ಆಶಾಗಳಿಗೆ ಹಣ ತಲುಪುತ್ತಿಲ್ಲ ಆದ್ದರಿಂದ ಎರಡನ್ನು ಸೇರಿಸಿ ಒಟ್ಟಿಗೆ 12000.ರೂಗಳನ್ನು ಪ್ರತಿ ತಿಂಗಳು ನೀಡಬೇಕು. ಕೊರೋನಾ ವೈರಸ್ ಬೀತಿಯಲ್ಲಿ ಆಶಾಗಳು ತಮ್ಮ ಜೀವವನ್ನು ಲೇಕ್ಕಿಸದೇ ಕಾರ್ಯ ನಿರ್ವಹಿಸಿದ್ದಾರೆ. 

 ಸಕರ್ಾರವು ಅವರಿಗೆ ಅಗತ್ಯ ರಕ್ಷಣಾ ಸಾಮಗ್ರಿಗಳನ್ನು ನೀಡಲಿಲ್ಲ, ಇದರಿಂದ ರಾಜ್ಯದಲ್ಲಿ ಕೆಲ ಆಶಾಗಳಿಗೆ ಸೋಂಕು ತಗುಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ವ್ಯಾಪಕವಾಗಿ ವೈರಸ್ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿವೆ. ಆಗಾಗಿ ಕಾರ್ಯಕತರ್ೆಯರಿಗೆ ಆರೋಗ್ಯ ರಕ್ಷಣಾ ಸಾಮಗ್ರಿಗಳನ್ನು ಪುರೈಸಬೇಕು ಎಂದು ಆಗ್ರಹಿಸಿದರು.

ಈಗಾಗಗಲೇ ಸಕರ್ಾರಕ್ಕೆ ಸಂಘದ ವತಿಯಿಂದ ಜನವರಿ ತಿಂಗಳಿಂದ ಆಶಾ ಕಾರ್ಯಕತರ್ೆಯರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ 7 ಸಾರಿ ಮನವಿ ಪತ್ರಗಳನ್ನು ನೀಡಿದ್ದಾರೆ.

 ಆದರೆ ಇದುವರೆಗೂ ಈ ಕುರಿತು ಸಕರ್ಾರ ಸ್ಪಂಧನೆ ನೀಡದಿರುವುದು ವಿಷಾಧನೀಯವಾಗಿದೆ. ಸಕರ್ಾರವು ತಕ್ಷಣವೇ ಆಶಾ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಈಡೇರಿಸಬೇಕು ಇಲ್ಲದಿದ್ದರೆ ರಾಜ್ಯದ 42 ಸಾವಿರ ಆಶಾ ಕಾರ್ಯಕತರ್ೆಯರು ಆರೋಗ್ಯ ಸೇವೆಯ ಎಲ್ಲ ಕೆಲಸಗಳನ್ನು ನಿಲ್ಲಿಸಿ ರಾಜ್ಯಾಧ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದೆಂದು ಎಚ್ಚರಿಸಿದರು.

     ಗ್ರೇಡ್2 ತಹಶೀಲ್ದಾರ್ ಮಲ್ಲೇಶಪ್ಪ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳಿಗೆ ಕಳುಹಿಸುವ ಭರವಸೆ ನೀಡಿದರು.

       ಈ ಸಂದರ್ಭದಲ್ಲಿ ಸಂಘದ ಕಾರ್ಯದಶರ್ಿ ಅಂಬಿಕಾ, ಎಂ.ಮಹಾಲಕ್ಷ್ಮಿ, ಕೆ.ಎಂ.ರಾಜೇಶ್ವರಿ, ಕೆ.ಹಂಪಮ್ಮ, ಬಿ.ನೀಲಮ್ಮ, ಎನ್.ನಾಗವೇಣಿ, ಹೆಚ್.ಎಮ್.ಉಮಾದೇವಿ, ಎಂ.ಗೀತಾ, ದೇವಮ್ಮ, ಎಂ.ವೀಣಾ, ಬಿ.ಲಕ್ಷ್ಮಿ, ಎಸ್.ಸರೋಜದೇವಿ, ನಾಗರತ್ನ, ಸುಧಾ, ವಿಎಮ್.ರಾಜೇಶ್ವರಿ, ಮುಮ್ತಾಜ್, ತ್ರಿಪುರ, ನೀಲಾವತಿ, ಮೀನಾಕ್ಷಿ, ಸುಮಾಲತ ಹಾಗೂ ಇನ್ನಿತರ ಕಾರ್ಯಕತರ್ೆಯರು ಇದ್ದರು.