ಹುಬ್ಬಳ್ಳಿ 19: ಉಸ್ತಾದ್ ಜಾಕೀರ್ ಹುಸೇನ್ ಅವರು 73 ವರ್ಷಗಳಲ್ಲಿ ಮಾಡಿದ ಸಾಧನೆ ನಿಜಕ್ಕೂ ಅದ್ಭುತ ಅವರ ಈ ಸಾಧನೆಗೆ ಅವರೇ ಸಾಟಿ ಹೀಗಾಗಿ ಅವರು ಯುಗದ ಕಲಾವಿದ ಎಂದು ತಬಲಾ ವಾದಕ ಡಾ. ನಾಗಲಿಂಗ ಮುರಗಿ ಅವರು ಹೇಳಿದರು.ಉಸ್ತಾದ್ ಜಾಕೀರ್ ಹುಸೇನ್ ಅವರ ಸ್ವರ ಶ್ರದ್ಧಾಂಜಲಿ ಪ್ರಯುಕ್ತ ಮಂಜುನಾಥ ದೊಡ್ಡಮನಿ ಅವರ ರೇಣುಕಾ ನಗರ ನಿವಾಸದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡುತ್ತ ಉಸ್ತಾದ್ ಜೀ ಜಗದ್ವಿಖ್ಯಾತ ತಬಲಾ ಕಲಾವಿದರಾಗಿದ್ದರು, ಅವರ ವ್ಯಕ್ತಿತ್ವ ಅತ್ಯಂತ ಸರಳ ಅವರ ಬೆರಳುಗಳಿಂದ ತಬಲಾದ ಮೇಲೆ ನುಡಿಸುತ್ತಿದ್ದರೆ ನೋಡುಗರನ್ನು ಬೆರಗುಗೊಳಿಸುವಂತೆ ಮಾಡುತ್ತಿತ್ತು ಅಷ್ಟೇ ಅಲ್ಲ ಅವರ ತಬಲಾ ನುಡಿಸುವ ವಿಡಿಯೋಗಳನ್ನು ನೋಡಿದರೆ ಕನಿಷ್ಠ ವಾರಗಳ ಕಾಲ ನಾದ ರಿಂಗಣಿಸುತ್ತಿತ್ತು ಅವರ ಕೆಲವೊಂದು ಸಂದರ್ಶನಗಳನ್ನು ನೋಡಿದಾಗ ಅವರ ಜೀವನಾನುಭವ ಅಪಾರ. ಕಲೆಗೆ ಪೂಜ್ಯನೀಯ ಭಾವ ಎಷ್ಟಿತ್ತೆಂದರೆ ಇಡೀ ಅವರ ಕಲಾ ಜೀವನದಲ್ಲಿ ಪ್ರತಿ ಕ್ಷಣವೂ ಅವರು ತಬಲಾವನ್ನು ಸಾಕ್ಷಾತ್ ಸರಸ್ವತಿ ಎಂದು ಪೂಜಿಸಿದರು ನಮಗೆಲ್ಲ ಅವರೇ ಮಾದರಿ ಎಂದರು.
ಇದೇ ಸಂದರ್ಭದಲ್ಲಿ ಮೃತ್ಯುಂಜಯ ಚೌಕಿಮಠ, ದಿನೇಶಗೌಡ ಶಾಸ್ತ್ರೀಯ ಗಾಯನ ಪ್ರಸ್ತುತಪಡಿಸಿದರು, ಇವರೊಂದಿಗೆ ಡಾ.ನಾಗಲಿಂಗ ಮುರಗಿ, ಶಬ್ಬೀರ್ ಧಾರವಾಡ, ಶಿವಕುಮಾರ ಅರ್ಕಸಾಲಿ ಅವರು ತಬಲಾ ಹಾಗೂ ಪ್ರೇಮಕೃಷ್ಣ ಮೇಟಿ, ಶಿವಸ್ವಾಮಿ ಹಿರೇಮಠ ಹಾರ್ಮೋನಿಯಂ ಸಾಥ್ ನೀಡಿದರು. ಒಂದು ನಿಮಿಷ ಮೌನಾಚರಣೆ ಮಾಡಿ ಉಸ್ತಾದ್ ಜೀ ಅವರ ಭಾವಚಿತ್ರಕ್ಕೆ ಪುಷ್ಾರೆ್ಪಣ ಮಾಡಲಾಯಿತು. ಮಂಜುನಾಥ ದೊಡ್ಡಮನಿ, ಡಾ.ಶ್ರೀಕಾಂತ.ಜಿ.ಕೋನಾಪುರ, ಮುರುಗೇಶ ಅಂಗಡಿ, ಸಚಿನ ಪೂಜಾರಿ, ವಿಜಯ ಹಿರೇಮಠ ಉಪಸ್ಥಿತರಿದ್ದರು. ಸಚಿನ ಪೂಜಾರಿ ಸ್ವಾಗತಿಸಿದರು, ನಿಜಗುಣಿ ಮಂಗಿ ವಂದಿಸಿದರು.ಜೈ ರಾಮಕೃಷ್ಣ.