ದ್ವೇಷಕ್ಕೆ ಆಸ್ಪದ ಕೊಡದೆ ಎಲ್ಲರನ್ನೂ ಪ್ರೀತಿಸು ಎನ್ನುವ ಅರುಣಾ ಗಜಲ್

'ಅವರಿವರು ಕೊಟ್ಟ ನೋವು ಏಕೆ ಧೇನಿಸುತ್ತಿರುವೆ ಗುಂಡಿ ತೋಡಿ ಮುಚ್ಚಿಬಿಡು' ಎಂದು ತಿಂದ ನೋವುಗಳ ಮೈದಡವಬೇಡ, ಅದು ಇನ್ನೊಂದು ನೋ"ಗೆ ಕಾರಣವಾಗುತ್ತದೆಂದು ಸಂತೈಕೆಯ ಸಾಲುಗಳನ್ನು ಬರೆಯುವ ಗಜಲ್ ಕಮತ್ರಿ ಅರುಣಾ ನರೇಂದ್ರ, ಕೊಪ್ಪಳ ತಾಲೂಕಿನ ಸರಕಾರಿ ಪದ"ಪೂರ್ವ ಕಾಲೇಜು ಕಿನ್ನಾಳದಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಭರವಸೆಯ ಗಜಲ್ ಕಮತ್ರಿಯಾಗಿ ಗುರುತಿಸಿಕೊಂಡಿರುವ ಇವರು ಮಕ್ಕಳ ಕ"ತೆ, ನಾಟಕ, ಹೈಕು, ಆಧುನಿಕ ವಚನಗಳು, ತತ್ವಪದ, ರುಬಾು ಸೇರಿದಂತೆ ಅನೇಕ ಸಾ"ತ್ಯ ಪ್ರಕಾರಗಳಲ್ಲಿ ಕೃ ಮಾಡುತ್ತಿದ್ದಾರೆ. 'ಮಾತು ಮೌನದ ನಡುವೆ', '"ಮದೊಡಲ ಬೆಂಕಿ', 'ಆತ್ಮಸಖಿ' ಎಂಬ ಮೂರು ಗಜಲ್ ಸಂಕಲನಗಳನ್ನು ಪ್ರಕಟಿಸಿ ಗಜಲ್ ಪ್ರಿಯರ ಮನಸು ಗೆದ್ದಿದ್ದಾರೆ. 8 ಮಕ್ಕಳ ಸಂಕಲನಗಳು, ಒಂದು ಹೈಕು ಸಂಕಲನ, ಸಂಪಾದನೆಯ ಸಂಕಲನಗಳು ಪ್ರಕಟಗೊಂಡಿವೆ. 'ಗದ್ದಲದೊಳಗ್ಯಾಕ ನಿಂತಿ' ಎಂಬ ತತ್ವಪದ ಸಂಕಲನ ಅಚ್ಚಿನಲ್ಲಿದೆ. ಈಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ, ಕನ್ನಡ ಸಾ"ತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿ, ಬಿ.ಎಂ.ಶ್ರೀ. ಪ್ರತಿಷ್ಠಾನದ ದತ್ತಿ ಪ್ರಶಸ್ತಿ, ಮಧುರ ಚೆನ್ನ ರಾಜ್ಯ ಪ್ರಶಸ್ತಿ ಒಳಗೊಂಡು ಅನೇಕ ಪುರಸ್ಕಾರಗಳನ್ನು ಪಡೆದಿದ್ದಾರೆ. ಇಂಗ್ಲಿಷ್ ಮಾಧ್ಯಮದ 3 ನೇ ತರಗತಿ ದ್ವಿತೀಯ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿ ಇವರ ಕ"ತೆಯನ್ನು ಅಳವಡಿಸಲಾಗಿದೆ. ತಮ್ಮ "ದ್ಯಾರ್ಥಿಗಳಿಗೂ ಸಾ"ತ್ಯದ ಆಸಕ್ತಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವ"ಸುತ್ತಿದ್ದಾರೆ. 'ಅರುಣಾ' ಎಂಬ ಕಾವ್ಯನಾಮದ ಮೂಲಕ ಇವರು ಗಜಲ್‌ಗಳನ್ನು ಬರೆಯುತ್ತಾರೆ. ನಾನು ತುಂಬ ಇಷ್ಟಪಟ್ಟ ಇವರ ಒಂದು ಗಜಲ್‌ನ ಓದು ಮತ್ತು ಒಳನೋಟ ನಿಮಗಾಗಿ. 


ಗಜಲ್ 


ಜಗತ್ತು "ಶಾಲವಾಗಿದೆ ಕತ್ತಿ ಅಲುಗಿನ ಕೆಳಗೆ ಬದುಕುವುದು ಸಾಕು ಎಲ್ಲರನ್ನು ಪ್ರೀತಿಸು 

ಕಾಕ ಕಾಲಕ್ಕೆ ಬಣ್ಣ ಬದಲಾಗುವುದು ಪ್ರಕೃತಿಯ ನಿಯಮ ಎಲ್ಲವನ್ನು ಪ್ರೀತಿಸು 


ನಾನು ನೀನು ಅವನು ಇವನು ಎಲ್ಲರೂ ಒಂದೇ ಇಲ್ಲಿ ಬಂಧುಗಳೆಂದು ತಿಳಿ 

ದ್ವೇಷದ ಬೆಂಕಿ ಮೊದಲು ನಿನ್ನನ್ನೇ ಸುಟ್ಟೀತು ಅವನನ್ನು ಪ್ರೀತಿಸು 


ಒಣಗಿ ಹೋದ ಹುಲ್ಲು ಕಡ್ಡಿಗೆ ಒಂದು ಬೊಗಸೆ ನೀರು ಸಾಕು ಮತ್ತೆ ಚಿಗುರುವೆ ಎನ್ನುತ್ತದೆ 

ಬಾಡಿ ಹೋದ ಕನಸುಗಳ ಕಳೆಬರ ನೋಡಿ ನೀನೇಕೆ ಬಿಕ್ಕುತ್ತಿ ಇವನನ್ನು ಪ್ರೀತಿಸು 


ಯುದ್ಧದಿಂದ ಗೆಲ್ಲಲಾಗದೆ ಇರುವುದನ್ನು ಪ್ರೀತಿಂದ ಗೆಲ್ಲಬಹುದಂತೆ 

ಹೃದಯಗಳ ನಡು"ನ ಬಿರುಕುಗಳ ಸರಿಪಡಿಸಿ ಇವರನ್ನು ಪ್ರೀತಿಸು 


ಕೋಟಿ ಕೋಟಿ ಹೃದಯಗಳಿಗೆ ನಿನ್ನ ದುಃಖ ಅರ್ಥವಾಗದೇ ಇರಬಹುದು 

ಒಂದಾದರೂ ಕೈ ನಿನ್ನ ಕಣ್ಣೀರು ಒರೆಸಬಹುದು ಅರುಣಾ ಜಗವನ್ನು ಪ್ರೀತಿಸು 


                                      -ಅರುಣಾ ನರೇಂದ್ರ 


ಯೇಸು ಮಹಾಪ್ರಭು ಶಿಲುಬೆಗೇರುವಾಗ 'ದೇವರೇ ಇವರೇನು ಮಾಡುತ್ತಿದ್ದಾರೆಂದು ಅರಿ"ಲ್ಲ. ಇವರನ್ನು ಕ್ಷ"ುಸಿಬಿಡು' ಎಂದು ಬೇಡಿಕೊಂಡರಂತೆ. ತನಗೆ "ಂಸೆ ನೀಡುತ್ತಿರುವವರನ್ನು ಕ್ಷ"ುಸುವ ಭಾವನೆ "ನಾಕಾರಣ ಜಗತ್ತನ್ನು ಪ್ರೀತಿಸುವವರಿಗೆ ಮಾತ್ರ ಬರುತ್ತದೆ. ಇಂದು ಭಯ, ಅಸಹನೆ, ದ್ವೇಷ, ಸಣ್ಣತನ, ಹತಾಶಭಾವ ಪ್ರತಿಯೊಬ್ಬರಲ್ಲೂ ಸ"್ಮುಳಿತಗೊಂಡು ಮನಸನ್ನು "ಹ್ವಲಗೊಳಿಸಿದೆ. ಅಪನಂಬುಗೆ, ಅನುಮಾನ ಕ್ಷಣಕ್ಷಣಕ್ಕೂ ಬದುಕಿನ ನೆಮ್ಮದಿಯನ್ನು ತಿಂದು ತೇಗುತ್ತಿವೆ. ಮನುಷ್ಯ ಮನುಷ್ಯನನ್ನು ಪ್ರೀತಿಸದಿದ್ದರೆ ಹೇಗೆ? ಬುದ್ಧ, ಬಸವ, ಅಂಬೇಡ್ಕರ್ ಆದಿಯಾಗಿ ಎಲ್ಲ ಮಹಾತ್ಮರೂ ಸಕಲ ಜೀ"ಗಳಿಗೆ ಲೇಸನ್ನೇ ಬಯಸುವುದನ್ನು, ಪ್ರೀತಿಯ ಮೂಲಕವೇ ಎಲ್ಲರನ್ನು ಗೆಲ್ಲಬಹುದೆಂಬ ಮಂತ್ರವನ್ನು ಕಲಿಸಿಹೋದರು. ಆದರೆ ನಾ"ಂದು ದ್ವೇಷ, ಹಗೆತನಗಳಿಂದಲೇ ಬದುಕಿ ಇನ್ನೊಬ್ಬರ ನೆಮ್ಮದಿಯನ್ನು ಹಾಳು ಮಾಡುತ್ತಿರುವುದಷ್ಟೇ ಅಲ್ಲ, ನಮ್ಮ ಶಾಂತಿ-ಸಮಾಧಾನಕ್ಕೂ ಎಳ್ಳು ನೀರು ಬಿಡುತ್ತಿದ್ದೇವೆ. ಅರುಣಾ ನರೇಂದ್ರ ಅವರ ಗಜಲ್ ಕುಸಿದು ಹೋಗಿರುವ ಹತಾಶ ಜೀ"ಗಳಿಗೆ ಸಾಂತ್ವನ ತುಂಬುವುದಷ್ಟೇ ಅಲ್ಲ, ಜಗವನ್ನು ಪ್ರೀತಿಸುವ ಅದಮ್ಯ ಹಂಬಲವನ್ನು ಬಿತ್ತುತ್ತದೆ. 

ನಾವಂದುಕೊಂಡಿರುವ ಹಾಗೆ ಎಲ್ಲವೂ ಒಮ್ಮೆಲೆ ಮುಗಿದು ಹೋಗುವುದಿಲ್ಲ. ಎಲ್ಲಕ್ಕೂ ಒಂದು ಕೊನೆ ಎಂಬುದಿರುತ್ತದೆ. ಭಯದ ನಡುವೆಯೇ ಬದುಕನ್ನು ಸಾಗಿಸಬೇಕೆಂದೇನಿಲ್ಲ, ಭರವಸೆಯೂ ಮುಂದಿನ ಹಾದಿಗೆ ಬೆಳಕಾಗಿ ಬರಬಹುದು. ಕಾಲಮಾನ ಬದಲಾದ ಹಾಗೆ ಮನುಷ್ಯರೂ ಬಣ್ಣ ಬದಲಾುಸುತ್ತಾರೆ. ಹಾಗೆಂದೂ ಅವರನ್ನು ದ್ವೇಸಬೇಕೆಂದೇನಿಲ್ಲ, ಎಲ್ಲವನ್ನು, ಎಲ್ಲರನ್ನೂ ಪ್ರೀತಿಸುತ್ತಲೇ ಸಾಗಬೇಕು. ರ"ಂದ್ರನಾಥ್ ಟ್ಯಾಗೋರ್‌ರ "ಶ್ವಭ್ರಾತೃತ್ವದ ಕಲ್ಪನೆಯಂತೆ ನಿನ್ನ ಜೊತೆ ಇರುವವರನ್ನೆಲ್ಲ ಬಂಧುಗಳೆಂದು ತಿಳಿಯಬೇಕು. 'ನಿನ್ನೊಳಗಿನ ಕಿಚ್ಚು ನಿನ್ನನ್ನೇ ಸುಟ್ಟೀತು' ಎಂಬಂತೆ ವೃಥಾ ದ್ವೇಷಕ್ಕೆ ಆಸ್ಪದ ಕೊಡದೆ ಪ್ರೀತಿಸುವುದನ್ನು ಕಲಿಯಬೇಕು. ಮತ್ತೆ ಮತ್ತೆ ಉತ್ಸಾಹದಿಂದ ಪುಟಿದೆದ್ದು ನಿಲ್ಲುವ ನಿಸರ್ಗದ ಜೀವಂತಿಕೆ ನಮಗೆ ಪಾಠವಾಗಬೇಕು. ಒಂದೇ ಸೋಲು, ಒಂದೇ ನೋ"ನಿಂದೇಕೆ ಹತಾಶರಾಗಿ ಕೈಚೆಲ್ಲಬೇಕು? ಪ್ರೀತಿಂದಲೇ ಜಗತ್ತನ್ನು ಜುಸಿದ ಬುದ್ಧ, ಶಸ್ತ್ರಸನ್ಯಾಸ ಸ್ವೀಕರಿಸಿ ಇತಿಹಾಸದಲ್ಲಿ ಅಮರನಾಗಿ ಉಳಿದು ಹೋದ ಅಶೋಕ ಚಕ್ರವರ್ತಿ ಶಾಂತಿ-ಪ್ರೀತಿಂದಲೇ ಜನರ ಮನಸ್ಸಿನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬಹುದು ಎಂಬುದನ್ನು ತೋರಿಸಿದರು. ಎಲ್ಲರೂ ನಿನ್ನ ನೋ"ಗೆ ಕಣ್ಣೀರಾಗದಿದ್ದರೂ ಸರಿ ಒಬ್ಬರಾದರೂ ನಿನ್ನ ಕಣ್ಣ ಹನಿಗಳನ್ನು ಸಂತೈಸುತ್ತಾರೆ, ನಿನ್ನ ನೋ"ಗೆ ಕಿ"ಗೊಡುತ್ತಾರೆ. ಹಾಗಿದ್ದ ಮೇಲೆ ಮುರಿದ ಹೃದಯಗಳನ್ನು ಒಂದುಗೂಡಿಸಿ "ನಾಕಾರಣ ಈ ಜಗವನ್ನು ಪ್ರೀತಿಸು ಎನ್ನುತ್ತಾರೆ ಕಮತ್ರಿ ಅರುಣಾ ನರೇಂದ್ರ. 

ಮನುಷ್ಯ ಪ್ರೀತಿ, ಸಹೋದರತೆ, ಶಾಂತಿ-ಸೌಹಾರ್ದತೆುಂದ ಬದುಕಿ ಬಾಳುವುದರಲ್ಲಿ ಬದುಕಿನ ಘನತೆ ಅಡಗಿದೆ ಎಂಬ ಸಾರವನ್ನು ಅಭಿವ್ಯಕ್ತಿಸುವ ಅರುಣಾ ನರೇಂದ್ರ ಅವರ ಗಜಲ್ ಇಷ್ಟವಾಗುತ್ತದೆ. ಕಮತ್ರಿ ಇಂತಹ ಸಂತೈಕೆಯ ಗಜಲ್‌ಗಳನ್ನು ಬರೆಯುತ್ತಲಿರಲಿ ಎಂಬ ಹಾರೈಕೆಯೊಂದಿಗೆ ಅವರನ್ನು ಅಭಿನಂದಿಸುವೆ.