ವಾಮಾಚಾರದ ಪರಿಣಾಮವಾಗಿ ಮನೆಗಳೆರಡು ಹೊತ್ತಿ ಉರಿದಿವೆ : ಕುಟುಂಬಸ್ಥರ ಆರೋಪ

ಲೋಕದರ್ಶನ ವರದಿ

ತಾಂಬಾ 14:ಬೆನಕನಹಳ್ಳಿ ಗ್ರಾಮದಲ್ಲಿ ವಾಮಾಚಾರದ ಪರಿಣಾಮವಾಗಿ ಮನೆಗಳೆರಡು ಹೊತ್ತಿ ಉರಿದ ಘಟನೆ ಶನಿವಾರರಂದು ನಡೆದಿದೆ ಎನ್ನಲಾಗುತ್ತಿದೆ.

            ಬೆನಕನಹಳ್ಳಿ ಗ್ರಾಮದ ರಾಜಕುಮಾರ ಶರಣಪ್ಪ ಅಂಕಲಗಿ ಎಂಬುವವರಿಗೆ ಸೇರಿದ ಎರಡೂ ಮನೆಗಳು ಸುಟ್ಟು ಭಸ್ಮವಾಗಿವೆ.

            ಸುಮಾರು 15 ದಿನಗಳಿಂದ ಮನೆಯ ಒಂದಿಲ್ಲೊಂದು ಕಡೆ ವಿಚಿತ್ರವಾಗಿ ಬೆಂಕಿ ಕಾಣಿಸಿಕೊಳ್ಳುತ್ತಿತ್ತು. ಅಲ್ಲದೆ ಮನೆಯ ಬಳಿಯ ತೆಂಗಿನ ಮರ ಬೆವಿನ ಮರಗಳಲ್ಲಿಯೂ ಬೆಂಕಿ ಕಾಣಿಸಿಕೊಂಡಿತ್ತು ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಹಾಗೂ ಗ್ರಾಮದ ಹಿರಿಯರನ್ನು ಕುಡಿಸಿ ವಾಮಾಚರ ಮಾಡಲು ಕಾರಣಿಬೂತರಾದ ವೀರಭದ್ರಪ್ಪ ಅಂಕಲಗಿಯವರಿಗೆ ಹೇಳಿದರೂ ಮತ್ತೆ ನಮ್ಮ ಮನೆಯಮೇಲೆ ವಾಮಾಚಾರ ಮಾಡಿದ್ದಾರೆ ಎಂದು ರಾಜಕುಮಾರ ಅಂಕಲಗಿಯವರು ಗಂಭಿರವಾಗಿ ಆರೋಪಿಸಿದ್ದಾರೆ.

            ಮನೆಯಲ್ಲಿದ್ದ ಮೂರೂ ತೋಲಿ ಬಂಗಾರ 70 ಸಾವಿರ ರೂಗಳು ದವಸ ದಾನ್ಯ ಬಟ್ಟೆಗಳು ಸುಟ್ಟು ಸಂಪೂರ್ಣ ಕರಕಲಾಗಿವೆ. ಹಾಗೂ ಎರಡು ಟೆಂಗಿನ ಮರಗಳು ಬೇವಿನಮರಗಳು ಸುಟ್ಟುಹೋಗಿವೆ.

            ಶನಿವಾರ ಬೆಳಿಗ್ಗೆಯೆ ಘಟನೆ ಸಂಭವಿಸಿದ್ದರೂ ಸ್ಥಳಕ್ಕೆ ತಾಲೂಕಾ ಆಡಳಿತದ ಯಾವ ಸಿಬ್ಬಂದಿಯೂ ಭೇಟಿ ನೀಡದ ಪರಿಣಾಮ ಅಧಿಕಾರಿಗಳ ವಿರುದ್ದ ಕುಟುಂಬಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ.

            ಈ ಘಟನೆಗೆ ವಾಮಾಚಾರವೇ ನೇರ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನೀರಾಶ್ರೀತರಾದ ರಾಜಕುಮಾರ ಕುಟುಂಭಕ್ಕೆ ಸರಕಾರದಿಂದ ಪರಿಹಾರ ನೀಡಬೇಕು ಎಂದು ಗ್ರಾಮಸ್ತರು ಆಗ್ರಹಿಸದ್ದಾರೆ.