ಕಾಗವಾಡ 30: ಶಾಲೆಯ ವಿದ್ಯಾಥರ್ಿ ತನ್ನ ವರ್ಗದಲ್ಲಿ ಓದುತ್ತಿರುವ ಮಕ್ಕಳ ಸಮಸ್ಯೆ ಮನಗಂಡು ಅವರ ಸಹಾಯಕ್ಕಾಗಿ ತಾಯಿಯ ಪಸರ್್ದಿಂದ ಹಣ ಕದ್ದುಕೊಂಡು ಸಹಾಯ ಮಾಡುತ್ತಿರುವದನ್ನು ತಾಯಿ ಕಂಡು, ಬಡ ಮಕ್ಕಳನ್ನು ದತ್ತು ತಗೆದುಕೊಂಡು ಅವರ ಇಡಿ ಜೀವನದ ಶಿಕ್ಷಣದ ವೆಚ್ಚ ಭರಿಸುವದಾಗಿ ಪಣತೊಟ್ಟಿದ್ದು ಬೇರೆಯಾರಲ್ಲಾ, ಉಗಾರ ಜಿಲ್ಲಾ ಪಂಚಾಯತಿ ಸದಸ್ಯರು ಮತ್ತು ಬೆಳಗಾವಿ ಜಿಲ್ಲಾ ಪಂಚಾಯತಿ ಆಧ್ಯಕ್ಷೆ ಆಶಾತಾಯಿ ಐಹೊಳೆ ಅವರು.
ಶನಿವಾರದಂದು ಕಾಗವಾಡ ಗ್ರಾಮದ ಉದರ್ು ಶಾಲೆಗೆ ಜಿ.ಪಂ ಆಧ್ಯಕ್ಷೆ ಆಶಾ ಐಹೊಳೆ ಭೇಟಿ ನೀಡಿ, ಅಲ್ಲಿಯ ಮುಸ್ಲಿಂ ಸಮಾಜದ 5ನೇ ತರಗತಿಯಲ್ಲಿ ಓದುತ್ತಿರುವ ಬಡ ಮಕ್ಕಳಾದ ಅಫಜಲ್ ಅಸ್ಲಂ ಜಮಾದಾರ್ ಮತ್ತು ಸನಾಯಿ ಇಸಾಬ್ ಕೊರಬು ಇಬ್ಬರು ಮಕ್ಕಳನ್ನು ಆಶಾತಾಯಿ ಐಹೊಳೆ ದತ್ತು ತಗೆದುಕೊಂಡರು.
ಈ ಇಬ್ಬರು ಮಕ್ಕಳ ಪದವಿ ಶಿಕ್ಷಣ ಓದುವರೆಗೆ ಎಲ್ಲ ಶೈಕ್ಷಣಿಕ ವೆಚ್ಚ ನಾನೆ ಭರಿಸುತ್ತೇನೆ ಎಂದು ಆಶಾ ಐಹೊಳೆ ಹೇಳಿದರು.
ಮಕ್ಕಳನ್ನು ದತ್ತು ತಗೆದುಕೊಳ್ಳುತ್ತಿರುವ ಬಗ್ಗೆ ವಿಚಾರಿಸದಾಗ ಆಶಾ ಐಹೊಳೆ ಇವರು ಹೇಳಿದ್ದು ಹೀಗೆ. ಅವರ ಮಗನಾದ 5ನೇ ತರಗತಿಯಲ್ಲಿ ಓದುತ್ತಿರುವ ಸಮದರ್ಶನ ಇತನು ತನ್ನ ವರ್ಗದಲ್ಲಿ ಓದುತ್ತಿರುವ ಸ್ನೇಹಿತರ ಸಮಸ್ಯೆಗಳನ್ನು ಕೇಳಿಕೊಂಡು ನನ್ನ ಪಸರ್್ದಿಂದ 3 ಸಾವಿರ ರುಪಾಯಿ ಕಳ್ಳತನ ಮಾಡಿದ್ದನು. ವಿಚಾರಿಸಿದಾಗ ಪ್ರಾರಂಭದಲ್ಲಿ ನಾನು ತಗೆದುಕೊಂಡಿಲ್ಲಾ ಅಂತ ಹೇಳಿದ್ದನು. ಇದರ ಬಗ್ಗೆ ತನಿಖೆ ಮಾಡಿದಾಗ ಆತನು ಸ್ನೇಹಿತರ ಶಿಕ್ಷಣಕ್ಕಾಗಿ ಬಳಿಸಿದ್ದು ಮನಗಂಡು ಮಕ್ಕಳನ್ನು ದತ್ತ ತಗೆದುಕೊಳ್ಳಲು ನಿರ್ಧರಿಸಿದೆ.
ಉಗಾರ ಬುದ್ರುಕ ಗ್ರಾಮದಲ್ಲಿ "ಆಶಾ ಸಂಜೀವನಿ" ಯೋಜನೆ ರೂಪಿಸಿ ಈಗಾಗಲೇ 6 ಮಕ್ಕಳನ್ನು ದತ್ತು ತಗೆದುಕೊಂಡಿದ್ದೇವೆ. ಇದೆ ರೀತಿ ಶಿಕ್ಷಣ ಸೇವೆಯಲ್ಲಿರುವ ಅಧಿಕಾರಿಗಳು, ಶಿಕ್ಷಕರು, ಶಿಕ್ಷಣಪ್ರೇಮಿಗಳು ಮುಂದಾದರೆ ಅನೇಕ ಮಕ್ಕಳಿಗೆ ಒಳ್ಳೆ ಶಿಕ್ಷಣ ನೀಡಿ, ಒಂದು ಅಳಿಲು ಸೇವೆ ಮಾಡಲು ಸಾಧ್ಯವಿದೆ ಎಂದು ಆಶಾ ಹೇಳಿದರು.
ಈ ವೇಳೆ ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎಸ್.ಜೋಡಗೇರಿ, ಮುಖ್ಯಾಧ್ಯಾಪಿಕೆ ಎಸ್.ವಿ.ಮುಲ್ಲಾ, ಎಂ.ಎಂ.ಅತ್ತಾರ್, ಬಿ.ಐ.ಸೆಂಡುರೆ, ಟಿ.ಬಿ.ಜಮಾದಾರ್, ಎಂ.ಎಸ್.ಸಯ್ಯದ್, ಗ್ರಾ.ಪಂ ಸದಸ್ಯ ರಮೇಶ ಚೌಗುಲೆ, ಸತ್ಯಗೌಡಾ ಪಾಟೀಲ ಸೇರಿದಂತೆ ಅನೇಕರು ಇದ್ದರು.