ಸ್ಮಾರ್ಟಸಿಟಿಯಲ್ಲಿ ಆರ್ಟ ಗ್ಯಾಲರಿ ಅಗತ್ಯವಿದೆ: ಡಿ.ಮಹೇಂದ್ರ

ಬೆಳಗಾವಿ, 27: ಬೆಳಗಾವಿಯ ಪರಿಸರ ಸಾಂಸ್ಕೃತಿಕ ಪರಂಪರೆಯಿಂದ ಕೂಡಿದೆ. ಇಲ್ಲಿ ಭಾಷಾ ಬಾಂಧವ್ಯ ಬೆಳೆಸಲು ಕಲೆಯ ಮಾದ್ಯಮ ಪೂರಕವಾಗಿದೆ. ಇಂತಹ ಸ್ಮಾರ್ಟ ಸಿಟಿಯಲ್ಲಿ ಕಲಾ ಗ್ಯಾಲರಿಯ ಅಗತ್ಯವಿದೆಯೆಂದು ಕನರ್ಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾದ ಡಿ.ಮಹೇಂದ್ರ ಅವರು ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕನರ್ಾಟಕ ಲಲಿತಕಲಾ ಅಕಾಡೆಮಿಯ ಬೆಳಗಾವಿ ಜಿಲ್ಲೆಯ ಚಿತ್ರಕಲಾವಿದರಿಗಾಗಿ ಹೊಸ ಆಲೋಚನೆ ಹಾಗೂ ಹೊಸ ಸಾಧ್ಯತೆ ಶಿಷರ್ಿಕೆಯಡಿಯಲ್ಲಿ (ನ.24) ರಂದು ನಡೆದ ಆಪ್ತ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಕಾಡೆಮಿ ಸದಸ್ಯ ಪ್ರಾ. ಜಯಾನಂದ ಮಾದರ ಅವರು ಮಾತನಾಡಿ, ಅಕಾಡೆಮಿ ಕ್ರಿಯಾ ಯೋಜನೆಯನ್ನು ಪ್ರಸ್ತಾಪಿಸಿ ಕೇಂದ್ರ ಕಛೇರಿಯಲ್ಲಿಯೇ ಕುಳಿತು ಕೆಲಸ ಮಾಡದೇ ಅಕಾಡೆಮಿಯ ಆಶೋತ್ತರಗಳು ಗಡಿ ಹಾಗೂ ಗ್ರಾಮೀಣ ಭಾಗದ ಕಲಾವಿದರಿಗೆ ತಲುಪಿಸುವ ಉದ್ದೇಶದಿಂದ ಲಲಿತಕಲಾ ಅಕಾಡೆಮಿ ನೂತನ ಆಲೋಚನೆಗಳನ್ನು ಹೊತ್ತು ತಂದಿದೆ ಎಂದು ಹೇಳಿದರು.

ಅಂತರಾಷ್ಟ್ರೀಯ ಕಲಾವಿದ ಬಾಬುರಾವ ನಿಡೋಣಿ, ದಿಲೀಪ ಕಾಳೆ, ಡಾ. ಪಿ.ಬಿ. ಗಮಾಣಿ, ವರ್ಣಕಲಾ ಸಂಸ್ಥೆಯ ಅಧ್ಯಕ್ಷ ನಾಗೇಶ ಚಿಮರೋಳ, ಲಗಮಣ್ಣ ಕಾಳೆ, ಶಂಕರ ಕಟ್ಟಿಕಾರ, ಮೊನಿಕಾ ಹಲವಾಯಿ ಗೋಕಾಕ ಸಿದ್ಧಾರ್ಥ ಲಲಿತಕಲಾ ಮಹಾವಿದ್ಯಾಲಯದ ಕಲಾ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.