ಕಲಾವಿದರು ಭಾರತದ ಭಾಗ್ಯವಿದಾತರು: ವಿಶ್ವನಾಥ ಗುಗ್ಗರಿ

ಲೋಕದರ್ಶನ ವರದಿ ಬೆಳಗಾವಿ 09: ಕಲೆಯು ಮನುಷ್ಯನನ್ನು ಸಂಸ್ಕಾರವಂತನನ್ನಾಗಿಸುತ್ತದೆ. ಕಲೆ ಹಾಗೂ ಕಲಾವಿದರ ಬೆಳವಣಿಗೆಯಿಂದ ದೇಶ ಹುಲುಸಾಗಿ ಬೆಳೆಯಲು ಸಾಧ್ಯವಿದೆ. ಕಲೆ ಮತ್ತು ಸಂಸ್ಕೃತಿಯ ರಕ್ಷಣೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಆರ್ಟ ಅಫೀಯರ್ ಮಾಸ ಪತ್ರಿಕೆ ಸಂಪಾದಕ ಹಾಗೂ ಚಿತ್ರಕಲಾವಿದರಾದ ಶ್ರೀ ವಿಶ್ವನಾಥ ಗುಗ್ಗರಿ ಹೇಳಿದರು. ಇತ್ತೀಚೆಗೆ ಸಿದ್ಧಾರ್ಥ ಲಲಿತಕಲಾ ಮಹಾವಿದ್ಯಾಲಯದ ವಿದ್ಯಾಥರ್ಿಗಳು ಪ್ರಾಚಾರ್ಯ ಜಯಾನಂದ ಮಾದರ ರವರ ಮುಖ್ಯಸ್ಥಿಕೆಯಲ್ಲಿ ಹಾಗೂ ಅಧ್ಯಾಪಕಿ ಮಲ್ಲಮ್ಮ ದಳವಾಯಿಯವರ ಸಂಚಾಲಕತ್ವದಲ್ಲಿ ವಿಶ್ವದ ಪ್ರಸಿದ್ಧ ಐತಿಹಾಸಿಕ ಹಂಪಿಯಲ್ಲಿ 8 ದಿನಗಳಕಾಲ ಲ್ಯಾಂಡಸ್ಕೇಪ್ ಕ್ಯಾಂಪಿನಲ್ಲಿ ರಚನೆಗೊಂಡ ಪೇಂಟಿಂಗ್ಗಳನ್ನು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕಳೆದ ಬುಧವಾರ ದಿ.08.01.2020 ರಂದು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಅಂತರಾಷ್ಟ್ರೀಯ ಕಲಾವಿದ ಡಾ.ಬಾಬೂರಾವ್ ನಡೋಣಿ ವಿದ್ಯಾಥರ್ಿ ಜೀವನದ ಕಾಲಘಟ್ಟ ಅಮೂಲ್ಯವಾದುದು. ಸತತ ಪರಿಶ್ರಮದಿಂದ ಸಾಧನೆ ಸಿದ್ದಿಸುತ್ತದೆ. ಚಿತ್ರಕಲೆ ಪವಿತ್ರ ವಿದ್ಯೆಯಾಗಿದ್ದು, ಅದರಿಂದ ಬದುಕು ಸುಂದರಗೊಳ್ಳುತ್ತದೆ ಎಂದು ಸಲಹೆ ನೀಡಿದರು. ಕಾಲೇಜಿನ ಪ್ರಾಚಾರ್ಯ ಹಾಗೂ ಕನರ್ಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಜಯಾನಂದ ಮಾದರ ಪ್ರಾಸ್ತಾವಿಕ ಮಾತನಾಡುತ್ತಾ, ಸುಮಾರು 20 ಕಲಾ ವಿದ್ಯಾಥರ್ಿಗಳು ಕ್ಯಾಂಪಿನಲ್ಲಿ ಪಾಲ್ಗೊಂಡು ಹಂಪಿಯ ಐತಿಹಾಸಿಕ ಸ್ಮಾರಕಗಳನ್ನು ಜಲವರ್ಣ ಹಾಗೂ ಅಕ್ರಾಲಿಕ್ ವರ್ಣಗಳಲ್ಲಿ ಸೆರೆಹಿಡಿದು ನೂರಾರು ಕಲಾಕೃತಿಗಳನ್ನು ರಚಿಸಿ, ಬೆಳಗಾವಿ ನಗರ ಪ್ರದೇಶದಲ್ಲಿ ಪ್ರದರ್ಶನ ನೀಡುವುದರ ಮೂಲಕ ಈ ಭಾಗದ ಜನತೆಗೆ ಇತಿಹಾಸದ ಪರಿಚಯವನ್ನು ಮಾಡಿಕೊಡುತ್ತಿರುವ ವಿದ್ಯಾಥರ್ಿಗಳ ಪರಿಶ್ರಮ ಸ್ತುತ್ಯಾರ್ಹವಾದುದು ಎಂದರು. ಸ್ಥಳೀಯ ಕಲಾವಿದರಾದ ಶಿಲ್ಪಾ ಕಡಕಬಾವಿ, ಶಾಂತಾ ಆಚಾರ್ಯ, ಅನಿಲ ಪ್ರಕಾಶ, ನಾಗೇಶ ಚಿಮರೊಳ ಉಪಸ್ಥಿತರಿದ್ದರು. ಯುವ ಚಿತ್ರಕಲಾವಿದ ಘೋಡಗೇರಿಯ ಬಸವರಾಜ ದಾರೋಜಿಯವರನ್ನು ಸತ್ಕರಿಸಲಾಯಿತು. ಕು.ನೇತ್ರಾ ಬೆಳಗಲಿ ಸ್ವಾಗತಿಸಿದರು, ಪ್ರವೀಣ ಯಡ್ರಾಂವಿ ಪ್ರಾಥರ್ಿಸಿದರು. ನೇತ್ರಾವತಿ ಬೆಳಗಲಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಜುಗಳಿ ವಂದಿಸಿದರು. ದೀಪಾ ಶಿಂತ್ರಿ ಪರಿಚಯಿಸಿ, ನಿರೂಪಿಸಿದರು.