ಲೋಕದರ್ಶನವರದಿ
ರಾಣೇಬೆನ್ನೂರು11: ಶಾಲಾ ಕೊಠಡಿಗಳಿಲ್ಲದೇ ಶಾಲೆಯ ಮಕ್ಕಳನ್ನು ಆಟದ ಮೈದಾನದಲ್ಲಿ ಕುಳಿಸಿ ಪಾಠ ಭೋಧಿಸುತ್ತಿದ್ದ ಶಿಕ್ಷಕರನ್ನು ತೀವೃ ತರಾಟೆಗೆ ತೆಗೆದುಕೊಂಡ ಶಾಸಕ ಅರುಣಕುಮಾರ ಪೂಜಾರವರು ಶಿಕ್ಷಕರ ಬೆವರಿಳಿಸಿದ ಘಟನೆ ತಾಲೂಕಿನ ಹಾರೋಗೊಪ್ಪದ ಸ.ಹಿ.ಪ್ರಾ ಶಾಲೆಯಲ್ಲಿ ನಡೆದಿದೆ.
ಶಾಲೆಯ ಕೊಠಡಿಗಳ ಬಗ್ಗೆ ಶಾಲಾ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ ಶಾಸಕರು ಶಾಲೆಯಲ್ಲಿರುವ ಲಭ್ಯವಿರುವ ಬಹುತೇಕ ಕೊಠಡಿಗಳು ಬೀಳುವ ಹಂತ ತಲುಪಿದ್ದು, ಇದರಿಂದ ಶಾಲಾ ಆವರಣದಲ್ಲಿ ಮಕ್ಕಳಿಗೆ ಬಯಲಲ್ಲಿ ಪಾಠ ಮಾಡಲಾಗುತ್ತಿದೆ ಎಂದು ಶಿಕ್ಷಕರು ವಿವರಿಸಿದರು.
ಈ ಕುರಿತು ಮೇಲಾಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎಂದು ಸಿಬ್ಬಂದಿ ಮಾಹಿತಿ ನೀಡಿದಾಗ ಶಾಸಕರು ತಾಲೂಕಿನಲ್ಲಿರುವ ಎಲ್ಲಾ ಶಾಲಾ ಕೊಠಡಿಗಳ ದುರಸ್ತಿಗಾಗಿ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.
ಬಜೆಟ್ವರೆಗೂ ಕಾಯೋಣ. ಒಂದು ವೇಳೆ ಅನುದಾನ ಬರದೇ ಹೋದರೆ ಶಾಸಕರ ಅನುದಾನದಲ್ಲಿ ಈ ಶಾಲೆಯ ಮೂರು ಕೊಠಡಿಗಳನ್ನು ನಿಮರ್ಿಸಿಕೊಡಲಾಗುವುದು ಎಂದು ಭರವಸೆ ನೀಡಿದರು. ನಾಳೆಯಿಂದ ಮಕ್ಕಳು ನೆಲದ ಮೇಲೆ ಕುಳಿತುಕೊಳ್ಳಲು ತಾಡಪತ್ರೆ ವ್ಯವಸ್ಥೆಯನ್ನು ಕೂಡಲೇ ಮಾಡಲಾಗುವುದು. ಮಕ್ಕಳಿಗೆ ಇನ್ನು ಮುಂದೆ ಇಂತಹ ಬಯಲು ಶಿಕ್ಷೆ ಕೊಡಬೇಡಿ ಎಂದು ಶಿಕ್ಷಕರಲ್ಲಿ ಶಾಸಕರು ಪ್ರಾಥರ್ಿಸಿದರು.
ಆನಂತರ ಶಾಸಕ ಅರುಣಕುಮಾರ ಅವರು, ಬಯಲಿನಲ್ಲಿ ಕುಳಿತ ಮಕ್ಕಳಿಗೆ ಮಗ್ಗಿ, ವ್ಯಂಜನ, ಸ್ವರಗಳನ್ನು ಪ್ರಶ್ನಿಸಿ ಓದುವ ಬಗ್ಗೆ ಪಾಠ ಮಾಡಿದರು. ಅಲ್ಲೇ ಬಯಲಿನಲ್ಲಿ ಹಾಕಿದ ಬೋಡರ್್ನಲ್ಲಿ ತಾವು ಭೇಟಿ ನೀಡಿದ ಬಗ್ಗೆ ಕೈಬರಹದ ಮೂಲಕ ದಾಖಲಿಸಿದರು.
ನಂತರ ಅಲ್ಲಿನ ಬಿಸಿಯೂಟ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗಾಗಿ ತಯಾರಿಸಿದ ಬಿಸಿಯೂಟ ಸವಿದು, ಊಟದಲ್ಲಿ ಸರಿಯಾದ ಉಪ್ಪು, ಖಾರವಿಲ್ಲ. ಹೀಗೆ ಊಟ ತಯಾರಿಸಿದರೆ ಮಕ್ಕಳು ಹೇಗೆ ಮಾಡಬೇಕು ಎಂದು ಅಡುಗೆ ಸಿಬ್ಬಂದಿಯನ್ನು ತರಾಟೆಗೆ ತೆಗದುಕೊಂಡರು. ಈ ಸಮಯದಲ್ಲಿ ಮಂಜುನಾಥ ಓಲೇಕಾರ, ಗುಡ್ಡಪ್ಪ ದೇಸಾಯಿ, ಶಾಲೆಯ ಸಿಬ್ಬಂದಿ, ಗ್ರಾಮದ ಮುಖಂಡರು ಸೇರಿದಂತೆ ಇತರರು ಇದ್ದರು.