ಕೃತಕ ಬುದ್ಧಿಮತ್ತೆ ಜೀವನದ ಅವಿಭಾಜ್ಯ ಅಂಗ: ನಿತಿನ

 ಕೃತಕ ಬುದ್ಧಿಮತ್ತೆ ಜೀವನದ ಅವಿಭಾಜ್ಯ ಅಂಗ: ನಿತಿನ   Artificial intelligence is an integral part of life: Nitin

ಲೋಕದರ್ಶನ ವರದಿ 

ಕೃತಕ ಬುದ್ಧಿಮತ್ತೆ ಜೀವನದ ಅವಿಭಾಜ್ಯ ಅಂಗ: ನಿತಿನ   

ದೇವರಹಿಪ್ಪರಗಿ  12: ಕೃತಕ ಬುದ್ಧಿಮತ್ತೆ  ಎಂಬುದು ಹೃದಯವಿಲ್ಲದ ಮೆದುಳು. ಆದರೆ, ಕೃತಕ ಬುದ್ಧಿಮತ್ತೆ ಜೀವನದ ಅವಿಭಾಜ್ಯ ಭಾಗವಾಗಿದೆ. ಮನುಷ್ಯ ಒಂದಿಲ್ಲೊಂದು ಬಗೆಯಲ್ಲಿ ಕೃತಕ ಬುದ್ಧಿಮತ್ತೆಯ ಜಾಲಕ್ಕೆ ಸಿಲುಕಿದ್ದಾನೆ ಎಂದು ಉಪನ್ಯಾಸಕರು ಹಾಗೂ ಫೀನಲ್ಯಾಂಡ ನ್ವೆಲಾಪ್ ಟೆಕ್ನಾಲಜಿ ಸಂಸ್ಥಾಪಕರಾದ ನಿತಿನಕುಮಾರ ನಾಡಗೌಡ ಹೇಳಿದರು.ಪಟ್ಟಣದ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಸೈನಿಕ ನೆಲೆ ಪ್ರಕಾಶನ ಬೆಂಗಳೂರು. ಮಾಜಿ ಯೋಧ ರಾಜೇಂದ್ರ ನಾಡಗೌಡರ ಸಂಪಾದಕತ್ವದಲ್ಲಿ ನಮ್ಮ ಊರು ನಮ್ಮ ಹೆಮ್ಮೆ ದೇವರ ಹಿಪ್ಪರಗಿ ಗ್ರಂಥ ಲೋಕಾರ​‍್ಣ ಸಮಾರಂಭದ ಮುಖ್ಯ ಅತಿಥಿಗಳಾಗಿ ಉಪನ್ಯಾಸ ನೀಡಿದ ಅವರು,ಮನುಷ್ಯನ ಬುದ್ದಿ ವಿಕಾಸವಾಗುತ್ತಿದ್ದಂತೆ ಯಂತ್ರ ಹಾಗೂ ತಂತ್ರಜ್ಞಾನಗಳ ಆವಿಷ್ಕಾರಗಳು ನಡೆಯುತ್ತಲೇ ಇವೆ.  

ದೇವರ ಹಿಪ್ಪರಗಿ ನನ್ನ ಜನ್ಮಭೂಮಿಯಾದರೆ,ಫೀನಲ್ಯಾಂಡ ದೇಶ ಕರ್ಮ ಭೂಮಿಯಾಗಿದೆ.ಭವಿಷ್ಯದ ತಂತ್ರಜ್ಞಾನ ಎಂದೇ ಭಾವಿಸಿರುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಮಾನವಕುಲಕ್ಕೆ ಎದುರಾಗಬಹುದಾದ ಅಪಾಯಗಳು ಮತ್ತು ಅನುಕೂಲತೆಗಳ ಬಗ್ಗೆ ಮಾತನಾಡಿದರು. ನಮ್ಮ ಊರು ನಮ್ಮ ಹೆಮ್ಮೆ ಪುಸ್ತಕ ನಮ್ಮೂರಿನ ಇತಿಹಾಸದ ಪುಟಗಳ ಅನಾವರಣ ಆಗಿದೆ. ಓದುವ ಹವ್ಯಾಸ ಬೆಳೆಸಿಕೊಂಡು ಉತ್ತಮ ಸಮಾಜಕ್ಕೆ ಎಲ್ಲರೂ ಕೈಜೋಡಿಸಬೇಕಾದ ಅನಿವಾರ್ಯತೆ ಇದೆ ಎಂದರು.ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರು ಮಾತನಾಡಿ, ಆಧುನಿಕ ಯುಗದಲ್ಲಿ ಪುಸ್ತಕ ಓದುಗರ ಸಂಖ್ಯೆ ಕುಗ್ಗುತ್ತಿದೆ.  

ಸಂಪಾದಕರಾದ ರಾಜೇಂದ್ರ ನಾಡಗೌಡ ಅವರು ದೇವರಹಿಪ್ಪರಗಿ ತಾಲೂಕಿನ ಇತಿಹಾಸ, ಶರಣರ ಜನ್ಮಭೂಮಿಯನ್ನು ಹಾಗೂ ಅನೇಕ ಲೇಖಕರು ಇದಕ್ಕೆ ಪೂರಕವಾಗಿ ಬರೆದು ಓದುಗರಿಗೆ ನೀಡಿದ್ದಾರೆ. ನಮಗೂ ಇತಿಹಾಸ ತಿಳಿಯಲು ಅನುಕೂಲವಾಗುತ್ತದೆ ಎಂದರು. ಪ್ರಾಸ್ತಾವಿಕವಾಗಿ ನಮ್ಮ ಊರು ನಮ್ಮ ಹೆಮ್ಮೆ ದೇವರಹಿಪ್ಪರಗಿ ಪುಸ್ತಕದ ಸಂಪಾದಕರಾದ ರಾಜೇಂದ್ರ ನಾಡಗೌಡ ಅವರು ಮಾತನಾಡಿ,ಪುಸ್ತಕದಲ್ಲಿ  ನಮ್ಮೂರ ಇತಿಹಾಸದ ವಿಶೇಷತೆಯನ್ನು ಹಾಗೂ ಇತರ ಲೇಖನಗಳ ಮೂಲಕ  ಪರಿಚಯಿಸಲು ಪ್ರಯತ್ನಿಸಿದ್ದೇನೆ ಎಂದು ಹೇಳಿ ಗಣ್ಯರನ್ನು ಸ್ವಾಗತಿಸಿದರು.ಕೃತಿಯನ್ನು ವಿಶ್ರಾಂತ ತಹಸೀಲ್ದಾರ್ ಆರ್‌.ಆರ್‌.ಮಣ್ಣೂರ ಅವರು ಪರಿಚಯಿಸಿದರು.ಸಮಾರಂಭದ ದಿವ್ಯ ಸಾನಿಧ್ಯವನ್ನು ಸಿಂದಗಿ ಸದ್ಗುರು ಭೀಮಾಶಂಕರ ಸಂಸ್ಥಾನಮಠದ ಪೀಠಾಧೀಶ್ವರ ಪ.ಪೂ   ದತ್ತಪ್ಪಯ್ಯ ಸ್ವಾಮೀಜಿಗಳು ವಹಿಸಿ ನಾಡಗೌಡರ ಕುಟುಂಬ, ಸಿಂದಗಿ ಭೀಮಶಂಕರ ಮಠಕ್ಕೆ ಮೂರು ತಲೆಮಾರಿನಿಂದಲೂ ನಂಟಿದೆ ಎಂದು ಸಂಪಾದಕರಿಗೆ ಅಭಿನಂದಿಸಿದರು.ಸಾನಿಧ್ಯವನ್ನು ಸ್ಥಳೀಯ ಮಠದ   ಮಡಿವಾಳೇಶ್ವರ ಶ್ರೀಗಳು ವಹಿಸಿ ಆಶೀರ್ವಚನ ನೀಡಿದರು. 

ಊರ ಗೌರವ ಪುರಸ್ಕೃತರಾದ ಸುಷ್ಮಾ ನಾಯಕ್, ವಿಜಯಲಕ್ಷ್ಮಿ ಮಟಗಾರ,ದೇಶಂಸ, ಮುರುಘೇಂದ್ರ ವಾಲಿ ಹಾಗೂ ದಾನಪ್ಪ ಸಜ್ಜನ ಅವರಿಗೆ ನಮ್ಮ ಊರು, ನಮ್ಮ ಹೆಮ್ಮೆ ದೇವರಹಿಪ್ಪರಗಿ ಸಂಪಾದಕರಿಂದ ಊರ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ವಿಶ್ರಾಂತ ಪ್ರಾಚಾರ್ಯರಾದ  ಡಾ. ಮಹಾಂತೇಶ ಗುಬ್ಬೇವಾಡ, ವಿಜಯಪುರದ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಅಧ್ಯಕ್ಷರಾದ ಸುರೇಶ ದೇಸಾಯಿ, ನಿವೃತ್ತ ಹೆಸ್ಕಾಂ ಅಧಿಕಾರಿ ಸದಾನಂದ ಬಬಲೇಶ್ವರ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು ಹಾಗೂ ನಾಡಗೌಡ ಪರಿವಾರದ ಅಭಿಮಾನಿಗಳು ಉಪಸ್ಥಿತರಿದ್ದರು. ವೈಷ್ಣವಿ ಪ್ರಾರ್ಥನೆ ಹಾಡಿದರು. ನಾಗರಾಜ ಬಿರಾದಾರ ನಿರೂಪಿಸಿದರು.ಶ್ರೀಧರ ನಾಡಗೌಡ ವಂದಿಸಿದರು.