“ರಂಗ ಸಂಭ್ರಮ” ಕಾರ್ಯಕ್ರಮದಲ್ಲಿ: ಕಲಾವಿದೆ ಬಿ. ಜಯಶ್ರೀ
Artist B. Jayashree at the “Ranga Sambrham” program
ಬೆಳಗಾವಿ 02: ನಾಡಿನ ಹೆಸರಾಂತ ರಂಗಗೀತೆಗಳ ಗಾಯಕಿ, ರಂಗಭೂಮಿ ಕಲಾವಿದೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಬಿ. ಜಯಶ್ರೀ ಹಾಗೂ ಅವರ 12 ಕಲಾವಿದರ ತಂಡ ಇದೇ ಗುರುವಾರ ದಿ.05 ರಂದು ಬೆಳಗಾವಿಗೆ ಆಗಮಿಸಲಿದ್ದು ಅದೇ ದಿನ ಮಧ್ಯಾಹ್ನ 3 ಗಂಟೆಗೆ ನೆಹರೂ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿರುವ “ರಂಗ ಸಂಭ್ರಮ” ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
“ನಾನು ನಮ್ಮವರೊಂದಿಗೆ” ಫೌಂಡೆಶನ್ ಹಾಗೂ ಮಹಿಳಾ ಅಭಿವೃದ್ಧಿ ಮತ್ತು ಸೇವಾ ಸಂಸ್ಥೆ ಜಂಟೀಯಾಗಿ “ರಂಗ ಸಂಭ್ರಮ” ಕಾರ್ಯಕ್ರಮವನ್ನು ಆಯೋಜಿಸಿವೆ, ಖ್ಯಾತ ರಂಗಭೂಮಿ ಗಾಯಕ ರಾಜಪ್ರಭು ಧೋತ್ರೆ ಅವರು ರಂಗಗೀತೆ ಹಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ್ರ ಅಶೋಕ ಚಂದರಗಿ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಶುಭ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟೀ ನಿರ್ದೇಶಕರಾದ ಕೆ.ಎಚ್.ಚೆನ್ನೂರ ಹಾಗೂ ರಂಗ ಚಟುವಟಿಕೆಯ ಪೋಷಕರಾದ ರಮೇಶ ಜಂಗಲ್ ಆಗಮಿಸಲಿದ್ದಾರೆ. ವಿಶೇಷ ಆಮಂತ್ರಿತರಾಗಿ ಜಯ ಭಾರತ ಫೌಂಡೆಶನ್‌ದ ಸಮೀರ ಕಣಬರಗಿ, ಭರತೇಶ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಜಿನಗೌಡ ಶಿಕ್ಷಣ ಸಮೂಹದ ಚೇರಮನ್ ಗೋಪಾಲಗೌಡ ಜಿನಗೌಡ ಉಪಸ್ಥಿತರಿರಲಿದ್ದಾರೆ.
ಭಾರತಿ ಭಟ್, ಲಿಂಗರಾಜ ಶೆಟ್ಟೆನ್ನವರ, ಶ್ರೀಮತಿ ಮಂಗಲಾ ರಾಜೇಂದ್ರ ಮಠದ, ಸೀಮಾ ಕುಲಕರ್ಣಿ, ಪ್ರತಿಭಾ ಕಳ್ಳಿಮಠ, ಶ್ರೀಮತಿ ರೋಹಿನಿ ಕರಜಗಿಮಠ, ಸುರೇಶ ಚಂದರಗಿ ಹಾಗೂ ಖುಷಿ ಢವಳಿ ತಂಡದವರಿಂದ ರಂಗಗೀತೆಗಳ ಹಾಡುಗಾರಿಕೆಯೂ ರಂಗ ಸಂಭ್ರಮದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ರಂಗಾಸಕ್ತರು ಭಾಗವಹಿಸಬೇಕೆಂದು ನಾನು ನಮ್ಮವರೊಂದಿಗೆ ಅಧ್ಯಕ್ಷೆ ಸರ್ವಮಂಗಳಾ ಅರಳಿಮಟ್ಟಿ ಹಾಗೂ ಮಹಿಳಾ ಅಭಿವೃದ್ಧಿ ಮತ್ತು ಸೇವಾ ಸಂಸ್ಥೆಯ ನಿರ್ದೇಶಕಿ ಅಶ್ವಿನಿ ಕರಿಗೊನ್ನವರ(ಚಂದರಗಿ) ಕೋರಿದ್ದಾರೆ.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 