ಜಾನಪದ ಕಲಾ ತಂಡಗಳ ಪ್ರದರ್ಶನ

Performance of folk art troupes

ಕೊಪ್ಪಳ 10: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ಇವರ ಸಹಯೋಗದೊಂದಿಗೆಜನಪದ ಕಲಾ ತಂಡ ಭಾಗವಹಿಸಲಿವೆ. ದಿನಾಂಕ 13-01-2025 ಗುರುವಾರ, ಸಂಜೆ 5 ಘಂಟೆಗೆ ಶ್ರೀ ಗವಿಸಿದ್ಧೇಶ್ವರ ಮೂರ್ತಿಯ (ಪಲ್ಲಕ್ಕಿ) ಮೆರವಣಿಗೆಯುಕೋಟೆ ಪ್ರದೇಶದಜಡೇಗೌಡರ ಮನೆಯಿಂದ ಆರಂಭವಾಗುವದು. ಇದರಲ್ಲಿ ನಂದಿಕೋಲು, ಡೊಳ್ಳು, ಭಜನೆ, ಭಾಜಾ-ಭಜಂತ್ರಿ, ಪಂಜು, ಇಲಾಲು ಹಾಗೂ ನಾಡಿನ ಸಾಂಸ್ಕ್ರತಿಕ ವೈಭವವನ್ನು ಬಿಂಬಿಸುವ ಅನೇಕ ಜಾನಪದ ಕಲಾ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಅದರಜೊತೆಗೆಜಾನಪದ ಕಲಾತಂಡಗಳು ತಮ್ಮ ಕಲಾ ಪ್ರದರ್ಶನ ಮೂಲಕ ಪಲ್ಲಕ್ಕಿಉತ್ಸವದ ಮೆರಗನ್ನು ಮತ್ತಷ್ಟು ಹೆಚ್ಚಿಸಲಿವೆ. 

ಮಂಗರೂರಿನಚಂಡಿ ವಾದನ, ಚಿತ್ರದುರ್ಗದಗೊರವರಕುಣಿತ, ಗೋಬೆ ಕುಣಿತ, ನವೀಲು ಕುಣಿತ, ಕೋಳಿ ಕುಣಿತ, ಡೊಳ್ಳು ಕುಣಿತ, ಸವಣೂರಿನ ಹಲಗೆ ಮೇಳ, ತುಮಕುರಿನ ಕಹಳೆ ಮತ್ತು ನಾಸಿಕ್ ಡೋಲ್, ಬಿನ್ನಾಳದ ಹಲಗೆ ಸಾಧನ, ಸಿರಗುಪ್ಪದ ಡೊಳ್ಳು ಕುಣಿತ, ಗೌರಾಪುರ (ಚಿಕ್ಕಮಂಗಳೂರು) ವೀರಗಾಸೆ, ಹೊಪೇಟೆಯ ಕೀಲು ಕುದುರೆ, ಕುಣಿಕೇರಿಯ ಝಾಂಜಮೇಳ, ಕೊಪ್ಪಳದ ಹಗಲುವೇಷ, ಚಿಲಕಮುಖಿಯ ಸಮಾಳ, ಉಪ್ಪಾರಗಟ್ಟಿಯ ನಂದಿಕೋಲುಜಾನಪದ ಕಲಾ ತಂಡಗಳು ಪ್ರದರ್ಶನ ನೀಡುತ್ತವೆ. ಶ್ರೀ ಗವಿಸಿದ್ಧೇಶ್ವರ ಪಲ್ಲಕ್ಕಿ ಉತ್ಸವ ಆರಂಭವಾಗುವ ಕೋಟೆ ಏರಿಯಾದಲ್ಲಿರುವ ಜಡೇಗೌಡರ ಮನೆಯಿಂದ ಶ್ರೀಮಠದವರೆಗೆ ಜನಪದ ಕಲಾತಂಡಗಳ ಪ್ರದರ್ಶಗಳು ಜರುಗುವವು. 

ಹೆಚ್ಚಿನ ಮಾಹಿತಿಗಾಗಿ 9242181322, ಈ ಮೋಬೈಲ್ ಸಂಖ್ಯೆಗೆ ಸಂಪರ್ಕಿಸಬಹುದುಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಿದೆ.