ಜನವರಿ 19ರಂದು ಜರಗುವ ಚುನಾವಣೆಗೆ ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಪುರಸಭೆ
ತಾಳಿಕೋಟಿ 10: ಪಟ್ಟಣದ ಪ್ರತಿಷ್ಠಿತ ಸಹಕಾರಿ ಕೋ- ಆಪರೇಟಿವ್ ಬ್ಯಾಂಕ್ ಇದರ ಆಡಳಿತ ಮಂಡಳಿ ನಿರ್ದೇಶಕರ 13 ಸ್ಥಾನಗಳಿಗೆ ಜನವರಿ 19ರಂದು ಜರಗುವ ಚುನಾವಣೆಗೆ ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಪುರಸಭೆ ಸದಸ್ಯ ದಲಿತ ಮುಖಂಡ ಮುತ್ತಪ್ಪ ತಿಮ್ಮಪ್ಪ ಚಮಲಾಪೂರ ತಮ್ಮ ನಾಮಪತ್ರ ಸಲ್ಲಿಸಿದರು.ಶುಕ್ರವಾರ ಸರ್ವ ಸಮಾಜದ ಅಪಾರ ಬೆಂಬಲಿಗರೊಂದಿಗೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಿಂದ ಬ್ಯಾಂಕ್ ನವರೆಗೆ ಮೆರವಣಿಗೆಯಲ್ಲಿ ಆಗಮಿಸಿ ಸಹಾಯಕ ಚುನಾವಣಾಧಿಕಾರಿ ಆರಿ್ಬ.ಧಮ್ಮೂರಮಠ ಇವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಉಪಾಧ್ಯಕ್ಷ ಜೈ ಭೀಮ ಮುತ್ತಗಿ ಮಾತನಾಡಿ ಮುತ್ತಪ್ಪಣ್ಣ ಚಮಲಾಪೂರ ಅವರು ಪಟ್ಟಣದ ಎಲ್ಲ ಸಮಾಜದ ಬಾಂಧವರ ಪ್ರೀತಿಗೆ ಪಾತ್ರರಾಗಿದ್ದಾರೆ. ಪಟ್ಟಣದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಕೊಡುಗೆಯನ್ನು ಅವರು ನೀಡಿದ್ದಾರೆ. ಈಗಾಗಲೇ ಪುರಸಭೆ ಸದಸ್ಯರಾಗಿ ಸಾಕಷ್ಟು ಕೆಲಸ ಮಾಡಿದ ಅನುಭವ ಅವರಿಗಿದೆ ಅವರು ಇನ್ನಷ್ಟು ಸೇವೆ ಮಾಡುವಂತಾಗಲು ಶೇರುದಾರ ಬಾಂಧವರು ಈ ಚುನಾವಣೆಯಲ್ಲಿ ಅವರಿಗೆ ಆಶೀರ್ವಾದ ಮಾಡಬೇಕು ಎಂದರು.ಈ ಸಮಯದಲ್ಲಿ ನಿವೃತ್ತ ಪೊಲೀಸ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ,ಪುರಸಭೆ ಸದಸ್ಯ ಅಣ್ಣಾಜಿ ಜಗತಾಪ, ಪರುಶುರಾಮ ತಂಗಡಗಿ,ಪ್ರಕಾಶ ಹಜೇರಿ,ತಿಪ್ಪಣ್ಣ ಸಜ್ಜನ,ಸುರೇಶ ಹಜೇರಿ,ಬಿ.ಎಂ.ಪಾಟೀಲ,ಮಹಾಂತೇಶ ಮುರಾಳ,ಮಾನಸಿಂಗ್ ಕೊಕಟನೂರ,ಮಹೆಬೂಬ ಕೆಂಭಾವಿ, ಮಂಜುನಾಥ್ ಶೆಟ್ಟಿ,ಹರಿಸಿಂಗ್ ಮೂಲಿಮನಿ,ನಿರಂಜನಶಾ ಮಕಾನದಾರ, ಗೋವಿಂದಸಿಂಗ್ ಗೌಡಗೇರಿ,ಹುಸೇನ ಜಮಾದಾರ, ರಘಸಿಂಗ್ ಹಜೇರಿ, ಸಿದ್ದಪ್ಪ ಕಟ್ಟಿಮನಿ,ಶರಣಗೌಡ ಗೊಟಖಂಡಕಿ,ರವಿ ಆರ್.ಕಟ್ಟಿಮನಿ, ಶಂಕರ ಪಡಸಾಲಿ,ಹರಿಸಿಂಗ್ ಹಜೇರಿ, ಗೋಪಾಲ ವಿಜಾಪುರ, ಕಾಶಿನಾಥ್ ಕಾರಗನೂರ ಮತ್ತೀತರರು ಇದ್ದರು.