ನೈಪುಣ್ಯತೆ ಇಲ್ಲದೆ ಕಲೆ ಅಪೂರ್ಣ : ಡಾ. ಅಮರೇಶ್ ನುಗಡೋಣಿ

ನೈಪುಣ್ಯತೆ ಇಲ್ಲದೆ ಕಲೆ ಅಪೂರ್ಣ : ಡಾ. ಅಮರೇಶ್ ನುಗಡೋಣಿ  Art is incomplete without skill: Dr. Amaresh Nugadoni

ಬಳ್ಳಾರಿ 11:  ನಗರದಲ್ಲಿ ಯಾವುದೇ ಕಲಾ ಪ್ರಕಾರದಲ್ಲಾದರೂ ಸಂಪೂರ್ಣ ಮನಸ್ಸು ತೊಡಗಿಸಿಕೊಂಡು ನೈಪುಣ್ಯತೆ ಸಾಧಿಸಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಮರೇಶ್ ನುಗಡೋಣಿ ಅಭಿಪ್ರಾಯಪಟ್ಟರು.ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ಬೆಳಕು ಸಾಹಿತ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಗಡಿನಾಡು ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕಲೆ ಫ್ಯಾಷನ್ ಆಗದೆ ಕಲಾತ್ಮಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.“ಎಷ್ಟು ಬರೆದೆವು ಎಂಬುದಕ್ಕಿಂತ, ಅದು ಸಮಾಜಕ್ಕೆ ಎಷ್ಟು ಕಾಲ ಪ್ರಸ್ತುತವಾಗಿರುತ್ತದೆ ಎಂಬುದು ಮುಖ್ಯ. ಸಾಹಿತ್ಯವು ಲೋಕದ ಅನಿಷ್ಟತೆಯನ್ನು ಪ್ರಶ್ನಿಸುವಂತಿರಬೇಕು. ಶಿವಶರಣರ ವಚನಗಳಲ್ಲಿ ಅಂತಹ ಮೌಲ್ಯಗಳನ್ನು ಕಾಣಬಹುದು” ಎಂದು ಹೇಳಿದರು.

ಸಮಾರಂಭಗಳಲ್ಲಿ ಸನ್ಮಾನ ಪಡೆಯುವುದೇ ಮುಖ್ಯವಲ್ಲ, ಸಮಾಜದಲ್ಲಿ ದೀರ್ಘಕಾಲ ಗುರುತಿಸಿಕೊಳ್ಳುವಂತಹ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದ ಅವರು, ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ, ಜನಪ್ರತಿನಿಧಿಗಳು ಮಾತ್ರವಲ್ಲದೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಚೋರನೂರು ಕೊಟ್ರ​‍್ಪ ಮಾತನಾಡಿ, ಗಡಿ ಎಂಬುದು ಭೌಗೋಳಿಕವಾಗಿದ್ದರೂ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಯಾವುದೇ ಗಡಿ ಇಲ್ಲ ಎಂದರು.ಸಮ್ಮೇಳನದ ಅಧ್ಯಕ್ಷತೆಯನ್ನು ಯಲ್ಲನಗೌಡ ಶಂಕರಬಂಡೆ ವಹಿಸಿದ್ದರು. ಟ್ರಸ್ಟ್‌ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ಅನುದಾನವಿಲ್ಲದೆ ದಾನಿಗಳ ಸಹಕಾರದಿಂದಲೇ ಸಂಸ್ಥೆ ಕಲಾವಿದರ ಪ್ರೋತ್ಸಾಹ ಕಾರ್ಯ ಮುಂದುವರಿಸುತ್ತಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಬೆಳಕು ಸಂಸ್ಥೆಯ ಗೌರವ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಹಿರೇಮಠ ಅವರು ಗೀತಾಮೃತ ಕೃತಿಯನ್ನು ಲೋಕಾರೆ​‍್ಣ ಮಾಡಿದರು.ಕಾರ್ಯಕ್ರಮದಲ್ಲಿ ಅನೇಕ ಗಣ್ಯರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ನಡೆಯಿತು. ಜೊತೆಗೆ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.