ಕಳಪೆ ತೊಗರಿ ಬೀಜ ವಿತರಣೆಯಲ್ಲಿ ರೈತರಿಗೆ ಮೋಸ, ಕಾಯಿ ಬೆಳೆಯದೆ ರೈತರಿಗೆ ಅಪಾರ ಹಾನಿ, ಪರಿಹಾರ ನೀಡಲು ಅರವಿಂದ ಕುಲಕರ್ಣಿ ಆಗ್ರಹ.
ವಿಜಯಪುರ 25 : ಕೃಷಿ ಇಲಾಖೆಯ ಮೂಲಕ ವಿತರಿಸಿದ ಜಿ.ಆರ್.ಜಿ152 ಹಾಗೂ ಜಿ.ಆರ್.ಜಿ 811 ಕಳಪೆ ತೊಗರಿ ಬೀಜ ವಿತರಣೆ ಮಾಡಿದ್ದರಿಂದ ಬಿತ್ತಿದತೊಗರಿ ಬೆಳೆ ನೋಡಲು ಬಲು ಅಬ್ಬರವಾಗಿದೆ. ಆದರೆ ಗಿಡಗಳಲ್ಲಿ ಒಂದುತೊಗರಿ ಕಾಯಿ ಇಲ್ಲಇದರಿಂದರೈತರುಆತಂಕಕ್ಕಿಡಾಗಿದ್ದಾರೆ. ಹಾನಿಗೊಳಗಾದ ತೊಗರಿಗೆ ಸೂಕ್ತ ಪರಿಹಾರಒದಗಿಸಬೇಕು. ಹಾಗೂ ಕಳಪೆ ತೊಗರಿ ಬೀಜ ವಿತರಿಸಿದ ಕಂಪನಿಗಳ ವಿರುದ್ಧಕ್ರಮಜರುಗಿಸಬೇಕು. ಪರೀಶೀಲನೆ ಮಾಡದೆ ಕೃಷಿ ಇಲಾಖೆಯಿಂದ ಬೀಜ ವಿತರಿಸಿರುವುದು ಇದು ಅಧಿಕಾರಿಗಳ ಬೇಜವಾಬ್ದಾರಿಎದ್ದುಕಾಣುತ್ತಿದೆಆದ್ದರಿಂದ ಕಳಪೆ ಬೀಜ ವಿತರಿಸಿದ ಕಂಪನಿ ಮೇಲೆ ಹಾಗೂ ರೈತರಿಗೆ ಸುಳ್ಳು ಹೇಳಿ ಕಳಪೆ ಬೀಜಕೊಟ್ಟ ಕೃಷಿ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದುಅಖಂಡಕರ್ನಾಟಕರೈತ ಸಂಘದಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದಕುಲಕರ್ಣಿಒತ್ತಾಯಿಸಿದ್ದಾರೆ.
ಅಪರಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯಪುರ ಜಿಲ್ಲೆಯಾದ್ಯಂತ ತೊಗರಿ ಬೆಳೆ ಅಪಾರ ಪ್ರಮಾಣದಲಿ ್ಲಹಾನಿಯಾಗಿದೆ. ಇಡೀ ಜಿಲ್ಲೆಯಲ್ಲಿ ಜಿ.ಆರ್.ಜಿ 152 ಹಾಗೂ ಜಿ.ಆರ್.ಜಿ 811ತೊಗರಿ ಬೀಜ ಬಿತ್ತನೆ ಮಾಡಲಾಗಿದೆ. ಕೃಷಿ ಇಲಾಖೆಯವರು ಬೀಜ ತೆಗೆದುಕೊಳ್ಳುವ ಸಂದರ್ಭದಲ್ಲಿತೊಗರಿಗುಣಮಟ್ಟಯಾವ ತಳಿ ಬೀಜರೈತರು ಬಿತ್ತನೆ ಮಾಡಬೇಕಾದರೆ ಇದಕ್ಕೆ ಅನುಸರಿಸಬೇಕಾದ ಕ್ರಮಗಳೆನು ಎಂಬುದರ ಬಗ್ಗೆ ಮೊದಲು ಇಲಾಖೆ ಅಧಿಕಾರಿಗಳು ಮಾಹಿತಿ ಪಡೆದುಕೊಂಡು ನಂತರರೈತರುತೊಗರಿ ಬೀಜಖರೀದಿ ಮಾಡುವ ಸಂದರ್ಭದಲ್ಲಿರೈತರಿಗೆ ತಿಳಿ ಹೇಳಿ ಬಿತ್ತನೆಯ ಸಂದರ್ಭದಲ್ಲಿ ಯಾವಕ್ರಮ ಅನುಸರಿಸಬೇಕು ಜಿ.ಆರ್.ಜಿ 152 ಹಾಗೂ ಜಿ.ಆರ್.ಜಿ 811ತೊಗರಿ ಬೀಜ ಬಿತ್ತನೆ ಮಾಡಬೇಕಾದರೆ ಎಷ್ಟೆಷ್ಟು ಅಂತರದಲ್ಲಿ ಬಿತ್ತನೆ ಮಾಡಬೇಕೆಂಬುದು ಮೊದಲೇ ಬೀಜದ ಕಂಪನಿಯವರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಕೊಡಬೇಕು. ಬಿತ್ತನೆ ಮಾಡಿದ ನಂತರ ಎಷ್ಟು ಪ್ರಮಾಣ ನೀರು ಹಾಯಿಸಬೇಕು ಮತ್ತು ಯಾವ ಅವಧಿಯ ವರೆಗೆ ತೊಗರಿ ಬೆಳೆಗೆ ನೀರು ಉಣಿಸಬೇಕೆಂಬುದು ಮೊದಲೇ ರೈತರಿಗೆ ಮಾಹಿತಿ ನೀಡಬೇಕು.ಯಾವುದನ್ನುರೈತರಿಗೆ ಮಾಹಿತೀನೀಡಿಲ್ಲ. ಕಂಪನಿಯವರು ನೀಡಿದ ಬೀಜದ ಬಗ್ಗೆ ಯಾವುದೇತೊಂದರೆಇರುವುದಿಲ್ಲ ಹಾಗೂ ಇದುಒಣಬೇಸಾಯದಲ್ಲಿ ಹೆಚ್ಚಿನ ಇಳುವರಿ ಬರುತ್ತದೆಎಂದು ನಂಬಿಸಿದ್ದಾರೆ.ಮತ್ತು ನೆಟೆರೋಗ ಬರುವುದಿಲ್ಲವೆಂದುರೈತರಿಗೆ ನಂಬಿಸಿ ಬೀಜ ವಿತರಣೆ ಮಾಡಿದ್ದಾರೆ.ಬೀಜ ವಿತರಣೆ ಮಾಡಿತೊಗರಿ ಬೆಳೆ ಹಾಳಾದ ನಂತರ ನೀವೆ ತಪ್ಪು ಮಾಡಿದ್ದಿರಿ ಸರಿಯಾಗಿ ಬಿತ್ತನೆ ಮಾಡಿದ ಸಾಲುಗಳಲ್ಲಿ ಅಂತರವಿಲ್ಲ ನೀವು ಸರಿಯಾಗಿ ನೀರು ಒದಗಿಸಿಲ್ಲ ಎಂಬಿತ್ಯಾದಿ ತಪ್ಪುಗಳನ್ನು ರೈತರ ಮೇಲೆ ಹಾಕಿ ರೈತರ ಮೇಲೆ ಆಪಾದನೆಕೊಡಲಾಗುತ್ತಿದೆ.ಇದನ್ನೆ ಬೀಜಖರೀದಿ ಮಾಡುವ ವೇಳೆ ರೈತರಿಗೆ ಸರಿಯಾಗಿ ಮಾಹಿತಿಕೊಡುವದಿಲ್ಲ ಏಕೆ?.ಬೀಜ ಮಾರುವ ಮೊದಲುತಪ್ಪು ಮಾಹಿತಿ ನೀಡಿಎಲ್ಲ ಹಾಳಾದ ನಂತರಹೀಗೆ ಮಾಡಬೇಕಿತ್ತು, ಹಾಗೇ ಮಾಡಬೇಕಿತ್ತುಇದುರೈತರತಪ್ಪುಎಂದು ಹೇಳಿರೈತರ ಮೇಲೆ ಆಪಾದನೆಕೊಡಲಾಗುತ್ತಿದೆ.ಕಳಪೆ ತೊಗರಿ ಬೀಜ ವಿಷಯ ಮರೆ ಮಾಚಲು ಮುಂದಾಗಿದ್ದಾರೆ.ಒಟ್ಟಾರೆತೊಗರಿ ಬೀಜವೇ ಮೊದಲು ಕಳಪೆ ಮಟ್ಟದ್ದಾಗಿದೆ.ಎತ್ತರದಲ್ಲಿತೊಗರಿ ಬೀಜ ಬೆಳೆದರು ಒಂದುತೊಗರಿ ಕಾಯಿ ಆಗಿಲ್ಲಎಂದುರೈತರ ಅಳಲಾಗಿದೆ.ಇದಕ್ಕೆ ಮೂಲ ಕಾರಣ ಕಳಪೆ ಜಿ.ಆರ್.ಜಿ 152 ಹಾಗೂ ಜಿ.ಆರ್.ಜಿ811ತೊಗರಿ ಕಳಪೆ ಬೀಜವನ್ನು ಕೃಷಿ ಇಲಾಖೆಯವರಿಗೆ ಪೂರೈಸಿ ರೈತರನ್ನು ಹಾಳು ಮಾಡಿದ್ದಾರೆ.ರಾಜ್ಯ ಬೀಜ ನಿಗಮದವರುತೊಗರಿ ಬೀಜದಗುಣಮಟ್ಟ ಮಾಡದೇಬೀಜ ವಿತರಿಸುವ ಕಂಪನಿಗೆ ಸರ್ಟಿಪೈ ಮಾಡಿದ್ದಾದರು ಹೇಗೆ.ಸರ್ಟಿಪೈ ಮಾಡಬೇಕಾದರೆಯಾವಆದಾರದ ಮೇಲೆ ಸರ್ಟಿಪೈ ಮಾಡಿದ್ದಾರೆಂಬುದುಇದರಗುಣಮಟ್ಟವನ್ನು ಲ್ಯಾಬದಲ್ಲಿ ಪರೀಕ್ಷೀಸಬೇಕು.ಇದು ಬೀಜ ನಿಗಮದವರು ಹಾಗೂ ಕೃಷಿ ಇಲಾಖೆಯವರಕೈವಾಡಇದೆಎಂಬುದುಸ್ಪಷ್ಟ ಪಡಿಸುತ್ತದೆ.ಮೊದಲೇ ಬರಗಾಲದಿಂದರೈತರು ತತ್ತರಿಸಿದ್ದಾರೆ.ಇಂತಂಹದರಲ್ಲಿ ಬೀಜ ವಿತರಿಸಿದ ಕಂಪನಿಯವರುಒಂದುರೀತಿರೈತರಿಗೆ ಮೋಸ ವೆಸಗುತ್ತಿದ್ದಾರೆ.ಇದರಿಂದ ರೈತರು ತೀವ್ರತೊಂದರೆಅನುಭವಿಸುವಂತಾಗಿದೆ.ಆದ್ದರಿಂದ ಹಾನಿಗೊಳಗಾದ ತೊಗರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕಳಪೆ ಬೀಜ ವಿತರಿಸಿದ ಕಂಪನಿಯನ್ನುಕಪ್ಪು ಪಟ್ಟಿಗೆ ಸೇರಿಸಿ ಕಂಪನಿಯ ಪರವಾನಿಗೆರದ್ದು ಪಡಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದ್ದಾರೆ.