ಕಲಾವಿದ ರಫಿರವರ ಕಲಾಚಿತ್ರಗಳು ರೇಡಿಯಂಟ್ ಟ್ಯಾಲೆಂಟ್ ಬುಕ್ ಆಫ್ ರೆಕಾರ್ಡ್ಸಗೆ ಸೇರೆ್ಡ
ಬಳ್ಳಾರಿ 13: ಮತ್ತೊಂದು ದಾಖಲೆ ನಿರ್ಮಿಸಿರುವ ಬಳ್ಳಾರಿಯ ಖ್ಯಾತ ಚಿತ್ರಕಲಾವಿದರಾದ ಎ. ಮಹಮ್ಮದ್ ರಫಿ, ಯವರು ಇತ್ತೀಚೆಗೆ ಮಹಾರಾಷ್ಟ್ರದಮುಖ್ಯ ಸಂಪಾದಕ ರೇಡಿಯಂಟ್ ಟ್ಯಾಲೆಂಟ್ ಬುಕ್ ಆಫ್ ರೆಕಾರ್ಡ್ಸ ಅಕೋಲಿ ರಸ್ತೆ,ಮಹಾರಾಷ್ಟ್ರ ಇವರು ಆಯೋಜನೆಮಾಡಿದ್ದ ಚಿತ್ರಕಲಾ ವಿಭಾಗದಲ್ಲಿ .ಮಹಮ್ಮದ್ ರಫಿಯವರ ಹಲವಾರು ಚಿತ್ರಗಳು ಪ್ರಶಂಸೆಗೆ ಪಾತ್ರವಾಗಿದ್ದು , ಇವರ ಅದ್ಭುತ ವರ್ಣ ಸಂಯೋಜನೆ ,ವಿನ್ಯಾಸ ,ಸಾಮಾಜಿಕ ಕಳಕಳಿ, ಸಾಮಾಜಿಕ ಪ್ರಜ್ಞೆ ,ಸಾಮಾಜಿಕ ಚಿಂತನೆ , ಮತ್ತು ವೈಚಾರಿಕ ಚಿಂತನೆಯ ಹಲವಾರು ಚಿತ್ರಗಳು ಸಮಿತಿಯ ಮೆಚ್ಚುಗೆ ಪಡೆಯುವುದರ ಜೊತೆಗೆ " ರೇಡಿಯಂಟ್ ಟ್ಯಾಲೆಂಟ್ ಬುಕ್ ಆಫ್ ರೆಕಾರ್ಡ್ಸ " ಸೇರೆ್ಡ ಆಗುವುದರ ಜೊತೆಗೆ ಬಳ್ಳಾರಿಗೆ ಮತ್ತು ಹುಟ್ಟೂರು ಅರಸೀಕೆರೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಹಿಂದೆ ಅಮೆರಿಕದ ನಾಸ ಸಂಸ್ಥೆಯು ಆಯೋಜನೆ ಮಾಡಿದ್ದ ಪೋಷ್ಟರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲೆಯ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ್ದರು. ಕಲ್ಕತ್ತದಿಂದ ರವೀಂದ್ರ ನಾಥ್ ಟಾಗೋರ್ ಅವಾರ್ಡ್ ,ದೆಹಲಿಯ ಮಣಿಕರ್ಣಿಕ ಗ್ಯಾಲರಿಯಿಂದ ಅವಾರ್ಡ್ ,,, ಅಯೋಧ್ಯೆ ಯಿಂದ ಸ್ವದೇಶಿ ಗ್ಲೋರಿ ಆಫ್ ಅವಾರ್ಡ್ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಮಾಡಬಹುದು , ರೇಡಿಯಂಟ್ ಟ್ಯಾಲೆಂಟ್ ಬುಕ್ ಆಫ್ ರೆಕಾರ್ಡ್ಸ "ಪಡೆದು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ ,.ಈ ಅವಾರ್ಡ್ ನ್ನು ಜಿಲ್ಲೆಯ ದಕ್ಷ ಪೊಲೀಸ್ ಅಧಿಕಾರಿಗಳಾದ ಡಾ :ಶೋಭರಾಣಿ ಪೊಲೀಸ್ ವರಿಷ್ಠಾಧಿಕಾರಿಗಳು ಬಳ್ಳಾರಿ ಇವರು ತಮ್ಮಾ ಕಚೇರಿಯಲ್ಲಿ ಈ ಅವ್ವಾರ್ಡನ್ನು ನೀಡಿ ಅಭಿನಂದಿಸಿದರು , ಅಪಾರ ಅಭಿಮಾನಿಗಳು ,ಸ್ನೇಹಿತರು ,ಬಂಧುಗಳು ಈ ಸಾಧನೆಯನ್ನು ಅಭಿನಂದಿಸಿ ಹಾರೈಸಿದ್ದಾರೆ .ನಾನು ಏನೇ ಪಡದಿದ್ದರು ಈ ಮಣ್ಣಿಗೆ ಮತ್ತು ನನ್ನ ಪ್ರೋತ್ಸಾಹಿಸಿದ ಜಿಲ್ಲಿಗೆ ಸಮರೆ್ಣ ಎಂದು ತಮ್ಮ ಮನದಾಳದ ಮಾತನ್ನು ಹೆಮ್ಮೆ ಯಿಂದ ಹೇಳುತ್ತಾರೆ ಕಲಾವಿದ ರಫಿ.